ಅಫಜಲಪುರ : ಶಾಸಕ ಎಂ.ವೈ.ಪಾಟೀಲ್ ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೆ ಈಡಾಗಿ, ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾದ ಘಟನೆ ಶುಕ್ರವಾರ ಸಂಭವಿಸಿದೆ. ಅಫಜಲಪುರ ತಾಲೂಕಿನ ಜೇವರ್ಗಿ ಬಿ ಗ್ರಾಮದ ಶ್ರೀ ಶಾಂತಲಿಂಗೇಶ್ವರ ಪ್ರೌಢ ಶಾಲೆಯ ಅಡಿಗಲ್ಲು ಸಮಾರಂಭಕ್ಕೆ ತೆರಳಿದ್ದ ಶಾಸಕ ಎಂ.ವೈ.ಪಾಟೀಲ್ ಕಾರ್ಯಕ್ರಮ ಮುಗಿಸಿ, ಜೇವರ್ಗಿ ಬಿ ಕ್ರಾಸ್ ಹತ್ತಿರ ಬರುವ ವೇಳೆ ಚಾಲಕನ ನಿಯಂತ್ರಣ ತಪ್ಪಿಕಾರು ರಸ್ತೆಯ ಪಕ್ಕದ ತಗ್ಗಿಗೆ ಬಿದಿದೆ. ಮುಖಕ್ಕೆ ಹಾಗೂ ಕಾಲಿಗೆ ಪೆಟ್ಟಾಗಿದ್ದು, ಕಲಬುರಗಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು ಸಂಜೆ ಮನೆಗೆ ತೆರಳಿದ್ದಾರೆ.
ಅಫಜಲಪುರ ತಾಲೂಕಿನ ಜೇವರ್ಗಿ ಬಿ ಗ್ರಾಮದ ಪ್ರೌಢ ಶಾಲೆಯ ಅಡಿಗಲ್ಲು ಸಮಾರಂಭ ಮುಗಿಸಿ ಬರುವಾಗ ರಸ್ತೆ ಅಫಘಾತವಾಗಿ ಸಣ್ಣ ಪುಟ್ಟ ಗಾಯಗಳಾಗಿವೆ, ನನ್ನ ಅಭಿಮಾನಿಗಳು, ಹಿತೈಷಿಗಳು, ಕಾರ್ಯಕರ್ತರು ಆತಂಕ ಪಡೆಯುವ ಅಗತ್ಯವಿಲ್ಲ. ಸದ್ಯ ಮನೆಯಲ್ಲೇ ವಿಶ್ರಾಂತಿ ಪಡೆಯುತ್ತಿದ್ದು, ಮತ್ತೆ ಕ್ಷೇತ್ರಕ್ಕೆ ಬರುತ್ತೇನೆ ಜನರು ಬರಬೇಡಿ. | ಎಂ.ವೈ.ಪಾಟೀಲ್ ಶಾಸಕ