filter: 0; fileterIntensity: 0.0; filterMask: 0; hdrForward: 0; highlight: false; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 8;cct_value: 0;AI_Scene: (-1, -1);aec_lux: 0.0;aec_lux_index: 0;HdrStatus: auto;albedo: ;confidence: ;motionLevel: 0;weatherinfo: null;temperature: 42; 
ಜಿಲ್ಲೆ

ಹನೂರಿನ ವಿವಿಧ ವಾರ್ಡ್‌ಗಳಿಗೆ ಶಾಸಕ ರೌಂಡ್ಸ್

ಕಿರಣ್ ಗೌಡ.ಜಿ

ಹನೂರು: ತಟ್ಟೆಹಳ್ಳದ ಸೇತುವೆ ಬಳಿ ಸಿಸಿ ರಸ್ತೆ ನಿರ್ಮಿಸಬೇಕು. ಗಿಡಗಂಟಿಗಳನ್ನು ತೆರವುಗೊಳಿಸಿ ಸ್ವಚ್ಛತೆ ಕಾಪಾಡಬೇಕು. ಸಮರ್ಪಕ ಕುಡಿಯುವ ನೀರು ಪೂರೈಸಬೇಕು. ಬಿಡುಗಡೆಯಾಗಿರುವ ಅನುದಾನದಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬೇಕು.

ಇದು ಪಟ್ಟಣದ ವಿವಿಧ ವಾರ್ಡ್‌ಗಳಿಗೆ ಶುಕ್ರವಾರ ತೆರಳಿದ್ದ ವೇಳೆ ಜನರ ಸಮಸ್ಯೆ ಆಲಿಸಿದ ಶಾಸಕ ಎಂ.ಆರ್ ಮಂಜುನಾಥ್ ಅವರು ಅಧಿಕಾರಿಗಳಿಗೆ ನೀಡಿದ ಸೂಚನೆಗಳಿವು.

ಸಿಸಿ ರಸ್ತೆ ನಿರ್ಮಿಸುವ ಸಂಬಂಧ 6ನೇ ವಾರ್ಡಿನ ತಟ್ಟೆಹಳ್ಳದ ಬಳಿ ಶಾಸಕರು ತೆರಳಿದ್ದ ವೇಳೆ ಸಾರ್ವಜನಿಕರು ಮಾತನಾಡಿ, ತಟ್ಟೆಹಳ್ಳದಲ್ಲಿ ಮಳೆಗಾಲದ ವೇಳೆ ಯಥೇಚ್ಛವಾದ ನೀರು ಹಲವು ದಿನಗಳವರೆಗೆ ಹರಿಯುತ್ತದೆ. ಇದರಿಂದ ಸಂಚಾರಕ್ಕೆ ತುಂಬ ತೊಡಕಾಗುತ್ತದೆ. ಆದ್ದರಿಂದ ರಸ್ತೆ ನಿರ್ಮಿಸಿಕೊಡಬೇಕು. ಹಾಗೆಯೇ ಹಳ್ಳದ ಎರಡೂ ಬದಿಯಲ್ಲೂ ಗಿಡಗಂಟಿಗಳು ಬೆಳೆದು ನಿಂತಿದ್ದು, ಅನೈರ್ಮಲ್ಯ ಮನೆ ಮಾಡಿದೆ. ಇದರಿಂದ ರೋಗರುಜಿನಗಳ ಭೀತಿ ಎದುರಾಗಿದ್ದು, ಈ ಬಗ್ಗೆ ಗಮನಹರಿಸುವಂತೆ ಮನವಿ ಮಾಡಿದರು. ಇದಕ್ಕೆ ಶಾಸಕರು ಪ್ರತಿಕ್ರಿಯಿಸಿ, ಈಗಾಗಲೇ ಸರ್ಕಾರದಿಂದ 12.63 ಲಕ್ಷ ರೂ. ಅನುದಾನದಲ್ಲಿ ಸಿಸಿ ರಸ್ತೆ ನಿರ್ಮಿಸುವಂತೆ ಜಿಲ್ಲಾ ನಗರಾಭಿವೃದ್ಧಿ ಯೋಜನೆಯ ಎಇಇ ಅಲ್ತಾಫ್ ಮಹಮದ್ ಅವರಿಗೆ ಸೂಚಿಸಿದರು. ಗಿಡಗಂಟಿಗಳನ್ನು ತೆರವುಗೊಳಿಸಿ ಸ್ವಚ್ಛತೆ ಕಾಪಾಡುವುದರ ಮೂಲಕ ಜನರಿಗೆ ತೊಂದರೆಯಾಗದಂತೆ ಅಗತ್ಯ ಕ್ರಮವಹಿಸುವಂತೆ ಪಟ್ಟಣ ಪಂಚಾಯಿತಿ ಇಂಜಿನಿಯರ್ ನಾಗರಾಜು ಅವರಿಗೆ ಸೂಚಿಸಿದರು. ಇದೇ ವೇಳೆ ಬಿಡುಗಡೆಯಾಗಿರುವ ಅನುದಾನದಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳುವಂತೆ ಸೂಚಿಸಿದರು.

