ಹುಬ್ಬಳ್ಳಿ : ಪೌರ ಕಾರ್ವಿುಕರ ದಿನಾಚರಣೆ ಅಂಗವಾಗಿ ಇಲ್ಲಿನ ಬಸವೇಶ್ವರ ನಗರದಲ್ಲಿ ಶಾಸಕ ಮಹೇಶ ಟೆಂಗಿನಕಾಯಿ ಅವರು ತಮ್ಮ ಗೃಹ ಕಚೇರಿಯಲ್ಲಿ ಪೌರ ಕಾರ್ವಿುಕರನ್ನು ಸೋಮವಾರದಂದು ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಮಹೇಶ ಟೆಂಗಿನಕಾಯಿ, ಆರೋಗ್ಯವಂತ ಸಮಾಜ ನಿಮಾಣ ಮಾಡುವಲ್ಲಿ ಪೌರ ಕಾರ್ವಿುಕರ ಪಾತ್ರ ಪ್ರಮುಖವಾದದ್ದು. ಪೌರ ಕಾರ್ವಿುಕರ ಹಿತ ಕಾಪಾಡಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು.
ಪೌರ ಕಾರ್ವಿುಕರು ವೈಯಕ್ತಿಕ ಆರೋಗ್ಯಕ್ಕೆ ಗಮನ ಹರಿಸುವ ಜತೆಗೆ ನಗರದ ಆರೋಗ್ಯ ಕಾಪಾಡಲು ಒತ್ತು ನೀಡಬೇಕು. ಪ್ರಧಾನಿ ನರೇಂದ್ರ ಮೋದಿ ಅವರು ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಿದ್ದು, ಸ್ವಚ್ಛ ಭಾರತ ಅಭಿಯಾನದ ಮೂಲಕ ಬಹುದೊಡ್ಡ ಬದಲಾವಣೆ ತಂದಿದ್ದಾರೆ. ಪ್ರತಿಯೊಬ್ಬರೂ ಪ್ರಧಾನಿ ಮೋದಿ ಅವರು ಕಂಡ ಕನಸನ್ನು ನನಸು ಮಾಡುವ ನಿಟ್ಟಿನಲ್ಲಿ ಸ್ವಚ್ಛ ಹುಬ್ಬಳ್ಳಿ ಸ್ವಾಸ್ಥ್ಯ ಹುಬ್ಬಳ್ಳಿಯನ್ನು ನಿಮಾಣ ಮಾಡೋಣ ಎಂದರು.
ಡಾ. ಹಿರೇಗೌಡರ, ವಿಶ್ವನಾಥ ಅಂಗಡಿ, ಚೇತನ ಭಾರದ್ವಾಡ, ಪ್ರವೀಣ ಪವಾರ, ವಿಜಯ ಬಾಕಳೆ, ಸಾಯಿನಾಥ ಧಲಬಂಜನ ಹಾಗೂ ಇತರರು ಉಪಸ್ಥಿತರಿದ್ದರು.