ಜಿಲ್ಲೆ

ಕಾರ್ಕಳ ಅತ್ಯಾಚಾರ ರಾಜ್ಯವೇ ತಲೆ ತಗ್ಗಿಸುವ ಕೃತ್ಯ : ಶಾಸಕ ಕಾಮತ್

Mangaluru - Hariprasad Rai


ಕಾರ್ಕಳದಲ್ಲಿ ಹಿಂದೂ ಯುವತಿಯನ್ನು ಅಲ್ತಾಫ್‌ ಎಂಬ ದುರುಳ ತನ್ನ ಸಹಚರರೊಂದಿಗೆ ಅಪಹರಿಸಿ ಮಾದಕ ದ್ರವ್ಯ ನೀಡಿ ಗ್ಯಾಂಗ್ ರೇಪ್ ನಡೆಸಿ ಅಟ್ಟಹಾಸ ಮೆರೆದಿದ್ದು, ಇಂತಹ ವಿಕೃತ ಮನಸ್ಥಿತಿಗೆ ಯಾವುದೇ ಕರುಣೆ ತೋರದೇ ಇಡೀ ದೇಶಕ್ಕೆ ಮಾದರಿಯಾಗುವಂತಹ ಗಲ್ಲುಶಿಕ್ಷೆಯಾಗಬೇಕೆಂದು ಶಾಸಕ ವೇದವ್ಯಾಸ ಕಾಮತ್ ರವರು ಆಗ್ರಹಿಸಿದರು.
ಇಡೀ ರಾಜ್ಯವೇ ತಲೆತಗ್ಗಿಸುವಂತಹ ಘಟನೆ ಕಾರ್ಕಳದಲ್ಲಿ ನಡೆದಿದ್ದು ಕರ್ನಾಟಕದಲ್ಲೀಗ ಭ್ರಷ್ಟಾಚಾರ, ಕೊಲೆ, ದರೋಡೆ, ಬಿಟ್ಟರೆ ಅತ್ಯಾಚಾರಗಳೇ ದೈನಂದಿನ ಚಟುವಟಿಕೆಯಾಗಿದೆ. ಅದರಲ್ಲೂ ಹಿಂದೂ ಸಮಾಜವೇ ಇಲ್ಲಿ ಹೆಚ್ಚಿನ ಬಲಿಪಶುವಾಗುತ್ತಿರುವುದು ದುರಂತ. ಸ್ವತಃ ರಾಜ್ಯ ಸರ್ಕಾರವೇ ಓಲೈಕೆ ರಾಜಕಾರಣಕ್ಕಾಗಿ ನೀಚರ ಬೆನ್ನಿಗೆ ನಿಂತು ಅಮಾಯಕ ಬ್ರದರ್‌ ಗಳು ಎನ್ನುತ್ತಿದ್ದರೆ ಇನ್ನೇನಾಗುತ್ತದೆ? ನಾವೇನೇ ಮಾಡಿದರೂ ಈ ಸರ್ಕಾರ ನಮ್ಮ ಪರವಾಗಿದೆ ಎಂಬ ಹುಂಬ ಧೈರ್ಯವೇ ಜಿಹಾದಿ ಶಕ್ತಿಗಳಿಗೆ ನೈತಿಕ ಬೆಂಬಲವಾಗಿದ್ದು, ಕೊನೆಪಕ್ಷ ಈ ಪ್ರಕರಣದಲ್ಲಾದರೂ ಕಾಂಗ್ರೆಸ್ ಸರ್ಕಾರ ತನ್ನ ದರಿದ್ರ ಓಲೈಕೆ ರಾಜಕಾರಣವನ್ನು ಪಕ್ಕಕ್ಕಿಟ್ಟು ಸಂತ್ರಸ್ತ ಯುವತಿಗೆ ನ್ಯಾಯ ಒದಗಿಸಬೇಕೆಂದರು.
ಕರಾವಳಿಯಲ್ಲಿ ಈಗಾಗಲೇ ವ್ಯವಸ್ಥಿತ ಡ್ರಗ್ಸ್ ಜಾಲವು ಹೆಚ್ಚುತ್ತಿದ್ದು ಈ ಬಗ್ಗೆ ರಾಜ್ಯ ಸರ್ಕಾರವನ್ನು ನಂಬಿ ಕೂರದೇ ಸ್ವತಃ ಪ್ರತಿಯೊಬ್ಬ ಮನೆಯವರೂ ಜಾಗೃತರಾಗಿರಬೇಕು ಮತ್ತು ಪೊಲೀಸ್ ಇಲಾಖೆ ಈ ಜಾಲದ ಹೆಡೆಮುರಿ ಕಟ್ಟುವ ಮೂಲಕ ಮುಂದಾಗಲಿರುವ ಅನಾಹುತವನ್ನು ತಪ್ಪಿಸಬೇಕೆಂದು ಶಾಸಕರು ಆಗ್ರಹಿಸಿದರು.