ಬಳಿಕ 8ನೇ ವಾರ್ಡಿಗೆ ತೆರಳಿದ್ದ ಶಾಸಕರಿಗೆ ಸ್ಥಳೀಯರು ಸಮರ್ಪಕವಾಗಿ ಕುಡಿಯುವ ನೀರು ಪೂರೈಕೆಯಾಗುತ್ತಿಲ್ಲ. ವಾಟರ್‌ಮನ್ ಸರಿಯಾಗಿ ಕೆಲಸ ನಿರ್ವಹಿಸುತ್ತಿಲ್ಲ ಎಂದು ಆರೋಪಿಸಿದರು. ಕೂಡಲೇ ಅಗತ್ಯ ಕ್ರಮಕೈಗೊಂಡು ನೀರಿನ ಸಮಸ್ಯೆ ತಲೆದೋರದಂತೆ ಕ್ರಮವಹಿಸುವಂತೆ ವಾಟರ್‌ಮನ್‌ಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ಇದೇ ವೇಳೆ ಜಿ.ವಿ ಗೌಡ ಕಾಲೇಜು ಸಮೀಪದಲ್ಲಿನ ಸರ್ಕಾರಿ ಸ್ಥಳದಲ್ಲಿ ಒಳಚರಂಡಿ ನಿರ್ಮಾಣಕ್ಕಾಗಿ ಜಾಗ ಗುರುತಿಸುವಂತೆ ತಹಸೀಲ್ದಾರ್ ವೈ.ಕೆ.ಗುರುಪ್ರಸಾದ್ ಅವರಿಗೆ ಸೂಚಿಸಿದರು.

ಪಪಂ ಅಧ್ಯಕ್ಷೆ ಮುಮ್ತಾಜ್ ಬಾನು, ಉಪಾಧ್ಯಕ್ಷ ಆನಂದ್‌ಕುಮಾರ್, ಸದಸ್ಯ ಮಹೇಶ್, ಸಂಪತ್‌ಕುಮಾರ್, ಆರ್‌ಐ ಶೇಷಣ್ಣ, ಕಿರಿಯ ಅಭಿಯಂತರ ನಾಗರಾಜು, ಪ್ರಭಾರ ಆರೋಗ್ಯಾಧಿಕಾರಿ ಪ್ರಕಾಶ್, ಮುಖಂಡರಾದ ಲಿಂಗೇಗೌಡ, ವಿಜಯಕುಮಾರ್, ರಾಜುಗೌಡ, ಪ್ರಸನ್ನ, ಗೋವಿಂದ, ಡಿ.ಕೆ ರಾಜು, ಅಮಿನ್, ಚಿನ್ನವೆಂಕಟ ಹಾಗೂ ಇನ್ನಿತರರು ಇದ್ದರು.