ಜಿಲ್ಲೆ

ಹಂಪಿ ಶುಗರ್ ್ಸಗೆ ಶಾಸಕ ಎಚ್.ಆರ್.ಗವಿಯಪ್ಪ ಅಡ್ಡಗಾಲು

ಭೂ ಮಂಜೂರಾತಿ ಆದೇಶ ರದ್ದುಗೊಳಿಸಲು ಆಗ್ರಹ

ವೀರೇಂದ್ರ ನಾಗಲದಿನ್ನಿ ಹೊಸಪೇಟೆ
ಈ ಭಾಗದ ಕಬ್ಬು ಬೆಳೆಗಾರರ ದಶಕಗಳ ಬೇಡಿಕೆಯಾಗಿದ್ದ ಸಕ್ಕರೆ ಕಾರ್ಖಾನೆ ಸ್ಥಾಪನೆಗೆ ಆಡಳಿತಾತ್ಮಕ ಪ್ರಕ್ರಿಯೆಗಳಿಗೆ ಹಿಂದಿನ ಬಿಜೆಪಿ ಸರ್ಕಾರ ಚಾಲನೆ ನೀಡಿದ್ದರಿಂದ ರೈತರಲ್ಲಿ ಹೊಸ ಭರವಸೆ ಮೂಡಿಸಿತ್ತು. ಆದರೆ, ಉದ್ದೇಶಿತ ಸಕ್ಕರೆ ಕಾರ್ಖಾನೆಗೆ ಭೂಮಿ ಮಂಜೂರು ಮಾಡಿರುವ ಆದೇಶವನ್ನು ರದ್ದುಗೊಳಿಸುವಂತೆ ಕೋರಿ ಶಾಸಕ ಎಚ್.ಆರ್.ಗವಿಯಪ್ಪ ಜಿಲ್ಲಾಡಳಿತಕ್ಕೆ ಪತ್ರ ಬರೆಯುವ ಮೂಲಕ ಅಡ್ಡಗಾಲು ಹಾಕಿದ್ದಾರೆ.

ಹೊಸಪೇಟೆಯಲ್ಲಿ ೧೯೩೪ ರಲ್ಲಿ ಸ್ಥಾಪನೆಗೊಂಡಿದ್ದ ಐಎಸ್‌ಆರ್ ಸಕ್ಕರೆ ಕಾರ್ಖಾನೆ ಪರಿಸರ ಮಾಲಿನ್ಯ, ಕಬ್ಬು ಪೂರೈಕೆ ಸಮಸ್ಯೆ, ನಷ್ಟದ ಹಾದಿ ಮತ್ತಿತರೆ ಕಾರಣಗಳಿಂದಾಗಿ ೨೦೧೬ರಲ್ಲಿ ಬಾಗಿಲು ಮುಚ್ಚಿತು. ಪರಿಣಾಮ ಈ ಭಾಗದ ರೈತರು ದೂರದ ಕಂಪ್ಲಿ, ದಾವಣೆಗೆರೆ ಭಾಗದ ಸಕ್ಕರೆ ಕಾರ್ಖಾನೆಗಳನ್ನು ಅವಲಂಭಿಸುವAತಾಯಿತು. ಕೃಷಿ ವೆಚ್ಚ, ಸಾಗಾಣಿಗೆ ವೆಚ್ಚ ಹೆಚ್ಚಾಗಿದ್ದರಿಂದ ನಿರೀಕ್ಷಿತ ಆದಾಯವಿಲ್ಲದೇ ಕಬ್ಬು ಬೆಳೆಗಾರರು ಸೊರಗಿದ್ದರು. ಇದೇ ಕಾರಣಕ್ಕೆ ಭಾಗಶಃ ರೈತರು ಕಬ್ಬು ಬೆಳೆಯಿಂದವಿಮುಖರಾಗಿದ್ದಾರೆ. ಭತ್ತ, ಬಾಳೆ ಬೆಳೆಗಳತ್ತ ಮುಖ ಮಾಡಿದ್ದರು. ಅದರಲ್ಲೂ ನಿರೀಕ್ಷಿತ ಆದಾಯ ಕಾಣದ ಹಿನ್ನೆಲೆಯಲ್ಲಿ ಸಕ್ಕರೆ ಕಾರ್ಖಾನೆ ಸ್ಥಾಪಿಸಬೇಕು ಎಂಬ ಕೂಗು ವರ್ಷಗಳಿಂದ ಕೇಳಿ ಬರುತ್ತಿದೆ.

