ವಿಟ್ಲ: ಅಕ್ರಮ ಸಕ್ರಮ ಅರ್ಜಿಗಳನ್ನು ಶೀಘ್ರವೇ ವಿಲೇವಾರಿ ಮಾಡಬೇಕು. ಪುತ್ತೂರು ನಗರಸಭಾ ವ್ಯಾಪ್ತಿಯಿಂದ ೫ ಕಿ.ಮೀ ವ್ಯಾಪ್ತಿಯಲ್ಲಿ ಅಕ್ರಮ ಸಕ್ರಮ ಮಾಡುವಂತಿಲ್ಲ ಎಂಬ ಸುತ್ತೋಲೆಗೆ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ೫ ಕಿ.ಮಿ ಏರ್‌ವೇ ಪ್ರಕಾರ ನಾವು ಹೋದರೆ ಎಲ್ಲಿಯೂ ಅಕ್ರಮ ಸಕ್ರಮ ಮಾಡುವಂತಿಲ್ಲ. ಕೆದಿಲ ಗ್ರಾಮ ಈ ಏರ್‌ವೇ ಅಳತೆಯಿಂದ ಹೊರಗಿದ್ದು, ಆರ್ಯಾಪು, ಬಲ್ನಾಡು, ಕೆಮ್ಮಿಂಜೆ, ಚಿಕ್ಕಮುಡ್ನೂರು, ಬನ್ನೂರು ಗ್ರಾಮಗಳನ್ನು ಭಾಗಶಃ ಎಂದು ಗುರುತಿಸಲಾಗಿದೆ. ರೂಟ್‌ವೇ ಪ್ರಕಾರ ೫ ಕಿಮೀ ವ್ಯಾಪ್ತಿ ಮಾನ್ಯ ಮಾಡಬೇಕಿದೆ ಅಕ್ರಮ-ಸಕ್ರಮ ಫೈಲನ್ನು ಪೆಂಡಿಂಗ್ ಮಾಡಬೇಡಿ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.
ವಿಟ್ಲದ ಬೊಬ್ಬೆಕೇರಿ ಸಭಾಂಗಣದಲ್ಲಿ ಕಂದಾಯ ಇಲಾಖೆಯ ಅಽಕಾರಿಗಳ ಸಭೆ ನಡೆಸಿ ಮಾತನಾಡಿದರು.
ಮನೆ ಇಲ್ಲದವರಿದ್ದಾರೆ, ಮೂರು ಹೊತ್ತಿನ ಊಟಕ್ಕೆ ತೊಂದರೆ ಇದ್ದವರಿದ್ದಾರೆ, ಅನಾರೋಗ್ಯದಿಂದ ಇದ್ದವರು ಇದ್ದಾರೆ. ಅವರಿಗೆ ಅನ್ಯಾಯವಾಗಬಾರದು. ಅವರಿಗೆ ಸ್ವಂತ ಮನೆಯಾಗಬೇಕೆಂಬ ಆಸೆಯಿಲ್ಲವೇ ಮಾಡಿಕೊಳ್ಳಲಿ ಸೈಟ್ ಕೊಡಿ. ಅವರು ಅರ್ಜಿ ಹಾಕಿದ ಗ್ರಾಮದಲ್ಲಿ ಜಾಗ ಇಲದಿದ್ದರೆ ಬೇರೆ ಗ್ರಾಮದಲ್ಲಾದರೂ ವ್ಯವಸ್ಥೆ ಮಾಡಬೇಕು. ಯಾವುದೇ ಕಾರಣಕ್ಕೂ ಸತಾಯಿಸಬೇಡಿ. ಕೆದಿಲ ಗ್ರಾಮದಲ್ಲಿ ೨೦ ಎಕರೆ ಗೋಮಾಳ ಜಾಗ ಈಗ ಯಾರ ವಶದಲ್ಲಿದೆ ಎಂದು ವರದಿ ನೀಡಬೇಕು. ವಿಟ್ಲ ನಗರದಲ್ಲಿ ೯೪ಸಿಸಿ ಅಡಿಯಲ್ಲಿ ೧.೩೮ ಸೆಂಟ್ಸ್ ಜಾಗ ನೀಡಿದರೆ ಮನೆ ಕಟ್ಟಲು ಸಾಧ್ಯವಿಲ್ಲ. ಬ್ಯಾಂಕ್‌ನಿಂದ ಸಾಲ ಸೌಲಭ್ಯವೂ ಸಿಗುವುದಿಲ್ಲ. ಎಲ್ಲಿಯೂ ಇಲ್ಲದ ಕಾನೂನು ವಿಟ್ಲದಲ್ಲಿ ಜಾರಿಗೊಳಿಸಬಾರದು ಮತ್ತು ಅರ್ಜಿದಾರರಿಗೆ ೨.೭೫ ಸೆಂಟ್ಸ್ ಜಾಗ ನೀಡಬೇಕಿದೆ ಎಂದು ತಿಳಿಸಿದರು.
