ಜಿಲ್ಲೆ

ಬಿಸಿಎಂ ಹಾಸ್ಟೆಲ್​ಗಳಿಗೆ ಶಾಸಕ ಟೆಂಗಿನಕಾಯಿ ಭೇಟಿ

ಆನಂದಕುಮಾರ ಅಂಗಡಿ

ಹುಬ್ಬಳ್ಳಿ : ಇಲ್ಲಿನ ಗೋಕುಲ ರಸ್ತೆ, ನ್ಯೂ ಕಾಟನ್ ಮಾರ್ಕೆಟ್ ಮತ್ತು ಗೋಪನಕಪ್ಪದ ಬಿಸಿಎಂ ಸರ್ಕಾರಿ ಹಾಸ್ಟೆಲ್​ಗಳಿಗೆ ಬುಧವಾರ ಮಧ್ಯಾಹ್ನ ದಿಢೀರ ಭೇಟಿ ನೀಡಿದ ಶಾಸಕ ಮಹೇಶ ಟೆಂಗಿನಕಾಯಿ, ಹಾಸ್ಟೆಲ್​ಗಳಲ್ಲಿನ ಅಡುಗೆ ಮನೆ, ಶೌಚಗೃಹಗಳನ್ನು ಪರಿಶೀಲಿಸಿದರು.

ಈ ಸಂದರ್ಭದಲ್ಲಿ ಯಾವುದೇ ಹಾಸ್ಟೆಲ್​ಗಳಲ್ಲಿ ವಾರ್ಡನ್​ಗಳು ಇರಲಿಲ್ಲ. ಹಾಸ್ಟೆಲ್​ಗಳಲ್ಲಿದ್ದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ವಿದ್ಯಾರ್ಥಿಗಳೊಂದಿಗೆ ಶಾಸಕರು ಮಾತನಾಡಿದರು.

ಈ ಸಂದರ್ಭದಲ್ಲಿ ವಿದ್ಯಾರ್ಥಿ, ವಿದ್ಯಾರ್ಥಿನಿಯರು ನಿತ್ಯ ನೀಡುವ ಊಟದ ಕುರಿತು ಅಸಮಾಧಾನ ವ್ಯಕ್ತಪಡಿಸಿದರು. ಸಾಕಷ್ಟು ಶೌಚಗೃಹಗಳು ಇಲ್ಲದಿರುವ ಬಗ್ಗೆ ಆರೋಪಿಸಿದ ವಿದ್ಯಾರ್ಥಿಗಳು, ಇದರಿಂದಾಗಿ ಬೆಳಗ್ಗೆ ಬೇಗ ಕಾಲೇಜಿಗೆ ಹೋಗಲು ಕಷ್ಟವಾಗುತ್ತಿದೆ. ಕಾಲೇಜಿನಿಂದ ವಾಪಸ್ಸಾದ ನಂತರ ಸ್ನಾನ ಮಾಡಬೇಕಾದ ಅನಿವಾರ್ಯತೆ ಇದೆ ಎಂದು ಅಳಲು ತೋಡಿಕೊಂಡರು.

ಸಂಬಂಧಿಸಿದ ಅಧಿಕಾರಿಗಳೊಂದಿಗೆ ಈ ಕುರಿತು ರ್ಚಚಿಸಿ, ಆದಷ್ಟು ಶೀಘ್ರ ಸಮಸ್ಯೆ ಬಗೆಹರಿಸುವುದಾಗಿ ಶಾಸಕ ಟೆಂಗಿನಕಾಯಿ ಭರವಸೆ ನೀಡಿದರು.

ರವಿ ನಾಯಕ, ಈಶ್ವರಗೌಡ ಪಾಟೀಲ ಹಾಗೂ ಇತರರು ಇದ್ದರು.