ಕಾರ್ಖಾನೆಯಿಂದ ಹೊರಹೊಮ್ಮುವ ಧೂಳು, ದುರ್ವಾಸನೆಯಿಂದ ತಮ್ಮ ಐಷಾರಾಮಿ ಬಂಗ್ಲೆಯಲ್ಲಿ ಜೀವಿಸಲು ಸಮಸ್ಯೆಯಾ ಗುತ್ತದೆ. ಇದೇ ಕಾರಣಕ್ಕೆ ಹಿಂದಿನ ಶಾಸಕ ಹಾಗೂ ಸಚಿವರಾಗಿದ್ದ ಆನಂದ ಸಿಂಗ್ ದುರುದ್ದೇಶದಿಂದ ಐಎಸ್‌ಆರ್ ಶುರ‍್ಸ್ ಬಂದ್ ಮಾಡಿಸಿದ್ದರು ಎಂಬ ಬಲವಾದ ಆರೋಪವಿತ್ತು. ಅದರಿಂದ ಮುಕ್ತರಾಗಲು ಆನಂದ ಸಿಂಗ್ ಹಿಂದಿನ ಬಿಜೆಪಿ ಸರ್ಕಾರದಲ್ಲಿ ಸಂಸದ ಜೆ.ಎಂ.ಸಿದ್ದೇಶ್ವರ ಮೂಲಕ ಮೆ||ಹಂಪಿ ಶುರ‍್ಸ್ ಸ್ಥಾಪನೆಗೆ ಮುಂದಾಗಿದ್ದರು.

೨೦೨೨ರ ನವೆಂಬರ್ ೪ ರಂದು ನಡೆದ ಹೂಡಿಕೆದಾರರ ಸಮಾವೇಶದಲ್ಲಿ ಸಕ್ಕರೆ ಕಾರ್ಖಾನೆ ಸ್ಥಾಪನೆಗೆ ಒಪ್ಪಂದ ಏರ್ಪಟ್ಟಿತ್ತು. ಕಾರ್ಖಾನೆಗೆ ಭೂಮಿ ಮಂಜೂರು ಮಾಡುವಂತೆ ವಿಧಾನಸಭೆ ಚುನಾವಣಾ ಹೊಸ್ತಿಲಲ್ಲಿ(ಮಾ. ೮ ರಂದು)ಸರ್ಕಾರ ಜಿಲ್ಲಾಡಳಿತಕ್ಕೆ ಆದೇಶಿಸಿತ್ತು. ಅದರನ್ವಯ ಜಂಬುನಾಥ ಹಳ್ಳಿ ಗ್ರಾಮದಲ್ಲಿರುವ ಸರ್ಕಾರದ ೮೪.೮೬ ಎಕರೆ ಭೂಮಿಯನ್ನು ಹಂಪಿ ಶುರ‍್ಸ್ಗೆ ಮಂಜೂರಾಗಿದೆ.

ಶಾಸಕರ ಪತ್ರದಲ್ಲೇನಿದೆ?
ಶಾಸಕ ಎಚ್.ಆರ್.ಗವಿಯಪ್ಪ ಜು.೨೭ ರಂದು ಜಿಲ್ಲಾಧಿಕಾರಿಗೆ ಬರೆದ ಪತ್ರ ಬರೆದಿದ್ದು, ಜಂಭುನಾಥಹಳ್ಳಿಯ ೧೧/೧ ಮತ್ತಿತರೆ ಸರ್ವೆ ನಂಬರ್‌ಗಳಲ್ಲಿ ಒಟ್ಟು ೮೪.೮೬ ಎಕರೆ ಜಮೀನನ್ನು ಮೆ||ಹಂಪಿ ಶುರ‍್ಸ್ ಲಿ. ಖಾಸಗಿ ಕಂಪನಿಗೆ ತರಾತುರಿಯಲ್ಲಿ ಮಂಜೂರ ಮಾಡಿ ೨೦೨೩ರ ಮರ್ಚ್ ೧೪ ರಂದು ಆದೇಶಿಸಿದೆ.

ಜಂಭುನಾಥ ಹಳ್ಳಿಯು ಹೊಸಪೇಟೆ ನಗರಸಭೆ ವ್ಯಾಪ್ತಿಯಲ್ಲಿದ್ದು, ಈ ಪ್ರದೇಶದಲ್ಲಿ ಎಕರೆಗೆ ೨ ಕೋಟಿ ರೂ. ಮೌಲ್ಯವಿದೆ. ಆದರೆ, ಸರ್ಕಾರದ ಮಾರ್ಗಸೂಚಿ ದರ ಅಳವಡಿಸಿಕೊಂಡು, ಭೂ ಪರಿವರ್ತನೆ ಶುಲ್ಕ ಪಾವತಿಸಿಕೊಳ್ಳದೇ ಸುಮಾರು ೧೩ ರಿಂದ ೧೪ ಕೋಟಿ ರೂ. ಗೆ ೮೪.೮೬ ಎಕರೆ ಜಾಗವನ್ನು ಖಾಸಗಿ ಕಂಪನಿಗೆ ಮಾರಾಟ ಮಾಡುತ್ತಿದೆ. ಇದರಿಂದಾಗಿ ಸುಮಾರು ೧೫೦ ಕೋಟಿ ರೂ. ಸರ್ಕಾರಕ್ಕೆ ನಷ್ಟವಾಗಲಿದೆ. ಅವೈಜ್ಞಾನಿಕವಾದ ಈ ಕಡತವನ್ನು ಮರು ಪರಿಶೀಲಿಸಬೇಕು. ಖಾಸಗಿ ಕಂಪನಿಗೆ ಮಾಡಿರುವ ಭೂ ಮಂಜೂರಾತಿ ಆದೇಶವನ್ನು ಹಿಂಪಡೆದು, ವಸತಿ ರಹಿತ ಬಡವರ ವಸತಿಗಾಗಿ ಮಂಜೂರು ಮಾಡಬೇಕು ಎಂದು ಕೋರಿದ್ದಾರೆ.