ವಿಟ್ಲ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ನಿವೇಶನಕ್ಕೆ ೧೦೦೦ ಅರ್ಜಿಗಳು ಬಂದಿದ್ದು, ನೆಲ್ಲಿಗುಡ್ಡೆಯಲ್ಲಿ ೭ ಎಕರೆ ಜಾಗ ಗುರುತಿಸಲಾಗಿದೆ. ಇಂದಿರಾ ಕ್ಯಾಂಟೀನ್ ಕಾಮಗಾರಿ ಶೀಘ್ರ ಮುಗಿಸಬೇಕು. ವಿಟ್ಲದಲ್ಲಿ ಕುಡಿಯುವ ನೀರಿನ ಸಮಸ್ಯೆಯ ಬಗ್ಗೆ ಕರೆಗಳು ಬರುತ್ತಿವೆ. ಇದಕ್ಕಾಗಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಸೇರಿಸಿದ್ದೇನೆ. ಪಟ್ಟಣ ಪಂಚಾಯಿತಿ ಆಡಳಿತ ಭಾರಿ ನಿಧಾನದಲ್ಲಿದ್ದು, ಬೇಸಿಗೆಯಲ್ಲಿ ವಾರದಲ್ಲಿ ನಾಲ್ಕು ದಿನಗಳು ನೀರು ಇಲ್ಲದೆ ಇದ್ದ ಘಟನೆಯೂ ನಡೆದಿದೆ. ಕಚೇರಿಯಲ್ಲೇ ಕುಳಿತುಕೊಳ್ಳುವುದರಿಂದ ಜನರ ಸಮಸ್ಯೆ ಗೊತ್ತಾಗುವುದಿಲ್ಲ. ಅಽಕಾರಿಗಳ ಸಭೆಗೆ ಅಽಕಾರಿಗಳೇ ಗೈರಾದರೆ ನಾವು ಸಭೆ ನಡೆಸುವುದು ಹೇಗೆ? ಜನರ ಸಮಸ್ಯೆ ಪರಿಹರಿಸುವುದು ಹೇಗೆ? ಮುಂದೆ ಇದು ಮರುಕಳಿಸಬಾರದು ಎಂದು ಹೇಳಿದರು.
ಬಂಟ್ವಾಳ ತಹಸೀಲ್ದಾರ್ ಅರ್ಚನಾ, ಬಂಟ್ವಾಳ ತಾ.ಪಂ.ಕಾರ್ಯನಿರ್ವಹಣಾಽಕಾರಿ ಮಹೇಶ್ ಹೊಳ್ಳ, ಕ್ಷೇತ್ರ ಶಿಕ್ಷಣಾಽಕಾರಿ ಮಂಜುನಾಥ್, ವಿಟ್ಲ ಪಟ್ಟಣ ಪಂಚಾಯಿತಿ ಮುಖ್ಯಾಽಕಾರಿ ಗೋಪಾಲ ನಾಯ್ಕ್ ಉಪಸ್ಥಿತರಿದ್ದರು.
*ಪ್ರಕೃತಿ ವಿಕೋಪ ಹಾನಿ: ಪ್ರಕೃತಿ ವಿಕೋಪದಿಂದಾಗಿ ಬಂಟ್ವಾಳ ತಾಲೂಕು ವ್ಯಾಪ್ತಿಯ ೯ ಗ್ರಾಮ ಪಂಚಾಯಿತಿ ಪೈಕಿ ಅಳಿಕೆ ಗ್ರಾಮ ಪಂಚಾಯಿತಿಯಲ್ಲಿ ಮೂರು ಮನೆಗಳಿಗೆ ಹಾನಿಯಾಗಿದೆ. ಇಡ್ಕಿದು ಗ್ರಾಮ ಪಂಚಾಯಿತಿಯಲ್ಲಿ ಎರಡು ಮನೆಗಳಿಗೆ ಹಾನಿಯಾಗಿದೆ. ಪೆರ್ನೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೃಷಿಗೆ ಹಾನಿಯಾಗಿದೆ. ಪುಣಚ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಒಂದು ಕೃಷಿ ಹಾನಿ ಹಾಗೂ ಮೂರು ಮನೆಗಳಿಗೆ ಹಾನಿಯಾಗಿದೆ. ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಅಽಕಾರಿಗಳು ಮಾಹಿತಿ ನೀಡಿದರು.