ಜಿಲ್ಲೆ

ಶಾಸಕ ಮತ್ತಿಮಡು ಕಾರ್ ಪಲ್ಟಿ

ರಮೇಶ ಮೇಳಕುಂದಾ

ಕಲಬುರಗಿ: ಗ್ರಾಮೀಣ ಕ್ಷೇತ್ರದ ವಿಧಾನಸಭಾ ಕ್ಷೇತ್ರದ ಶಾಸಕ, ಬಿಜೆಪಿ ರಾಜ್ಯ ಕಾರ್ಯದರ್ಶಿ ಬಸವರಾಜ್ ಮತ್ತಿಮಡು ಅವರ ಕಾರ್ ಅಪಘಾತಕ್ಕೆ ಈಡಾಗಿದೆ.

ಭಾನುವಾರ ಬೆಳಿಗ್ಗೆ ತಾಲೂಕಿನ ಪಾಳಾ ಗ್ರಾಮದಿಂದ ಶಹಾಬಾದ್ ಗೆ ಹೊರಟಿರುವಾಗ ಚಾಲಕನ ನಿಯಂತ್ರಣ ತಪ್ಪಿ ಕಾರ್ ಪಲ್ಟಿಯಾಗಿದೆ.

ಶಾಸಕರು ಮತ್ತು ಕಾರ್ ನಲ್ಲಿರುವ ಮುಖಂಡರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ.