ಕಾರವಾರ: ಮಳೆಗಾಲದಲ್ಲಿ ಡೆಂಗ್ಯೂ ಮಲೇರಿಯಾ, ಮತ್ತಿತರ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ
ಹೆಚ್ಚಿರುವದರಿಂದ ಈ ಕುರಿತು ಮುನ್ನೆಚ್ಚರಿಕೆ ಕ್ರಮಗಳ ಮತ್ತು ಯಾರನ್ನು ಸಂಪರ್ಕಿಸಬೇಕು ಎಂಬುದರ ಕುರಿತು ಆರೋಗ್ಯ ಇಲಾಖೆ ವತಿಯಿಂದ
ಸೂಚನಾ ಫಲಕಗಳನ್ನು ಮುದ್ರಿಸಿ ಎಲ್ಲಾ ಪಂಚಾಯತ್ ಗಳಿಗೆ ನೀಡುವಂತೆ ಹಾಗೂ ಈ ಫಲಕಗಳನ್ನು ಗ್ರಾಮ ಪಂಚಾಯತ್ ಗಳಲ್ಲಿ ಅಳವಡಿಸುವಂತೆ
ಶಾಸಕ ಸತೀಶ ಸೈಲ್ ಸೂಚನೆ ನೀಡಿದರು.
ಅವರು ಗುರುವಾರ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ತಾಲೂಕು ಪಂಚಾಯತ ತ್ರೆöÊ ಮಾಸಿಕ ಕೆ.ಡಿ.ಪಿ ಸಭೆಯ
ಅಧ್ಯಕ್ಷತೆವಹಿಸಿ ಮಾತನಾಡಿದರು.
ಶಿರವಾಡದ ಕಸ ವಿಲೇವಾರಿ ಘಟಕದಿಂದಾಗಿ ಸ್ಥಳೀಯರಿಗೆ ತೊಂದರೆಯಾಗುತ್ತಿದ್ದು, ಇಲ್ಲಿನ ನೀರು ಪರೀಕ್ಷೆ ಮಾಡುವಂತೆ ಸೂಚಿಸಿದ ಅವರು
ಡಂಪಿAಗ್ ಯಾರ್ಡ್ಗೆ ಭೇಟಿ ನೀಡಿ ಸ್ಥಳೀಯರ ಸಮಸ್ಯೆ ಆಲಿಸುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಗ್ರಾಮಗಳಿಗೆ ಬಸ್ ಸೌಕರ್ಯದ ಸಮಸ್ಯೆಯಿದ್ದರೆ ಪಂಚಾಯತಗಳಲ್ಲಿ ಠರಾವು ಮಾಡಿ ಸಾರಿಗೆ ಇಲಾಗೆ ಅಧಿಕಾರಿಗಳಿಗೆ ಪತ್ರ ಬರೆಯುವಂತೆ
ಪಿಡಿಒಗಳಿಗೆ ಸೂಚಿಸಿದ ಅವರು, ಸರಿಯಾದ ಸಮಯಕ್ಕೆ ಬಸ್‌ಗಳು ಸಂಚರಿಸಲು ಅವಕಾಶ ಮಾಡುವಂತೆ ಹಾಗೂ ಪಂಚಾಯತ ಗಳಲ್ಲಿ ಠರಾವು ಮಾಡಿದ
ನಂತರ ಕಡ್ಡಾಯವಾಗಿ ಬಸ್‌ಗಳನ್ನು ಗ್ರಾಮಗಳಲ್ಲಿ ನಿಲುಗಡೆ ಮಾಡುವಂತೆ ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಸೀಬರ್ಡ್ ಕಾರ್ಮಿಕ ಗುತ್ತಿಗೆಗಾರರು ಕಾರ್ಮಿಕರಿಗೆ ಕಾರ್ಮಿಕ ಇಲಾಖೆ ನಿಗದಿಪಡಿಸಿದ ಕನಿಷ್ಠ ವೇತನ ನೀಡಬೇಕು. ಈ ಹಿಂದೆ ನೀಡಿದ ಕನಿಷ್ಠ
ವೇತನ ಮತ್ತು ಗ್ರಾಚ್ಯುಟಿ ನೀಡಿರುವ ಕುರಿತು ವರದಿ ಪಡೆದು ಸಲ್ಲಿಸುವಂತೆ ಕಾರ್ಮಿಕ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು.
