ಜಿಲ್ಲೆ

ಕೋರ್ಟ್ ಅನುಮತಿ ಪಡೆದು ಧಾರವಾಡಕ್ಕೆ ಆಗಮನ; ಶಾಸಕ ವಿನಯ ಕುಲಕರ್ಣಿ ಮತದಾನ

ಮಂಜುನಾಥ ಅಂಗಡಿ

ಧಾರವಾಡ: ಕಳೆದ ಮೂರುವರೆ ವರ್ಷಗಳಿಂದ ಜಿಲ್ಲಾ ಪ್ರವೇಶಕ್ಕೆ ನಿರ್ಬಂಧವಿದ್ದ ಶಾಸಕ ವಿನಯ ಕುಲಕರ್ಣಿ ಮಂಗಳವಾರ ನಗರಕ್ಕೆ ಆಗಮಿಸಿ ಮತದಾನ ಮಾಡಿದರು. ನ್ಯಾಯಾಲಯದ ವಿಶೇಷ ಅನುಮತಿಯೊಂದಿಗೆ ಜಿಲ್ಲೆ ಪ್ರವೇಶಿಸಿ ನಗರದ ಸಪ್ತಾಪುರದಲ್ಲಿರುವ ಶಾರದಾ ಹೈಸ್ಕೂಲ್ ಮತಗಟ್ಟೆಯಲ್ಲಿ ಹಕ್ಕು ಚಲಾಯಿಸಿದರು.
ಮತದಾನಕ್ಕೆ ಅವಕಾಶ ಕೋರಿ ವಿನಯ ಕುಲಕರ್ಣಿ ಸೋಮವಾರ ಬೆಂಗಳೂರಿನ ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಅವರ ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿತ್ತು. ಆದರೆ, ವಿಚಾರಘೆಅ ಹಂತದಲ್ಲಿರುವ ಇಂಥ ಹಲವು ಪ್ರಕರಣಗಳಲ್ಲಿ,ಮತದಾನದ ಹಕ್ಕು ನೀಡಿದ ಉದಾಹರಣೆಗಳಿವೆ. ಇದನ್ನು ಉದಾಹರಿಸಿ ವಿನಯ ಹೈಕೋರ್ಟ್ಗೆ ಮರುಪರಿಶೀಲನೆ ಅರ್ಜಿ ಸಲ್ಲಿಸಿದ್ದರು. ಅವರ ಅರ್ಜಿಯನ್ನು ಪುರಸ್ಕರಿಸಿರುವ ನ್ಯಾಯÁಲಯ, ಮಂಗಳವಾರ ಮಧ್ಯಾಹ್ನ ಮತದಾನಕ್ಕೆ ಅವಕಾಶ ನೀಡಿತ್ತು.
ಶಿಗ್ಗಾಂವಿ, ಹುಬ್ಬಳ್ಳಿ ಮÁರ್ಗವಾಗಿ ವಿನಯ ಕುಲಕರ್ಣಿ ಸಂಜೆ ೫.೩೦ರ ಸುಮÁರಿಗೆ ಧಾರವಾಡದ ಶಾರದಾ ಹೈಸ್ಕೂಲ್ ಮತಗಟ್ಟೆಗೆ ಆಗಮಿಸಿದರು. ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಹು-ಧಾ ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ್ ಹಾಜರಿದ್ದು, ಪೊಲೀಸ್ ಸಿಬ್ಬಂದಿಗೆ ಭದ್ರತೆಗೆ ನಿರ್ದೇಶನ ನೀಡಿದರು. ವರ್ಷಗಳ ನಂತರ ನಗರಕ್ಕೆ ಆಗಮಿಸಿದ ತಮ್ಮ ನಾಯಕನನ್ನು ನೋಡಲು ಭಾರಿ ಸಂಖ್ಯೆಯಲ್ಲಿ ಕಾರ್ಯಕರ್ತರು ಸೇರಿದ್ದರು. ಅಭಿಮಾನಿಗಳು ಹಾಗೂ ಕಾರ್ಯಕರ್ತರು ವಿನಯ ಪರ ಜೈಕಾರ ಕೂಗಿ ಸಂಭ್ರಮಿಸಿದರು. ಎಚ್ಚೆತ್ತ ಪೊಲೀಸ್ ಹಾಗೂ ಕೇಂದ್ರ ಭದ್ರತಾ ಪಡೆಯ ಸಿಬ್ಬಂದಿ ಸಾರ್ವಜನಿಕರನ್ನು ಮತಗಟ್ಟೆಯ ೧೦೦ ಮೀಟರ್ ಹೊರಗೆ ಕಳುಹಿಸಿದರು.
ಮತದಾನ ಶಾಸಕ ವಿನಯ ಕುಲಕರ್ಣಿ ಮಾತನಾಡಿ, ಸುಮಾರು ೪ ವರ್ಷಗಳ ಬಳಿಕ ಧಾರವಾಡಕ್ಕೆ ಬಂದಿದ್ದು, ಸಂತೋಷ ಮತ್ತು ದುಃಖ ಎರಡೂ ಆಗುತ್ತಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ನನಗೆ ನಾಮಪತ್ರ ಸಲ್ಲಿಸಲೂ ಅವಕಾಶ ಸಿಕ್ಕಿರಲಿಲ್ಲ. ನಂತರ ಮತದಾನಕ್ಕೂ ಅವಕಾಶ ಸಿಗಲಿಲ್ಲ. ಆದಾಗ್ಯೂ ಜನತೆ ಗೆಲ್ಲಿಸಿ ಶಾಸಕನನ್ನಾಗಿ ಮಾಡಿದ್ದಾರೆ. ೨೫ ವರ್ಷಗಳ ರಾಜಕೀಯ ಜೀವನದಲ್ಲಿ ಧಾರವಾಡದ ಜನ ಅಪಾರ ಅಭಿಮÁನ ಇಟ್ಟಿದ್ದಾರೆ. ಕ್ಷೇತ್ರದ ಜನರ ಅಭಿಮÁನ ಮರೆಯುವುದಿಲ್ಲ. ಧಾರವಾಡದಲ್ಲಿ ಮತದಾನ ಮಾಡಲು ಅವಕಾಶ ಸಿಕ್ಕಿರುವುದು ನನ್ನ ಪ್ರಕರಣದಲ್ಲಿ ಸಿಕ್ಕ ಮೊದಲ ಜಯ. ವಿನೋದ ಅಸೂಟಿ ಚುನಾವಣೆಯಲ್ಲಿ ಮತದಾನಕ್ಕೆ ಅವಕಾಶ ಸಿಕ್ಕಿದೆ. ಅವರ ಗೆಲುವು ಖಚಿತ ಎಂದರು.