ಜಿಲ್ಲೆ

ಗುಣಮಟ್ಟದ ರಸ್ತೆ ನಿರ್ಮಾಣಕ್ಕೆ ಸೂಚಿಸಿದ ಶಾಸಕ ಟೆಂಗಿನಕಾಯಿ



ಹುಬ್ಬಳ್ಳಿ : ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ವಿಧಾನಸಭೆ ಕ್ಷೇತ್ರದ 44ನೇ ವಾರ್ಡ್​ನ ಯುರೇಕಾ ಕಾಲನಿ ಹಾಗೂ ಮಧುರ ಚೇತನಾ ಕಾಲನಿಯಯಲ್ಲಿ ಸಿಸಿ ರಸ್ತೆ ನಿರ್ಮಾಣ ಕಾಮಗಾರಿಗೆ ಶಾಸಕ ಮಹೇಶ ಟೆಂಗಿನಕಾಯಿ ಸೋಮವಾರ ಭೂಮಿಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಟೆಂಗಿನಕಾಯಿ, ಈ ಹಿಂದೆ ವಾರ್ಡ್ ಭೇಟಿ ಸಮಯದಲ್ಲಿ ಇಲ್ಲಿನ ಜನರು ರಸ್ತೆ ನಿರ್ಮಾಣಕ್ಕೆ ಬೇಡಿಕೆ ಇಟ್ಟಿದ್ದರು. ಇದೀಗ ಸಿಸಿ ರಸ್ತೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಲಾಗಿದೆ. ಅತ್ಯುತ್ತಮ ರಸ್ತೆ ನಿರ್ವಣಕ್ಕೆ ಅಧಿಕಾರಿಗಳಿಗೆ ಹಾಗೂ ಗುತ್ತಿಗೆದಾರರಿಗೆ ಸೂಚಿಸಿದ್ದಾಗಿ ತಿಳಿಸಿದರು.
ಪಾಲಿಕೆ ಸದಸ್ಯೆ ಉಮಾ ಮುಕುಂದ, ಪ್ರಮುಖರಾದ ನಿತಿನ್ ಕುಲಕರ್ಣಿ, ಸುಧೀರ ಜೈನ್, ಗಣಶಾಮ ಸಿದ್ದಲಿಂಗ, ಡಾ. ವಮಾ, ಪುಲ್ಚಂದ ಜೈನ್, ವಿನೋಧ ಪಟವಾ, ನಿಖಿಲ ವಾಂಘಿ, ಮೇಘಾ ಚಾಗಪುರ, ಸೋಮನಾಥ ಮೆಹರವಾಡೆ, ತಾನವಿ ಮೆಹರವಾಡೆ, ಗೀತಾ ಕುಬಸದ, ರಘುರಾಜ ಇಬ್ರಾಂಹಿಂಪುರ, ಕಸುನಂದಾ ಚೆನ್ನಿ, ಬೀನಾ ಕುಮಾರಿ ಹಾಗೂ ಇತರರು ಉಪಸ್ಥಿತರಿದ್ದರು.

---------