ಮಾನ್ವಿಯಲ್ಲಿ ಬುಧವಾರ ಇ-ಸೇವೆ ಹಾಗೂ ಉಚಿತ ಕಾನೂನು ಸೇವಾ ಕೇಂದ್ರವನ್ನು ಶಾಸಕ ಹಂಪಯ್ಯ ನಾಯಕ ಉದ್ಘಾಟಿಸಿದರು. ತಹಸೀಲ್ದಾರ್ ರಾಜು ಪಿರಂಗಿ, ನ್ಯಾಯವಾದಿಗಳ ಸಂಘದ ಅಧ್ಯಕ್ಷ ರವಿಕುಮಾರ ಪಾಟೀಲ್, ಪುರಸಭೆ ಮುಖ್ಯಾಧಿಕಾರಿ ಗಂಗಾಧರ, ಉಪ ತಹಸೀಲ್ದಾರ್ ವಿರುಪಣ್ಣ, ಕಂದಾಯ ನೀರಿಕ್ಷಕ ಚರಣಸಿಂಗ್ ಇನ್ನಿತರರಿದ್ದರು.  
ಜಿಲ್ಲೆ

ಕಾನೂನು ಸೇವಾ ಕೇಂದ್ರ ಸದುಪಯೋಗಪಡಿಸಿಕೊಳ್ಳಿ

ಮಾನ್ವಿ: ಸಾರ್ವಜನಿಕರ, ರೈತರ ಜಮೀನು ವ್ಯಾಜ್ಯಗಳು ಸೇರಿದಂತೆ ಅಗತ್ಯವಾದ ಕಾನೂನು ಸೇವೆಗಳನ್ನು ನ್ಯಾಯವಾದಿಗಳು ಇನ್ನು ಮುಂದೆ ಉಚಿತವಾಗಿ ಮಾರ್ಗದರ್ಶನ ಮಾಡಲಿದ್ದಾರೆ ಎಂದು ಶಾಸಕ ಹಂಪಯ್ಯ ನಾಯಕ ಹೇಳಿದರು.

ಕಾನೂನು ಸೇವೆಗಳ ಸೇವೆ

ಪಟ್ಟಣದ ತಹಸೀಲ್ದಾರ್ ಕಚೇರಿ ಆವರಣದಲ್ಲಿ ಬುಧವಾರ ಉಚಿತ ಕಾನೂನು ಸೇವಾ ಕೇಂದ್ರ ಉದ್ಘಾಟಿಸಿ ಮಾತನಾಡಿದರು. ಉಚಿತ ಕಾನೂನು ಅರಿವು-ನೆರವು ಕಾರ್ಯಕ್ರಮಗಳಿಂದ ಜನರಿಗೆ ಸಾಕಷ್ಟು ಅನುಕೂಲವಾಗಿದೆ ಎಂದರು.

ನ್ಯಾಯವಾದಿಗಳ ತಾಲೂಕು ಸಂಘದ ಅಧ್ಯಕ್ಷ ರವಿಕುಮಾರ ಪಾಟೀಲ್ ವಕೀಲ ಮಾತನಾಡಿ, ಕಾನೂನು ಸೇವಾ ಸಮಿತಿಯು ವಕೀಲರನ್ನು ನೇಮಕ ಮಾಡಿ ಕಂದಾಯ ಇಲಾಖೆಯ ಆವರಣದಲ್ಲಿ ಸಾರ್ವಜನಿಕರಿಗೆ ಅಗತ್ಯ ಕಾನೂನು ಸೇವೆಗಳನ್ನು ಉಚಿತವಾಗಿ ನೀಡಲಿದೆ. ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು