- ನಗರಾಭಿವೃದ್ಧಿ ಸಚಿವರಿಗೆ ಶಾಸಕ ಅಶೋಕ್ ರೈ ಮನವಿ
ಪುತ್ತೂರು: ವಿಟ್ಲ ಪಟ್ಟಣ ಪಂಚಾಯಿತಿ ವ್ಯಾಪ್ತಿಯನ್ನು ಪುತ್ತೂರು ನಗರ ಯೋಜನಾ ಪ್ರಾಽಕಾರದ ವ್ಯಾಪ್ತಿಗೆ ಸೇರಿಸಲು ಉದ್ದೇಶಿಸಿದ್ದರಿಂದ ಭೂ ಪರಿವರ್ತನೆ( ಕನ್ವರ್ಷನ್) ಮಾಡಲು ಸಾಧ್ಯವಾಗುತ್ತಿಲ್ಲ. ಮಹಾಯೋಜನೆ ಅನುಮೋದನೆ ಆಗುವವರೆಗೆ ವಿಟ್ಲ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಭೂಪರಿವರ್ತನೆಗೆ ಅವಕಾಶ ಮಾಡಿಕೊಡುವಂತೆ ಶಾಸಕ ಅಶೋಕ್ ಕುಮಾರ್ ರೈ ನಗರಾಭಿವೃದ್ಧಿ ಸಚಿವ ಯತೀಂದ್ರ ಸಿದ್ದರಾಮ್ಯಯ್ಯ ಅವರಿಗೆ ಮನವಿ ಸಲ್ಲಿಸಿದರು.
ಮಹಾಯೋಜನೆಗೆ ಅನುಮೋದನೆ ಆಗುವವರೆಗೆ ಸದರಿ ಪ್ರದೇಶವನ್ನು ಕೃಷಿ ವಲಯ ಎಂದು ಪರಿಗಣಿಸಿ ಯಾವುದೇ ಜಮೀನನ್ನು ಭೂಪರಿವರ್ತನೆ (ಕನ್ವರ್ಶನ್) ಮಾಡದಂತೆ ಸಕಾರದ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ. ಸದರಿ ಮಹಾಯೋಜನೆ ಅನುಮೋದನೆಗೆ ಸಾಕಷ್ಟು ಸಮವಕಾಶವಿದ್ದು, ಪ್ರಸ್ತುತ ಹಲವಾರು ಸಾರ್ವಜಕರು ಮನೆ ನಿರ್ಮಾಣ, ಮತ್ತಿತರ ಉದ್ದೇಶಕ್ಕೆ ಭೂಪರಿರ್ವತನೆಗೆ ಸಲ್ಲಿಸಿರುವ ಅರ್ಜಿಗಳು ಬಾಕಿಯಾಗಿವೆ. ಆದ್ದರಿಂದ ಮಹಾಯೋಜನೆ ಅನುಮೋದನೆ ಆಗುವವರೆಗೆ ವಿಟ್ಲ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಭೂಪರಿವರ್ತನೆಗೆ ಅವಕಾಶ ಮಾಡಿಕೊಡಬೇಕೆಂದು ಮನವಿಯಲ್ಲಿ ತಿಳಿಸಿದ್ದಾರೆ.