ಜಿಲ್ಲೆ

ಹಾಸ್ಪಿಟಲ್‌ ಘೋಷಣೆ ಮಾಡದಿದ್ದರೆ ರಾಜೀನಾಮೆ ನೀಡುತ್ತೇನೆ ಎಂದ ಸೈಲ್‌

Uttara Kannada - Subash Hegde

ಕಾರವಾರ: ಮುಂದಿನ ಬಜೆಟ್‌ನಲ್ಲಿ ಕಾರವಾರಕ್ಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮಂಜೂರು ಮಾಡದೇ ಹೋದರೆ ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಶಾಸಕ ಸತೀಶ ಸೈಲ್ ಹೇಳಿದ್ದಾರೆ.

ಮಾಧ್ಯಮ ಪ್ರತಿನಿಽಗಳ ಜತೆ ಮಂಗಳವಾರ ಮಾತನಾಡಿದ ಅವರು, ಕಾರವಾರಕ್ಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಬೇಕಿದೆ. ಮುಖ್ಯಮಂತ್ರಿಗಳು ಕೊಟ್ಟ 50 ಕೋಟಿ ರೂ.ಗಳನ್ನು ಅದಕ್ಕೆ ಬಳಸುವ ಯೋಜನೆ ಮಾಡಿದ್ದೆ. ತಲಾ 25 ಕೋಟಿ ರೂ.ಗಳನ್ನು ನೀಡುವಂತೆ ಜಿಲ್ಲೆಯ ಇತರ ಶಾಸಕರ ಬಳಿಯೂ ಕೇಳಿಕೊಂಡಿದ್ದೆ. ಆದರೆ, ಅದಕ್ಕೆ ಅವರು ಒಪ್ಪಲಿಲ್ಲ. ಇದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿ ಹೋಗಿ ಮನವಿ ಮಾಡಿದ್ದೇನೆ.

ನವೆಂಬರ್‌ನಲ್ಲಿ ಬರುವಂತೆ ಹೇಳಿದ್ದಾರೆ. ನವೆಂಬರ್‌ನಲ್ಲಿ ಪ್ರಸ್ತಾವನೆ ತೆಗೆದುಕೊಂಡು ಹೋಗುತ್ತೇನೆ. ಬಜೆಟ್‌ನಲ್ಲಿ ಅದನ್ನು ಸೇರಿಸುತ್ತಾರೆ ಎಂಬ ವಿಶ್ವಾಸ ನಮ್ಮ ಸರ್ಕಾರದ ಮೇಲಿದೆ ಎಂದರು. ಕಾರವಾರ ಕಾಳಿ ನದಿಯ ಪಕ್ಕದಲ್ಲಿ ಒಂದು ರಸ್ತೆ ಮಾಡುವ ಯೋಜನೆ ಇದೆ. ಕಾರವಾರ ಸುಂಕೇರಿಯಿಂದ ಸದಾಶಿವಗಡಕ್ಕೆ ಇನ್ನೊಂದು ಸೇತುವೆ ನಿರ್ಮಾಣಕ್ಕೆ ಹಣ ನೀಡುವಂತೆ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅವರ ಬಳಿ ಕೇಳಿದ್ದೇನೆ ಅವರೂ ಹಣ ಮಂಡಿಸುವ ವಿಶ್ವಾಸವಿದೆ ಎಂದರು.