ಜಿಲ್ಲೆ

ಕಾರವಾರ ಡಿಪೋದಲ್ಲಿ ನೀರು ತುಂಬಲು ಕಾರಣ ಹುಡುಕಿದ ಸೈಲ್‌

ಕಾರವಾರ: ಇಲ್ಲಿನ ಎನ್‌ಡಬ್ಲುಕೆಆರ್‌ಟಿಸಿ ಡಿಪೋದಲ್ಲಿ ನೀರು ತುಂಬಿ ಸಮಸ್ಯೆ ಉಂಟಾಗಿದ್ದು, ಡಿಪೋವನ್ನು ಅಂಕೋಲಾಕ್ಕೆ ಸ್ಥಳಾಂತರಿಸುವ ಸುದ್ದಿ ಹರಡಿದ ಹಿನ್ನೆಲೆಯಲ್ಲಿ ಶಾಸಕ ಸತೀಶ ಸೈಲ್ ಗುರುವಾರ ಡಿಪೋಕ್ಕೆ ಭೇಟಿ ಕೊಟ್ಟು ಪರಿಶೀಲಿಸಿದರು.

ಕಳೆದ ವಾರ ಡಿಪೋದಲ್ಲಿ ನೀರು ತುಂಬಿ ಬಸ್‌ಗಳ ಸಂಚಾರಕ್ಕೆ ತೊಂದರೆ ಉಂಟಾಗಿತ್ತು. ಮಾತ್ರವಲ್ಲ ಡೀಸೆಲ್‌ಗೂ ನೀರು ಸೇರಿ ನಷ್ಟ ಉಂಟಾಗಿತ್ತು. ಡಿಪೋದಿಂದ ನೀರು ಹರಿದು ಹೋಗಲು ಸೂಕ್ತ ವ್ಯವಸ್ಥೆ ಮಾಡದ ಬಗ್ಗೆ ಸೈಲ್ ಅಽಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಮಾತ್ರವಲ್ಲ. ಕೋವಿಡ್ ಅವಽಯಲ್ಲಿ ಬಂದ್ ಆದ ಕೆಲವು ಬಸ್ ಮಾರ್ಗಗಳನ್ನು ಪುನರಾರಂಭಿಸದ ಬಗ್ಗೆ ಅಧಿಕಾರಿಗಳನ್ನು ಪ್ರಶ್ನಿಸಿದರು. ಕಾರವಾರ ಡಿಪೋವನ್ನು ಅಂಕೋಲಾಕ್ಕೆ ಸ್ಥಳಾಂತರಿಸುವ ಸುದ್ದಿ ಇದೆ. ಹಾಗೆ ಮಾಡಿದಲ್ಲಿ ಬಸ್‌ಗಳ ಓಡಾಟಕ್ಕೆ ಸಮಸ್ಯೆ ಆಗಲಿದೆ. ಅದರಿಂದ ಸಾರ್ವಜನಿಕರಿಗೆ ಸಮಸ್ಯೆ ಆಗಲಿದೆ. ಡಿಪೋ ಬೇರೆಡೆ ಸ್ಥಳಾಂತರ ಬೇಡ ಎಂದು ಸೂಚಿಸಿದರು.

ಎನ್‌ಡಬ್ಲುಕೆಆರ್‌ಟಿಸಿ ವಿಭಾಗೀಯ ನಿಯಂತ್ರಣಾಽಕಾರಿ ಬಸವರಾಜ ಅಮ್ಮನವರ್ ಮಾತನಾಡಿ, ಕಾರವಾರ ಡಿಪೋ ಕಟ್ಟಡ ನಿರ್ಮಾಣ ಕಾಮಗಾರಿ ನಡೆದಿದೆ. ಅಲ್ಲದೇ ಡಿಪೋದಲ್ಲಿ ನೀರು ನಿಲ್ಲುವ ಕಾರಣ ಅದನ್ನು ಎತ್ತರಿಸುವ ಅವಶ್ಯಕತೆ ಇದೆ. ಅದಕ್ಕಾಗಿ ಕೆಲವು ಲಾಂಗ್ ರೂಟ್ ಬಸ್‌ಗಳ ನಿರ್ವಹಣೆಯನ್ನು ಅಂಕೋಲಾದಲ್ಲಿ ಮಾಡಲಾಗುವುದು. ಸ್ಥಳೀಯ ರೂಟ್ ಬಸ್‌ಗಳು ಇಲ್ಲಿಂದಲೇ ಕಾರ್ಯ ನಿರ್ವಹಿಸಲಿದೆ. ಡಿಪೋ ಯಾವ ಕಾರಣಕ್ಕೂ ಸ್ಥಳಾಂತರ ಮಾಡುವುದಿಲ್ಲ ಎಂದರು. ಕಾಂಗ್ರೆಸ್ ಪ್ರಮುಖರು ಈ ಸಂದರ್ಭದಲ್ಲಿದ್ದರು.