ಜಿಲ್ಲೆ

ಸೇಡಿಗೆ ಸೇಡು, ಹಿಂದುಗಳನ್ನು ಸೀಳಿದವರ ನಾವು ಸೀಳುತ್ತೇವೆ: ಶಾಸಕ ರೇಣುಕಾಚಾರ್ಯ

Webdesk - Ravikanth

ದಾವಣಗೆರೆ: ನೂಪುರ್ ಶರ್ಮಾಗೆ ಬೆಂಬಲ ವ್ಯಕ್ತಪಡಿಸಿದ್ದ ಕನ್ಹಯ್ಯ ಲಾಲ್​ ರುಂಡ ಕತ್ತರಿಸಿ ಪಾತಕಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಶಾಸಕ ರೇಣುಕಾಚಾರ್ಯ, ಸೇಡಿಗೆ ಸೇಡು, ಮುಯ್ಯಿಗೆ ಮುಯ್ಯಿಯೇ ಪ್ರತ್ಯುತ್ತರವಾಗಬೇಕು ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಕನ್ಹಯ್ಯ ಲಾಲ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ದಾವಣಗೆರೆಯಲ್ಲಿ ಮಾತನಾಡಿದ ಅವರು, ನಾವು ಹಿಂದುಗಳೇನೂ ಕೈಗೆ ಬಳೆ ತೊಟ್ಟುಕೊಂಡಿಲ್ಲ. ಹಿಂದುಗಳನ್ನು ಸೀಳಿದವರನ್ನು ಸೀಳಬೇಕು, ನಾವು ಸೀಳುತ್ತೇವೆ. ಸೇಡಿಗೆ ಸೇಡು ತೀರಿಸಿಕೊಂಡಾಗ ಎಲ್ಲ ಸುಮ್ಮನಿರುತ್ತಾರೆ ಎಂದು ಹೇಳಿದ್ದಾರೆ.

ಕನ್ಹಯ್ಯ ಲಾಲ್​​ನನ್ನು ಕೊಲೆ ಮಾಡಿದ್ದಲ್ಲದೆ, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೇ ಬೆದರಿಕೆ ಹಾಕುತ್ತಾರೆ. ಅಂಥವರನ್ನು ಸಾರ್ವಜನಿಕವಾಗಿ ಗುಂಡಿಕ್ಕಿ ಕೊಲ್ಲಬೇಕು. ಹರ್ಷ, ರುದ್ರೇಶ್, ಕುಟ್ಟಪ್ಪ ಬಳಿಕ ಕನ್ಹಯ್ಯ ಲಾಲ್ ಹತ್ಯೆಯಾಗಿದೆ, ಆ ಹಂತಕರನ್ನು ಸೀಳಬೇಕು. ಹಿಂದುತ್ವದ ವಿರುದ್ಧ ಮಾತಾಡಿದವರನ್ನು ಕಂಡಲ್ಲಿ ಗುಂಡಿಟ್ಟು ಹೊಡೆಯಬೇಕು ಎಂದು ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿಯೂ ಆಗಿರುವ ಹೊನ್ನಾಳಿ ಶಾಸಕ ರೇಣುಕಾಚಾರ್ಯ ಹೇಳಿದ್ದಾರೆ.