ಯಲಬುರ್ಗಾ: ರಾಜ್ಯ ಸರ್ಕಾರ ಜನತೆಗೆ ಐದು ಗ್ಯಾರಂಟಿ ಯೋಜನೆ ಜಾರಿಗೊಳಿಸಿದೆ. ಇಂಥ ಕಲ್ಯಾಣ ಕಾರ್ಯಕ್ರಮಗಳನ್ನು ಬಿಜೆಪಿ ಆಡಳಿತವಿರುವ ದೇಶದ ಯಾವ ರಾಜ್ಯವೂ ಮಾಡಿಲ್ಲ. ಕಾಂಗ್ರೆಸ್ ಸರ್ಕಾರ ಜನಪರವಾದ ಕೆಲಸ ಮಾಡುತ್ತಿದೆ ಎಂದು ಶಾಸಕ ಬಸವರಾಜ ರಾಯರಡ್ಡಿ ಹೇಳಿದರು.
ತಾಲೂಕಿನ ಹೊಸಳ್ಳಿ, ಚಿಕ್ಕೊಪ್ಪ, ರೇಷ್ಮೆನಗರ, ಮುಧೋಳ, ಕರಮುಡಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಸೋಮವಾರ ಜನಸಂಪರ್ಕ ಸಭೆಯಲ್ಲಿ ಮಾತನಾಡಿ, ಉಪಮಾರುಕಟ್ಟೆ ಸಮಿತಿ ಮಂಜೂರಾತಿಗೆ ಸಂಬಂಧಸಿದ ಇಲಾಖೆ ಸಚಿವರಿಗೆ ಪ್ರಸ್ತಾವನೆ ಸಲ್ಲಿಸಿದ್ದು, ಮಂಜೂರಾದರೆ ಚಿಕ್ಕೊಪ್ಪ ಬಳಿ ಇರುವ ರೇಷ್ಮೆ ಇಲಾಖೆ ಜಾಗದಲ್ಲಿ ಆರಂಭಿಸುವ ಚಿಂತನೆ ಇದೆ ಎಂದರು.
ಬಹುಗ್ರಾಮ ಕುಡಿವ ನೀರಿನ ಯೋಜನೆ ಪೂರ್ಣಗೊಂಡಿದ್ದು, ಸೆಪ್ಟೆಂಬರ್‌ನಲ್ಲಿ ಸಿಎಂ ಸಿದ್ದರಾಮಯ್ಯ ಕರೆತಂದು ಲೋಕಾರ್ಪಣೆ ಮಾಡಿಸಲಾಗುವುದು. ಶಿಕ್ಷಣ ಮತ್ತು ಕುಡಿವ ನೀರಿನ ವಿಚಾರದಲ್ಲಿ ಭ್ರಷ್ಟಾಚಾರ ಮಾಡುವುದು ಪಾಪದ ಕೆಲಸ ಎಂದು ಹೇಳಿದರು.
ಕುಡಿವ ನೀರಿನ ಯೋಜನೆಯಾದ ಜೆಜೆಎಂ ಪೈಪ್‌ಲೈನ್ ಕಾಮಗಾರಿ ಸಂಪೂರ್ಣ ಕಳಪೆಯಾಗಿದೆ. ಕಲುಷಿತ ನೀರು ಸೇವಿಸಿ ನಿವಾಸಿಗಳಲ್ಲಿ ರೋಗರುಜಿನಗಳು ಹರಡುತ್ತಿವೆ. ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ಗ್ರಾಪಂ ಅಧ್ಯಕ್ಷೆ ಶಾಂತವ್ವ ಪುರ್ತಗೇರಿ, ತಹಸೀಲ್ದಾರ್ ವಿಠ್ಠಲ ಚೌಗಲೆ, ತಾಪಂ ಇಒ ಸಂತೋಷ ಪಾಟೀಲ್, ಅಧಿಕಾರಿಗಳಾದ ಪ್ರಾಣೇಶ ಹಾದಿಮನಿ, ಎಫ್.ಎಂ.ಕಳ್ಳಿ, ರಮೇಶ ಚಿಣಗಿ, ಮಹಾದೇವಪ್ಪ ಪತ್ತಾರ, ರಿಜ್ವಾನಾಬೇಗಂ, ಚನ್ನಪ್ಪ, ಪ್ರಕಾಶ ಪಾಟೀಲ್, ಸಚಿನ್ ಪಾಟೀಲ್, ಪ್ರಮುಖರಾದ ವೀರನಗೌಡ ಬಳೂಟಗಿ, ಎ.ಜಿ.ಭಾವಿಮನಿ, ರಾಮಣ್ಣ ಸಾಲಭಾವಿ, ಅಂದಾನಗೌಡ ಪಾಟೀಲ್, ಈರಪ್ಪ ಕುಡಗುಂಟಿ, ನಾಗಪ್ಪ ವಡ್ಡರ್, ಆನಂದ ಉಳ್ಳಾಗಡ್ಡಿ, ರಾಜಶೇಖರ ಶ್ಯಾಗೋಟಿ, ಈಶ್ವರ ಅಟಮಾಳಗಿ, ಹುಲಗಪ್ಪ ಬಂಡಿವಡ್ಡರ, ಶರಣಗೌಡ ಬಸಾಪುರ, ನಿಂಗಪ್ಪ ಕಮತರ, ಪುನೀತ ಕೊಪ್ಪಳ ಸೇರಿದಂತೆ ಇತರರಿದ್ದರು.