ಶಿರಸಿ: ಮೂಡಗೆರೆ ಬಿಜೆಪಿ ಎಂಎಲ್‌ಎ ಎಂ.ಪಿ. ಕುಮಾರಸ್ವಾಮಿ ಶಿರಸಿ ಸ್ಪೀಕರ್ ಕಚೇರಿಯಲ್ಲಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಶುಕ್ರವಾರ ರಾಜೀನಾಮೆ ಸಲ್ಲಿಸಿದರು.
ಮೂರು ಬಾರಿ ಮೂಡಗೆರೆ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದಿದ್ದೇನೆ.
ಆದರೆ, ಈ ಬಾರಿ ಕೆಲ ನಾಯಕರಿಂದಾಗಿ ಬಿಜೆಪಿ ಟಿಕೆಟ್ ಸಿಕ್ಕಿಲ್ಲ. ಹೀಗಾಗಿ, ಪಕ್ಷದ ನಾಯಕರ ನಡೆಗೆ ಬೇಸರಗೊಂಡು ಪಕ್ಷ ತೊರೆಯಲು ನಿರ್ಧರಿಸಿದ್ದೇನೆ. ‘
ನನ್ನನ್ನು ಹುಚ್ಚು ನಾಯಿಯಂತೆ ಪಕ್ಷದಿಂದ ಓಡಿಸಿದ್ರು. ಇದಕ್ಕೆಲ್ಲ ಸಿ.ಟಿ. ರವಿ ಹಾಗೂ ಪ್ರಾಣೇಶ ಕಾರಣ.
ಅವರೇ ಜನರನ್ನು ಕಳುಹಿಸಿ, ಜಗಳ ಮಾಡಿಸಿದರು. ನನ್ನ ಬಗ್ಗೆ ಕೆಟ್ಟ ಅಭಿಪ್ರಾಯ ಬರೋ ರೀತಿ ಮಾಡಿದರು. ಸಿ.ಟಿ. ರವಿ ಬಿಜೆಪಿಗೆ ಮಾರಕವಾಗಿ ಪರಿಣಮಿಸುತ್ತಾರೆ. ಮುಂದಿನ ಬಾರಿ ಜನರೇ ತಕ್ಕ ಪಾಠ ಕಲಿಸುತ್ತಾರೆ’ ಎಂದರು.
ನನಗೆ ಇನ್ನೂ ವಯಸ್ಸಾಗಿಲ್ಲ. ಬೇರೆ ಪಕ್ಷದಿಂದ ಸ್ಪರ್ಧೆ ಮಾಡುತ್ತೇನೆ. ಜೆಡಿಎಸ್ ಪಕ್ಷದವರಿಂದಲೂ ಕರೆ ಬಂದಿದೆ. ಸ್ವತಂತ್ರವಾಗಿ ಅಥವಾ ಬೇರೆ ಪಕ್ಷ ಸೇರುವುದೋ ಶೀಘ್ರವೇ ನಿರ್ಧರಿಸಲಾಗುವುದು ಎಂದರು.