ಕರೆ ಸ್ವೀಕರಿಸದ ಹಾಲಿ- ಮಾಜಿ ಎಂಎಲ್‌ಎ:

ಶಾಸಕರ ನಡೆಗೆ ಕಬ್ಬು ಬೆಳೆಗಾರರು ಮತ್ತು ರೈತರಿಂದ ಪರ ವಿರೋಧ ಚರ್ಚೆ ಶುರುವಾಗಿದೆ. ಆದರೆ, ಈ ಕುರಿತು ಪ್ರತಿಕ್ರಿಯೆಗೆ ಹಾಲಿ ಮತ್ತು ಮಾಜಿ ಶಾಸಕರು ಫೋನ್ ಸಂಪರ್ಕಕ್ಕೆ ಸಿಗಲಿಲ್ಲ. ಮೆಸೇಜ್ ಮಾಡಿದರೂ, ಪ್ರತಿಕ್ರಿಯಿಸಲಿಲ್ಲ.

ಐಎಸ್‌ಆರ್‌ಗಿಂತ 3 ಪಟ್ಟು ದೊಡ್ಡದು
ಈಗಾಗಲೇ ಸ್ಥಗಿತಗೊಂಡಿರುವ ಐಎಸ್‌ಆರ್ ಕಾರ್ಖಾನೆಗಿಂತ ಉದ್ದೇಶಿತ ಮ||ಹಂಪಿ ಶುರ‍್ಸ್ ಮೂರು ಪಟ್ಟು ದೊಡ್ಡದು. ಐಎಸ್‌ಆರ್ ಪ್ರತಿ ದಿನಕ್ಕೆ ೨,೫೦೦ ಟನ್ ಕಬ್ಬು ನುರಿಯುತ್ತಿತ್ತು. ಆದರೆ, ಉದ್ದೇಶಿತ ಹೊಸ ಕಾರ್ಖಾನೆ ೭,೫೦೦ ಟನ್ ಕಬ್ಬು ನುರಿಯಲಿದೆ. ೩೦ ಮೆಗಾ ವ್ಯಾಟ್ ವಿದ್ಯುತ್ ಜೊತೆಗೆ ೩೬೦ ಕೆಎಲ್‌ಪಿಡಿ ಎಥೆನಾಲ್ ಉತ್ಪಾದಿಸಲಿದೆ. ಕಂಪನಿ ಸ್ಥಾಪನೆಯಿಂದ ೧೨ ಸಾವಿರ ಕಬ್ಬು ಬೆಳೆಗಾರರಿಗೆ ಅನುಕೂಲವಾಗ ಲಿದೆ. ಸುಮಾರು ೧೨೦೦ ಜನರಿಗೆ ಉದ್ಯೋಗ ಕಲ್ಪಿಸುವುದು ಉದ್ದೇಶಿತ ಕಂಪನಿಯ ಗುರಿ.

ಈ ಭಾಗದ ರೈತರಿಗೆ ಕಬ್ಬು ಪ್ರಧಾನ ಬೆಳೆ. ಸಕ್ಕರೆ ಕಾರ್ಖಾನೆ ಸ್ಥಗಿತಗೊಂಡಿದ್ದರಿAದ ಸಾಕಷ್ಟು ಸಮಸ್ಯೆಯಾಗಿದೆ. ಹೀಗಾಗಿ ಹಂಪಿ ಶುರ‍್ಸ್ಗೆ ಭೂಮಿ ನೀಡಬಾರದು ಎಂಬ ಶಾಸಕರ ನಡೆ ಸಮಂಜಸವಲ್ಲ. ಕಾರ್ಖಾನೆಗೆ ಅತ್ಯಂತ ಕಡಿಮೆ ಬೆಲೆಗೆ ಭೂಮಿ ನೀಡುವ ಅಗತ್ಯವೂ ಇಲ್ಲ. ಜಮೀನು ಶುಲ್ಕವನ್ನು ಸರ್ಕಾರ ಪರಿಷ್ಕರಿಸಲಿ. - ಗೋಸಲ ಬರಮಪ್ಪ, ಹೊಸಪೇಟೆ ರೈತ ಸಂಘ, ನಿದೇರ್ಶಕ.