ಕಲಕೇರಿ ತಾಂಡಾದಲ್ಲಿ ಜಲಜೀವನ ಮಿಷನ್ ಯೋಜನೆ ಕಾಮಗಾರಿಗೆ ಶಾಸಕ ರಾಜುಗೌಡ ಪಾಟೀಲ ಕುದರಿಸಾಲೋಡಗಿ ಭೂಮಿಪೂಜೆ ನೆರವೇರಿಸಿದರು. ರಾಜಹ್ಮದ ಸಿರಸಗಿ, ಪರಶುರಾಮ ಬೇಡರ, ಹಾಜೀಪಾಷಾ ಜಾಗಿರದಾರ ಇತರರಿದ್ದರು.  
ಜಿಲ್ಲೆ

ಕುಡಿಯುವ ನೀರು ಸರಬರಾಜಿಗೆ ಆದ್ಯತೆ

ಕಲಕೇರಿ: ಸದ್ಯ ಕುಡಿಯುವ ನೀರಿನ ಸಮಸ್ಯ ಇರುವ ಕಲಕೇರಿ ತಾಂಡಾದ ಜನರಿಗೆ ಶಾಶ್ವತ ಕುಡಿಯುವ ನೀರು ಸರಬರಾಜು ಕಲ್ಪಿಸಲು ಆದ್ಯತೆ ನೀಡಲಾಗಿದೆ ಎಂದು ದೇವರಹಿಪ್ಪರಗಿ ಮತಕ್ಷೇತ್ರದ ಶಾಸಕ ರಾಜುಗೌಡ ಪಾಟೀಲ ಹೇಳಿದರು.

ಕಲಕೇರಿ ತಾಂಡಾದಲ್ಲಿ 2022-23ನೇ ಸಾಲಿನ ಜಲಜೀವನ ಮಿಷನ್ ಯೋಜನೆ ಅಡಿಯಲ್ಲಿ ಅಂದಾಜು 64 ಲಕ್ಷದ ರೂ. ವೆಚ್ಚದ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.

ಗ್ರಾಪಂ ಅಧ್ಯಕ್ಷ ರಾಜಹ್ಮದ ಸಿರಸಗಿ, ಪರಶುರಾಮ ಬೇಡರ, ಹಾಜೀಪಾಷಾ ಜಾಗಿರದಾರ, ಕಾಶೀಮ ನಾಯ್ಕೋಡಿ, ವೀರಘಂಟಿ ಬಡಿಗೇರ, ವಿಶ್ವನಾಥ ರಾಠೋಡ, ಚಾಂದಪಾಷಾ ಹವಾಲ್ದಾರ, ದೇವೀಂದ್ರ ಬಡಿಗೇರ, ಗ್ರಾಮೀಣ ಕುಡಿಯುವ ನೀರು- ನೈರ್ಮಲ್ಯ ಇಲಾಖೆಯ ಪಿ.ಬಿ.ನಾಯಕ, ಪಿಡಿಒ ಎನ್.ಎಸ್.ದೊಡಮನಿ, ಗುತ್ತಿಗೆದಾರ ಎನ್.ಎಸ್.ಚವ್ಹಾಣ, ಮುನ್ನಾಸಿರಸಗಿ ಇತರರಿದ್ದರು.