ಜಿಲ್ಲೆ

ಶಾಸಕ ಸವದಿಗೆ ಶುಭಾಶಯಗಳ ಮಹಾಪೂರ

ಸಂಬರಗಿ: ಶಾಸಕ ಲಕ್ಷ್ಮಣ ಸವದಿ ಅವರ 65ನೇ ಜನ್ಮದಿನದ ಅಂಗವಾಗಿ ಅಥಣಿಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸಂಬರಗಿ ಭಾಗದ ಕಾಂಗ್ರೆಸ್ ಕಾರ್ಯಕರ್ತರು ಶಾಸಕ ಲಕ್ಷ್ಮಣ ಸವದಿ ಅವರಿಗೆ ಜನ್ಮದಿನದ ಶುಭಾಶಯ ಕೋರಿದರು.

ಜನ್ಮದಿನದ ಅಂಗವಾಗಿ ಪಟ್ಟಣದಲ್ಲಿ ರಕ್ತದಾನ ಶಿಬಿರ, ನೇತ್ರ ಚಿಕಿತ್ಸೆ ಶಿಬಿರ ಜರುಗಿತು. ಅನಾಥಾಶ್ರಮ ಹಾಗೂ ಬಡ ರೋಗಿಗಳಿಗೆ ಹಣ್ಣುಹಂಪಲು ಹಾಗೂ ವಿದ್ಯಾರ್ಥಿಗಳಿಗೆ ಕಲಿಕಾ ಸಾಮಗ್ರಿ ವಿತರಿಸಲಾಯಿತು.

ಮಹಾದೇವ ಕೋರೆ, ಪರಶುರಾಮ ಬಾಡಗಿ, ಪಿಕೆಪಿಎಸ್ ಅಧ್ಯಕ್ಷ ನಿಜಗುಣಿ ಮಗದುಮ, ಅಶೋಕ ಪೂಜಾರಿ, ಅಣ್ಣಾಸಾಹೇಬ ಮೆಂಡಿಗಿರಿ, ಪಿಕೆಪಿಎಸ್ ಅಧ್ಯಕ್ಷ ರಾವಸಾಹೇಬ ಬೆವನುರ, ಶಿವು ಬೆವನುರ, ಓಂಪ್ರಕಾಶ ಡೊಳ್ಳಿ, ಮಹಾಂತೇಶ ಸಾಲಿಮಠ, ಖಂಡೇರಾವ್ ಘೋರ್ಪಡೆ, ವಿನಾಯಕ ಬಾಗಡಿ, ಸಂಜಯ ಅಧಾಟೆ, ವಿಲಾಸ ಟೋನ್, ಅಣ್ಣಪ್ಪ ಮಿಸಾಳ, ರಾಜು ಪಾಸಲೆ, ಅಶೋಕ ಬಾಬು ಮಾನೆ, ಮಲಿಕಾರ್ಜುನ ದಳವಾಯಿ, ರಾಜೇಂದ್ರ ಪಾಟೀಲ, ಭಗವಂತ ಚವ್ಹಾಣ, ಜಿತೇಂದ್ರ ಸೂರ್ಯವಂಶಿ, ಪ್ರಕಾಶ ಖುಟೆ, ಪ್ರವೀಣ ಕಾಂಬಳೆೆ, ಭರತ ಮಾಣೆ ಇತರರಿದ್ದರು.