ಜಿಲ್ಲೆ

ಎಸ್ ಎಸ್ ಕೆ ಸಮಾಜದಿಂದ ಶಾಸಕರಿಗೆ ಸತ್ಕಾರ

ಹುಬ್ಬಳ್ಳಿ: ಎಸ್.ಎಸ್.ಕೆ. ಸಮಾಜದ ನಿಗಮಕ್ಕಾಗಿ ಅಧಿವೇಶನದಲ್ಲಿ ಧ್ವನಿ ಎತ್ತಿದ ಸೆಂಟ್ರಲ್ ವಿಧಾನಸಭಾ ಕ್ಷೇತ್ರದ ಶಾಸಕ ಮಹೇಶ ಟೆಂಗಿನಕಾಯಿ ಅವರಿಗೆ ಸಮಾಜ ಬಾಂಧವರು ಸತ್ಕರಿಸಿ ಅಭಿನಂದಿಸಿದರು.

ಕಳೆದ 30 ವರ್ಷಗಳಿಂದ ಎಸ್ ಎಸ್ ಕೆ ಸಮಾಜದ ಪರವಾಗಿ ಯಾರೊಬ್ಬರೂ ಅಧಿವೇಶನದಲ್ಲಿ ಧ್ವನಿ ಎತ್ತಿರಲಿಲ್ಲ. ಕ್ಷೇತ್ರದ ಶಾಸಕರು ಸಮಾಜದ ಪರವಾಗಿ ಮಾತನಾಡಿದ್ದಕ್ಕೆ ಋಣಿಯಾಗಿದ್ದೇವೆ ಎಂದು ತಿಳಿಸಿದರು.

ಯುವ ಮುಖಂಡ ವೆಂಕಟೇಶ್ ಕಾಟವೆ ಮಾತನಾಡಿ, ಶಾಸಕ ಮಹೇಶ ಟೆಂಗಿನಕಾಯಿ ಅವರು ಸಮಾಜದ ಬೇಡಿಕೆಗೆ ಸ್ಪಂದಿಸಿದ್ದಾರೆ. ಸದನದಲ್ಲಿ ಪ್ರಸ್ತಾಪಿಸಿದ್ದಾರೆ. ಅವರಿಗೆ ಇನ್ನೂ ಹೆಚ್ಚಿನ ಸ್ಥಾನಮಾನಗಳು ಸಿಗಲಿ, ಎಸ್ಎಸ್ಕೆ ಸಮಾಜದ ಜನಸಂಖ್ಯೆ ಹುಬ್ಬಳ್ಳಿ -ಧಾರವಾಡದಲ್ಲಿ ಹೆಚ್ಚಿದೆ. ರಾಜ್ಯದಲ್ಲಿ ಹನ್ನೆರಡು ಲಕ್ಷಕ್ಕಿಂತ ಹೆಚ್ಚು ಜನ ಇದ್ದಾರೆ. ಶೀಘ್ರ ನಿಗಮ ಮಂಡಳಿ ಸ್ಥಾಪನೆಯಾಗಿ ಸರ್ಕಾರದಿಂದ ಅನುದಾನ ಸಿಗಲಿ ಎಂದು ಆಶಿಸಿದರು.

ಕುಂದಗೋಳ ಶಾಸಕ ಎಂ.ಆರ್. ಪಾಟೀಲ್, ಧುರೀಣರಾದ ಪ್ರಕಾಶ ಬುರಬುರೆ, ಮಿಥುನ್ ಚವಾಣ, ಪ್ರವಿಣ ಪವಾರ, ದೇವದಾಸ ಹಬೀಬ, ಮಂಜು ಊಟವಾಲೆ, ಸಚಿನ್ ಪೂಜಾರಿ, ಆಕಾಶ್ ರಂಗ್ರೆಜ್, ಹೀರಾ ಸೋಳಂಕಿ, ಸುನಿಲ್ ಕಾಟವೆ, ಅಮಿತ್ ಇರಕಲ್, ಅಮೃತ್ ಪವಾರ್, ಕುಶಾಲ್ ಪೂಜಾರ್, ಇತರರು ಉಪಸ್ಥಿತರಿದ್ದರು.