ಜಿಲ್ಲೆ

ಮುಡಾ ಮಾಜಿ ಆಯುಕ್ತ ನಟೇಶ್ ಬಂಧನಕ್ಕೆ ಶಾಸಕ ಟಿ.ಎಸ್. ಶ್ರೀವತ್ಸ ಆಗ್ರಹ

ಮೈಸೂರು: ಮೈಸೂರು ಅಭಿವೃದ್ಧಿ ಪ್ರಾಧಿಕಾರದ ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ಆಯುಕ್ತ ದಿನೇಶ್ ಕುಮಾರ್ ಅವರನ್ನು ಬಂಧಿಸಲಾಗಿದ್ದು, ಮತ್ತೊಬ್ಬ ಮಾಜಿ ಆಯುಕ್ತ ನಟೇಶ್‌ರನ್ನು ಸಹ ಬಂಧಿಸಬೇಕು ಎಂದು ಶಾಸಕ ಟಿ.ಎಸ್. ಶ್ರೀವತ್ಸ ಆಗ್ರಹಿಸಿದ್ದಾರೆ.

ಜಾರಿ ನಿರ್ದೇಶನಾಲಂು ದಿನೇಶ್ ಅವರನ್ನು ಬಂಧಿಸಿ ಅವರಿಂದ 40ಕ್ಕೂ ಹೆಚ್ಚು ನಿವೇಶನಗಳನ್ನು ಜಪ್ತಿ ವಾಡಿದೆ. ಇದೇ ರೀತಿ ಮತ್ತಷ್ಟು ಅಧಿಕಾರಿಗಳ ಬಂಧನ ಹಾಗೂ ಕಾನೂನು ಕ್ರಮ ಆಗಬೇಕಾಗಿದೆ. ಚಾಮುಂಡೇಶ್ವರಿ ಗೃಹ ನಿರ್ವಾಣ ಸಹಕಾರ ಸಂಘಕ್ಕೆ ನೀಡಲಾಗಿದ್ದ 44 ನಿವೇಶನಗಳನ್ನು ಮೈಸೂರು ಅಭಿವೃದ್ಧಿ ಪ್ರಾಧಿಕಾರ ವಾಪಸ್ ಪಡೆದುಕೊಂಡಿದ್ದು, ಸದರಿ ಜಾಗಕ್ಕೆ ಕೂಡಲೇ ಲಕ ಹಾಕಬೇಕು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.