ಜಿಲ್ಲೆ

ಅಭಿವೃದ್ಧಿಗೆ ವೇಗ ನೀಡಲು ಸೂಚನೆ

ರಮೇಶ ಮೇಳಕುಂದಾ

ಹುಮನಾಬಾದ್: ಪಟ್ಟಣದಲ್ಲಿ ಮೂಲ ಸೌಲಭ್ಯ ಒದಗಿಸಲು ಹಾಗೂ ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸಲು ನಿರ್ಲಕ್ಷಿಸಿದರೆ ಸಹಿಸುವುದಿಲ್ಲ ಎಂದು ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ್ ಪುರಸಭೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ಹಳ್ಳಿಖೇಡ(ಬಿ) ಪಟ್ಟಣದ ಪುರಸಭೆಗೆ ಮಂಗಳವಾರ ದಿಢೀರ್ ಭೇಟಿ ನೀಡಿ, ಅಧಿಕಾರಿ ಹಾಗೂ ಸಿಬ್ಬಂದಿ ಹಾಜರಾತಿ, ಕಾರ್ಯವೈಖರಿ ಪರಿಶೀಲಿಸಿ ಮಾತನಾಡಿ, ಪಟ್ಟಣದ ಅಭಿವೃದ್ಧಿಗೆ ವೇಗ ನೀಡಲು ಪುರಸಭೆ ಅಧಿಕಾರಿ, ಸಿಬ್ಬಂದಿ ಚುರುಕಿನಿಂದ ಕಾರ್ಯನಿರ್ವಹಿಸಬೇಕು ಎಂದು ಸೂಚಿಸಿದರು. ಜನರ ಕುಂದುಕೊರತೆ ಆಲಿಸಿದರು. ಪುರಸಭೆ ಮುಖ್ಯಾಧಿಕಾರಿ ಅಶೋಕ ಚನ್ನಕೋಟೆ, ಪ್ರಮುಖರಾದ ಶಿವಕುಮಾರ ತೀರ್ಥ, ಓಂಪ್ರಕಾಶ ಪ್ರಭಾ, ಪ್ರಕಾಶ ತಿಬಶೆಟ್ಟಿ, ರೇವಪ್ಪ ಹೊಲದೊಡ್ಡಿ, ಮುರಳಿ ಪೊಸಂಗಿ, ಸುಶೀಲ ಮರಪಳ್ಳಿ, ನಾಗರಾಜ ಚಂದನಕೇರಿ, ಸಂಜುಕುಮಾರ ಪ್ರಭಾ ಇತರರಿದ್ದರು.