ಜಿಲ್ಲೆ

9 ರಂದು ಇಂಡಿಯಾನಾ ಹಾರ್ಟ್ ಕ್ಲಿನಿಕ್‌ಗೆ ಚಾಲನೆ

ಚಿತ್ರದುರ್ಗ: ಜಿಲ್ಲೆಯ ಏಕೈಕ ಹೃದ್ರೋಗ ಚಿಕಿತ್ಸಾ ಕೇಂದ್ರ ಇಂಡಿಯಾನಾ ಎಸ್‌ಜೆಎಂ ಹಾರ್ಟ್ ಸೆಂಟರ್,ನಗರದ ಸಿ.ಕೆ.ಪುರದ ಕೆಎಸ್‌ಆರ್‌ಟಿಸಿ ಹಳೆ ಡಿಪೊ ರಸ್ತೆಯಲ್ಲಿ ಇಂಡಿಯಾನ ಹಾರ್ಟ್ ಕ್ಲಿನಿಕ್‌ನ್ನು ಸ್ಥಾಪಿಸಿದೆ. ಅ.9ರಂದು ಬೆಳಗ್ಗೆ 11 ಗಂಟೆಗೆ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಕ್ಲಿನಿಕ್‌ಗೆ ಚಾಲನೆ ನೀಡುವರು.

ಡಿಎಚ್‌ಒ ಡಾ.ಆರ್.ರಂಗನಾಥ್,ಬಸವೇಶ್ವರ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಡೀನ್ ಡಾ.ಜಿ.ಪ್ರಶಾಂತ್,ವೈದ್ಯಕೀಯ ಅಧೀಕ್ಷಕ ಡಾ. ಎಲ್.ಪಾಲಾಕ್ಷಯ್ಯ,ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಜಿಲ್ಲಾ ಸಂಯೋಜಕ ಡಾ.ಚಂದ್ರಶೇಖರ್ ರಾಜು,ಮಂಗಳೂರಿನ ಇಂಡಿಯಾನ ಆಸ್ಪತ್ರೆ ಮತ್ತು ಹಾರ್ಟ್ ಇನ್ಸಿಟ್ಯೂಟ್ ವ್ಯವಸ್ಥಾಪಕ ನಿರ್ದೇಶಕ ಡಾ.ಯೂಸಫ್ ಕುಂಬ್ಳೆ ಮುಖ್ಯಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಹಾರ್ಟ್‌ಸೆಂಟರ್ ಚೀಫ್ ಆಪರೇಟಿಂಗ್ ಆಫೀಸರ್ ರೂಪೇಶ್‌ಕುಮಾರ್ ಶೆಟ್ಟಿ ತಿಳಿಸಿದ್ದಾರೆ.