ಜಿಲ್ಲೆ

ಸವದತ್ತಿ‌ ಕ್ಷೇತ್ರದಲ್ಲಿ 10.50 ಕೋಟಿ ರೂ. ವೆಚ್ಚದ ಕಾಮಗಾರಿಗೆ ಚಾಲನೆ

ಮಂಜುನಾಥ ಕೋಳಿಗುಡ್ಡ

ವಿಜಯವಾಣಿ ಸುದ್ದಿಜಾಲ ಬೆಳಗಾವಿ

ರಾಜ್ಯದಲ್ಲಿ ಅಭಿವೃದ್ಧಿ ಹೊಂದುತ್ತಿರುವ ಕ್ಷೇತ್ರದಲ್ಲಿ ಒಂದಾಗಿರುವ ಸವದತ್ತಿ ಯಲ್ಲಮ್ಮ‌ವಿಧಾನಸಭಾ ಕ್ಷೇತ್ರದಲ್ಲಿ ಏಕಕಾಲಕ್ಕೆ ಅಂದಾಜು 10.50 ಕೋಟಿ ರೂ. ವೆಚ್ಚದ ಕಾಮಗಾರಿ ಗೆ ಶಾಸಕ ವಿಶ್ವಾಸ ವೈದ್ಯ ಚಾಲನೆ‌ ನೀಡುವ ಮೂಲಕ ಅಭಿವೃದ್ಧಿ ಕೆಲಸಕ್ಕೆ ವೇಗ ಹೆಚ್ಚಿಸಿದ್ದಾರೆ.

ಮುನವಳ್ಳಿ-ತೆಗ್ಗಿಹಾಳ ರಸ್ತೆಯಲ್ಲಿರುವ ಸಾರ್ವಜನಿಕ ಸ್ಮಶಾನದ ಸಮಗ್ರ ಅಭಿವೃದ್ಧಿಗೆ 2 ಕೋಟಿ ರೂ.,ಚುಳಕಿ ಮತ್ತು ಕನಕಿಕೊಪ್ಪ ಗ್ರಾಮಗಳ ನಡುವಿನ 4.95 ಕೋಟಿ ರೂ. ವೆಚ್ಚದ ಪ್ರಮುಖ ಸಂಪರ್ಕ ರಸ್ತೆಯ ಸುಧಾರಣಾ ಕಾಮಗಾರಿಗೆ, ಮಲಪ್ರಭಾ ಹಿನ್ನೀರಿನ ಪ್ರಮುಖ ಪ್ರದೇಶವಾದ ಗೊರವನಕೊಳ್ಳ ಕ್ರಾಸ್‌ನ ಬಳಿಯಿರುವ ಶಲ ಪ್ರಕಾಶ ಇನಾಮದಾರ ಅವರ ಹೊಲದಿಂದ ಆರಂಭಗೊಂಡು, ಕಟಮಳ್ಳಿ ಕ್ರಾಸ್‌ನಲ್ಲಿರುವ ಜಕ್ಕಪ್ಪ ಶಂಭುಲಿಂಗ ಕಂಬಾರ ಅವರ ಹೊಲದ ವರೆಗೆ ವಿಸ್ತರಣೆಹೆ‌2.25 ಕೋಟಿ ರೂ., ಶಿಂಗಾರಕೊಪ್ಪ ಏತ ನೀರಾವರಿ ಯೋಜನೆಯಡಿ 57 ಲಕ್ಷ ರೂ.ವೆಚ್ಚದಲ್ಲಿ ಸೇವಾ ರಸ್ತೆ ಕಾಮಗಾರಿಗೆ, ಸವದತ್ತಿ ಶಾಖಾ ಕಾಲುವೆಯ ಕಿಲೋಮೀಟರ್ (ಕಿ.ಮೀ) 3 ಮತ್ತು 4 ರ ನಡುವಿನ ನಿರ್ದಿಷ್ಟ ವ್ಯಾಪ್ತಿಯಲ್ಲಿ 57ಲಕ್ಷ ರೂ. ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದ್ದಾರೆ.

....

ಬಾಕ್ಸ್

ಸವದತ್ತಿ ಕ್ಷೇತ್ರದ ಪ್ರತಿ ಹಳ್ಳಿಗೂ ಉತ್ತಮ ಸಂಪರ್ಕ ವ್ಯವಸ್ಥೆ ಒದಗಿಸುವುದು ನಮ್ಮ ಪ್ರಮುಖ ಗುರಿ. ಚುಳಕಿ-ಕನಕಿಕೊಪ್ಪ ರಸ್ತೆಯು ಕೇವಲ ಸಂಪರ್ಕ ರಸ್ತೆಯಲ್ಲ, ಇದು ಈ ಭಾಗದ ಜನರ ಆರ್ಥಿಕ ಚಟುವಟಿಕೆಗಳ ಬೆನ್ನೆಲುಬು. ಕೃಷಿ ಉತ್ಪನ್ನಗಳನ್ನು ಮಾರುಕಟ್ಟೆಗೆ ಸಾಗಿಸಲು ಅನುಕೂಲವಾಗುವಂತೆ ಹಾಗೂ ವಿದ್ಯಾರ್ಥಿಗಳು ಶಾಲೆ-ಕಾಲೇಜುಗಳಿಗೆ ಸುಲಭವಾಗಿ ತೆರಳಲು ಸಾಧ್ಯವಾಗುವಂತೆ ಉತ್ತಮ ಗುಣಮಟ್ಟದ ರಸ್ತೆಯನ್ನು ನೀಡುವ ಗುರಿ ನನ್ನದು ಎಂದು ಶಾಸಕ‌ ವಿಶ್ವಾಸ ವೈದ್ಯ ತಿಳಿಸಿದ್ದಾರೆ.