ಜಿಲ್ಲೆ

ಶಾಸಕ ಎಂ.ಶ್ರೀನಿವಾಸ್ ನಿಲುವಿಗೆ ಬದ್ಧ: ಜೆಡಿಎಸ್ ಜಿಲ್ಲಾ ವಕ್ತಾರ ಮಹಾಲಿಂಗೇಗೌಡ ಮುದ್ದನಘಟ್ಟ ಹೇಳಿಕೆ

reportermys

ಮಂಡ್ಯ: ಹಲವು ದಶಕದಿಂದಲೂ ರಾಜಕಾರಣದ ಜತೆಗೆ ಸಮಾಜಸೇವೆ ಮಾಡಿಕೊಂಡು ಬಂದಿದ್ದೇನೆ. ಇನ್ನಷ್ಟು ಸೇವೆ ಮಾಡಲು ರಾಜಕೀಯ ಶಕ್ತಿ ಬೇಕಿದೆ. ಕ್ಷೇತ್ರದ ಜನರು ಕೂಡ ಇದೇ ಸಲಹೆ ನೀಡುತ್ತಿದ್ದಾರೆ. ಆದರೆ ಮಂಡ್ಯ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ವಿಚಾರಕ್ಕೆ ಸಂಬಂಧಿಸಿದಂತೆ ಪಕ್ಷದ ವರಿಷ್ಠರು ಮತ್ತು ಶಾಸಕ ಎಂ.ಶ್ರೀನಿವಾಸ್ ಅವರ ನಿಲುವಿಗೆ ನಾನು ಬದ್ಧನಾಗಿದ್ದೇನೆ ಎಂದು ಜಿಲ್ಲಾ ಜೆಡಿಎಸ್ ವಕ್ತಾರ ಮಹಾಲಿಂಗೇಗೌಡ ಮುದ್ದನಟ್ಟ ಹೇಳಿದರು.

ತಾಲೂಕಿನ ಮುತ್ತೇಗೆರೆ ಗ್ರಾಮದಲ್ಲಿ ಅಂಗವಿಕಲ ಚಂದ್ರಶೇಖರ್ ಅವರಿಗೆ ವ್ಹೀಲ್‌ಚೇರ್ ವಿತರಿಸಿದ ಬಳಿಕ ಸುದ್ದಿಗಾರರೊಂದಿಗೆ ವಾತನಾಡಿದರು. ನನ್ನ ತಂದೆ 40 ವಷರ್ ಜೆಡಿಎಸ್‌ನ ಸಾವಾನ್ಯ ಕಾರ್ಯಕರ್ತರಾಗಿ ದುಡಿದಿದ್ದರು. ನಾನು ಕೂಡ 25 ವಷರ್ದಿಂದ ಕಾರ್ಯಕರ್ತನಾಗಿ ಕೆಲಸ ವಾಡುತ್ತಿದ್ದೇನೆ. ಪಕ್ಷದಲ್ಲಿ ನನಗೆ ಹಲವು ಹುದ್ದೆಗಳು ದೊರೆತಿವೆ. ವಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ನನ್ನ ಆರಾಧ್ಯ ದೈವ. ಎಚ್‌ಡಿಡಿ ಹಾಗೂ ಕುವಾರಣ್ಣ ಅವರ ತೀರ್ವಾನಕ್ಕೆ ನಾನು ತಲೆಬಾಗುತ್ತೇನೆ ಎಂದರು.

ಪಕ್ಷವು ನನಗೆ ಅವಕಾಶ ವಾಡಿಕೊಟ್ಟರೆ ಚುನಾವಣೆಯಲ್ಲಿ ಸ್ಪರ್ಧಿಸಲು ಸಿದ್ಧ. ಆದರೆ ಪಕ್ಷದಲ್ಲಿ ಸಾಕಷ್ಟು ನಿಷ್ಠಾವಂತ ಕಾರ್ಯಕರ್ತರಿದ್ದಾರೆ. ಪಕ್ಷವು ಯಾರಿಗೇ ಅವಕಾಶ ಕೊಟ್ಟರೂ ನಾವು ಅವರೊಂದಿಗೆ ನಿಲ್ಲುತ್ತೇವೆ. ಶಾಸಕರಾದ ಎಂ.ಶ್ರೀನಿವಾಸ್ ಅವರ ಅಣತಿಯಂತೆ ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲಿ ಕೆಲಸ ವಾಡುತ್ತಿದ್ದೇನೆ. ಮುಂದೆಯೂ ಇದೇ ರೀತಿ ದುಡಿಯುತ್ತೇನೆ. ಅಹಿಂದ ವರ್ಗದ ಅಭ್ಯುದಯಕ್ಕಾಗಿ ಕುವಾರಣ್ಣನ ನೇತೃತ್ವದ ಸರ್ಕಾರ ಬರಲೇಬೇಕು. ಇದಕ್ಕಾಗಿ 2023ಕ್ಕೆ ರೈತಪರ ನಾಯಕರಾದ ಕುವಾರಸ್ವಾಮಿ ಅವರ ಸಿಎಂ ಆಗಬೇಕು ಎಂದು ಪ್ರತಿಪಾದಿಸಿದರು.

ಗ್ರಾಮಕ್ಕೆ ನಾನು ಈ ಹಿಂದೆ ಭೇಟಿ ನೀಡಿದ್ದಾಗ ಅಂಗವಿಕಲ ಚಂದ್ರಶೇಖರ್ ಅವರ ಪರಿಸ್ಥಿತಿ ತಿಳಿಯಿತು. ಆದ್ದರಿಂದ ಅವರಿಗೆ ವ್ಹೀಲ್‌ಚೇರ್ ನೀಡಿ ಆತ್ಮಸ್ಥೈರ್ಯ ತುಂಬುವ ಪ್ರಯತ್ನ ವಾಡಿದ್ದೇನೆ. ಮಂಡ್ಯ ವಿಧಾನಸಭಾ ಕ್ಷೇತ್ರದ ಅಂಗವಿಕಲರು ತಮಗೆ ಅಗತ್ಯವಾದ ಸಾಧನ ಸಲಕರಣೆಗಳು ಹಾಗೂ ಔಷಧಗಳ ಅವಶ್ಯಕತೆ ಇದ್ದರೆ ಮಂಡ್ಯ ನಗರದ ನನ್ನ ಕಚೇರಿಯಲ್ಲಿ ನೋಂದಣಿ ವಾಡಿಸಿಕೊಂಡು ಪಡೆಯಬಹುದು ಎಂದರು.

ಮುಖಂಡರಾದ ಹುಳಿಗೌಡ, ಅಭಿಷೇಕ್, ಮುತ್ತೇಗೆರೆ ಮಹಾಲಿಂಗು, ಬಸರಾಳು ಮೋಹನ್, ವೆಂಕಟೇಶ್ ಸೇರಿದಂತೆ ಜೆಡಿಎಸ್ ಕಾರ್ಯಕರ್ತರು, ಗ್ರಾಮದ ಮುಖಂಡರು ಇದ್ದರು.