ಆನೆಗೊಂದಿ ಬಳಿಯ ಪಂಪಾಸರೋವರದಲ್ಲಿ ಹನುಮಾನ್ ತಾಂಡವ ಕಾರ್ಯಕ್ರಮ ನಿಮಿತ್ತ ಮಾತೃಶಕ್ತಿಯಿಂದ ಸಾಮೂಹಿಕ ಸ್ತೋತ್ರ ಪಠಣ ನಡೆಯಿತು.  
ಜಿಲ್ಲೆ

ಸನಾತನ ಧರ್ಮ ಉಳಿವಿಗೆ ಸಂಕಲ್ಪ ಮಾಡಿ

ಕುರುವತ್ತಿ ಶ್ರೀಕಾಂತಪ್ಪ

ಗಂಗಾವತಿ: ಧಾರ್ಮಿಕ ಚಟುವಟಿಕೆಗಳು ಮಾನಸಿಕ ಸದೃಢರನ್ನಾಗಿ ಮಾಡುತ್ತಿದ್ದು, ಭಾರತೀಯ ಸಂಸ್ಕೃತಿ ಉಳಿಸುವ ಕಾರ್ಯಕ್ರಮಗಳು ಹೆಚ್ಚಾಗಬೇಕಿದೆ ಎಂದು ಶಾಸಕ ಗಾಲಿ ಜನಾರ್ದನರೆಡ್ಡಿ ಹೇಳಿದರು.

ತಾಲೂಕಿನ ಆನೆಗೊಂದಿ ಬಳಿಯ ಪಂಪಾಸರೋವರದ ಶ್ರೀ ಜಯಲಕ್ಷ್ಮೀ ದೇವಾಲಯ ಆವರಣದಲ್ಲಿ ಅಯೋಧ್ಯೆ ಶ್ರೀರಾಮ ಮಂದಿರ ಉದ್ಘಾಟನೆ ನಿಮಿತ್ತ ೌಂಡೇಷನ್ ಾರ್ ಹೋಲಿಸ್ಟಿಕ್ ಡೆವಲಪ್‌ಮೆಂಟ್‌ನಿಂದ ಮಂಗಳವಾರ ಹಮ್ಮಿಕೊಂಡಿದ್ದ ಹನುಮಾನ್ ತಾಂಡವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಸಂಕಷ್ಟಕ್ಕೊಳಗಾಗಿರುವ ಕುಟುಂಬಗಳು ಸ್ತೋತ್ರ ಪಠಣ ಮತ್ತು ಕಲಿಕೆ ಮೂಲಕ ಆತ್ಮಸ್ಥೈರ್ಯ ಹೆಚ್ಚಿಸಿಕೊಳ್ಳಬೇಕಿದೆ. ಸನಾತನ ಧರ್ಮದ ಉಳಿವಿಗೆ ಪ್ರತಿಯೊಬ್ಬರು ಸಂಕಲ್ಪ ಮಾಡಬೇಕಿದ್ದು, ಧಾರ್ಮಿಕ ಚಟುವಟಿಕೆಗಳು ನಿರಂತರವಾಗಬೇಕಿದೆ ಎಂದರು.

ೌಂಡೇಷನ್ ಸಂಚಾಲಕಿ ಮಾಧುರಿ ಸಹಸ್ರ ಬುದ್ಧೆ ಮಾತನಾಡಿ, ಸನತಾನ ಧರ್ಮ ಉಳಿವಿಗಾಗಿ 22 ದೇಶಗಳನ್ನು ಸಂಚರಿಸಲಾಗಿದ್ದು, ಪ್ರಮುಖ ತೀರ್ಥ ಕ್ಷೇತ್ರಗಳಲ್ಲಿ ಸ್ತೋತ್ರ ಪಠಣ ಮೂಲಕ ಧರ್ಮ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.

ಮಾತೃಶಕ್ತಿ ವಿಭಾಗದಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ 1500ಕ್ಕೂ ಹೆಚ್ಚು ಮಹಿಳೆಯರು ಏಕಕಾಲಕ್ಕೆ ಹನುಮಾನ್ ಚಾಲಿಸಾ ಪಣಠ ಮೂಲಕ ಸಂಚಲನ ಮೂಡಿಸಿದರು. ಇದಕ್ಕೂ ಮೊದಲು ದೇವಾಲಯದಲ್ಲಿ ದೀಪಾರಾಧನೆ, ವಿಶೇಷ ಪೂಜೆ ಮತ್ತು ಧರ್ಮ ಸಭೆ ಹಮ್ಮಿಕೊಳ್ಳಲಾಗಿತ್ತು.

ರಾಜ ವಂಶಸ್ಥೆ ರತ್ನಾ ಶ್ರೀರಾಯಲು, ಕೆಆರ್‌ಪಿಪಿ ಧುರೀಣೆ ಲಕ್ಷ್ಮೀ ಅರುಣಾ, ಜಿಲ್ಲಾ ಮಾಜಿ ಅಧ್ಯಕ್ಷೆ ಡಿ.ಎಂ.ರಾಜೇಶ್ವರಿ ಸುರೇಶ, ೌಂಡೇಷನ್ ಪ್ರತಿನಿಧಿಗಳಾದ ಸಂತೋಷ ಕೆಲೋಜಿ, ಪ್ರೊ.ಮೀನಾ ಚಂದ್ರಾವರಕರ್, ಶ್ರೀಪಾದ ಪತ್ತಿಕೊಂಡ, ಮಹಾದೇವಿ ಬೋಧನಕರ್, ವೈಷ್ಣವಿ ಜೋಶಿ, ಶೈಲಜಾ ವಿಠ್ಠಲ ಇತರರಿದ್ದರು.