ಮಲ್ಲಾಪುರದ ಕುರ್ನಿಪೇಟೆ ಶಾಲಾ ಆವರಣದಲ್ಲಿ ಆರೋಗ್ಯ ಕ್ಷೇಮ ಕೇಂದ್ರ ನಿರ್ಮಾಣ ಕುರಿತು ನಿರಪೇಕ್ಷಣಾ ಪತ್ರ ನೀಡದ ಕ್ಷೇತ್ರ
ಶಿಕ್ಷಣಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡ ಶಾಸಕರು ಸ್ಥಳೀಯ ಜನರ ಅನುಕೂಲಕ್ಕಾಗಿ ಶಾಲಾ ಆವರಣದಲ್ಲಿ ಆರೋಗ್ಯ ಕ್ಷೇಮ ಕೇಂದ್ರ
ಸ್ಥಾಪಿಸುವದರಲ್ಲಿ ತಪ್ಪೇನಿದೇ? ಈ ಕೂಡಲೇ ಶಾಲಾ ಶಿಕ್ಷಣ ಇಲಾಖೆ ಅಧಿಕಾರಿಗಳು ಗ್ರಾಮ ಪಂಚಾಯತ ಸದಸ್ಯರು, ಅಧಿಕಾರಿಗಳು ಹಾಗೂ
ಸ್ಥಳೀಯರನ್ನು ಒಳಗೊಂಡು ಸಭೆ ಮಾಡಿ ಆರೋಗ್ಯ ಕ್ಷೇಮ ಕೇಂದ್ರ ನಿರ್ಮಿಸಲು ಕ್ರಮ ಕೈಗೊಳ್ಳುವಂತೆ ನಿರ್ದೆಶನ ನೀಡಿದರು.
ಕಾಲು ಸಂಕ ನಿರ್ಮಾಣಕ್ಕೆ ಲೋಕೋಪಯೋಗಿ ಇಲಾಖೆಗೆ ರೂ. 1 ಕೋಟಿ ಮಂಜೂರಾಗಿದೆ ಎಂದು ಇಂಜನೀಯರ್ ರಾಮು ಮಾಹಿತಿ
ನೀಡದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು ಎಲ್ಲಲ್ಲಿ ಕಾಲು ಸಂಕ ನಿರ್ಮಾಣ ಮಾಡಬೇಕು ಎಂಬುದರ ಬಗ್ಗೆ ಗ್ರಾಮ ಪಂಚಾಯತಿಗಳಿAದ ವರದಿ
ಪಡೆದು, ಕ್ರಿಯಾ ಯೋಜನೆ ರೂಪಿಸಿ ಅವಶ್ಯವಿರುವ ಕಡೆ ಕಾಲು ಸಂಕ ನಿರ್ಮಾಣ ಮಾಡುವಂತೆ ಹಾಗೂ ಜಾಂಬಾ-ಬೇಳೂರು ಕಣಿವೆ ರಸ್ತೆಯನ್ನು
ನಿರ್ಮಾಣ ಮಾಡಲು ಕೂಡಲೇ ಅರಣ್ಯ ಇಲಾಖೆಗೆ ಪ್ರಸ್ತಾವನೆ ಸಲ್ಲಿಸುವಂತೆ ಲೋಕೋಪಯೋಗಿ ಇಲಾಖೆ ಅಧಿಕಾರಿಗೆ ನಿರ್ದೇಶನ ನೀಡಿದರು.
