ಜಿಲ್ಲೆ

ಎಸ್​ಡಿಪಿಐ ಯೋಜನೆಗೆ ದಾಳವಾದ್ರ ನವೀನ್?​: ಇಲ್ಲಿದೆ ಫೇಸ್​ಬುಕ್​ ಖಾತೆಯ ರೋಚಕ ಸಂಗತಿ...!

ಬೆಂಗಳೂರು: ಡಿಜೆ ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್​ಡಿಪಿಐ ಸಂಘಟನೆ ತೋಡಿದ ಹಳ್ಳಕ್ಕೆ ಆರೋಪಿ ನವೀನ್​ ಬಿದ್ದನಾ ಎಂಬ ಅನುಮಾನ ಮೂಡತೊಡಗಿದೆ.

ಅಲ್ಪ ಸಂಖ್ಯಾತರ ಪ್ರಾಬಲ್ಯ ಇರುವ ಕ್ಷೇತ್ರದಲ್ಲಿ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಎರಡು ಬಾರಿ ಭರ್ಜರಿ ಜಯ ಸಾಧಿಸಿದ್ದಾರೆ. ಇದು ಎಸ್​ಡಿಪಿಐ ಮುಖಂಡರಲ್ಲಿ ಅಸಹನೆ ಮೂಡಿಸಿತ್ತು ಎನ್ನಲಾಗಿದೆ. ಹೀಗಾಗಿ ಶಾಸಕರ ರಾಜಕೀಯ ಏಳಿಗೆಗೆ ತಡೆಯೊಡ್ಡಲು ಎಸ್​ಡಿಪಿಐ ಯೋಜನೆ ರೂಪಿಸುತ್ತಿತ್ತು ಎಂದು ಬಲ್ಲ ಮೂಲಗಳಿಂದ ಮಾಹಿತಿ ತಿಳಿದುಬಂದಿದೆ.

ಎಸ್​ಡಿಪಿಐ ಯೋಜನೆಗೆ ದಾಳವಾಗಿ ಸಿಕ್ಕಿದೆ ನವೀನ್ ಎಂದು ಹೇಳಲಾಗಿದೆ. ಅದಕ್ಕೆ ಕಾರಣ ನವೀನ್ ಫೇಸ್​ಬುಕ್ ಖಾತೆಯ ಫ್ರೆಂಡ್ ಲಿಸ್ಟ್​ನಲ್ಲಿ ಫೈರೋಜ್ ಪಾಷ ಹೆಸರಿದೆ. ನವೀನ್ ಈ ಹಿಂದೆ ಪಾದರಾಯನಪುರ ಗಲಭೆ ಹಾಗೂ ತಬ್ಲಿಘಿಗಳ ಪ್ರಕರಣಗಳನ್ನು ಟೀಕಿಸಿ ತನ್ನ ಎಫ್​ಬಿಯಲ್ಲಿ ಪೊಸ್ಟ್ ಮಾಡಿಕೊಂಡಿದ್ದ. ಇದನ್ನು ಗಮನಿಸಿದ್ದ ಫೈರೋಜ್ ಪಾಷ ನವೀನ್​ನನ್ನು ಪ್ರಚೋದಿಸುತ್ತಾ ಬಂದಿದ್ದನಂತೆ.

ಹೀಗೆ ನಿರಂತರವಾಗಿ ಪ್ರಚೋದಿಸುತ್ತಾ ಕೊನೆಗೆ ನವೀನ್​ಗೆ ಫೇಸ್​ಬುಕ್​ನಲ್ಲೇ ಖೆಡ್ಡಾ ತೋಡಿ ಫೈರೋಜ್​ ಪಾಷ ಗಲಭೆಗೆ ಕಾರಣವಾಗಿದ್ದಾನೆನ್ನಲಾಗಿದೆ. (ದಿಗ್ವಿಜಯ ನ್ಯೂಸ್​)