ಪಿ.ಎಮ್.ಜಿ.ಎಸ್.ವೈ ವತಿಯಿಂದ ನಿರ್ಮಾಣವಾಗುವ ಬಹುತೇಕ ರಸ್ತೆಗಳು ಅರಣ್ಯ ಮಾರ್ಗದ ಮೂಲಕವೇ ಹಾದು ಹೋಗುವುದರಿಂದ
ಕಾಮಗಾರಿಗಳು ನಿಗಧಿತ ಅವಧಿಯಲ್ಲಿ ಪೂರ್ಣಗೊಳ್ಳುತ್ತಿಲ್ಲ ಕಾರಣ ಪಿ.ಎಮ್.ಜಿ.ಎಸ್.ವೈ ಅಧಿಕಾರಿಗಳು, ತಹಶೀಲ್ದಾರ ಮತ್ತು ಅರಣ್ಯ ಇಲಾಖೆ
ಅಧಿಕಾರಿಗಳ ಜೊತೆ ಚರ್ಚಿಸಿ ಕಾಮಗಾರಿ ಪೂರ್ಣಗೊಳಿಸುವಂತೆ ತಿಳಿಸಿದ ಅವರು, ಅರಣ್ಯ ಇಲಾಖೆ ಅಧಿಕಾರಿಗಳು ರಸ್ತೆ ನಿರ್ಮಾಣಕ್ಕೆ ಅಗತ್ಯ ಸಹಕಾರ
ನೀಡುವಂತೆ ತಿಳಿಸಿದರು.
ಮಳೆಗಾಲ ಆರಂಭವಾಗಿದ್ದು, ಬಹುತೇಕ ಕಡೆ ಕಡಲ ಕೊರೆತ ಉಂಟಾಗುತ್ತಿದ್ದು, ಅಧಿಕಾರಿಗಳು ಕೂಡಲೇ ಕಡಲ ಕೊರೆತ ಉಂಟಾದ ಕಡೆ
ಭೇಟಿ ನೀಡಿ ಪರಿಶೀಲಿಸುವಂತೆ ತಿಳಿಸಿದರು.
ವಿದ್ಯಾರ್ಥಿ ನಿಲಯಗಳಲ್ಲಿ ವಿದ್ಯಾರ್ಥಿಗಳ ಪ್ರವೇಶಾತಿಗೆ ಯಾವುದೇ ಕಾರಣಕ್ಕೂ ನಿರಾಕರಣೆ ಮಾಡದಂತೆ ಹಾಗೂ ಬಾಡಿಗೆ ಕಟ್ಟಡದಲ್ಲಿರುವ
ವಸತಿನಿಲಯಗಳಿಗೆ ನಿವೇಶನಕ್ಕಾಗಿ ಪ್ರಸ್ತಾವನೆಯನ್ನು ಸಲ್ಲಿಸುವಂತೆ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಸತೀಶ ನಾಯ್ಕ, ತಾಲೂಕಾಧ್ಯಕ್ಷ ರಾಜೇಂದ್ರ ರಾಣೆ, ತಹಶೀಲ್ದಾರ
ನಿಶ್ಚಲ್ ನರೋನಾ, ತಾಲೂಕು ಪಂಚಾಯತ ಆಡಳಿತ ಅಧಿಕಾರಿ ಸೋಮಶೇಖರ ಮೇಸ್ತಾ, ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿ ವೀರನಗೌಡ ಪಿ.
ಏಗನಗೌಡರ, ನಗರ ಸಭೆಯ ಪೌರಾಯುಕ್ತ ಜಗದೀಶ್ ಹುಲಗಜ್ಜಿ, ತಾಲೂಕು ಕೆ.ಡಿ.ಪಿ ನಾಮನಿರ್ದೇಶಿತ ಸದಸ್ಯರು, ತಾಲೂಕು ಮಟ್ಟದ ವಿವಿಧ
ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.