ಅಂಜನಾದ್ರಿ ಬೆಟ್ಟದ ಅಭಿವೃದ್ಧಿಯ ಭೂಸ್ವಾಧೀನ ಪ್ರಕ್ರಿಯೆಗೆ ಬೇಕಿರುವ ಕೃಷಿ ಭೂಮಿಯನ್ನು ಗಂಗಾವತಿ ತಾಲೂಕಿನ ಚಿಕ್ಕರಾಂಪುರ ಸಂಪರ್ಕ ರಸ್ತೆ ಬಳಿ ಶಾಸಕ ಗಾಲಿ ಜನಾರ್ದನರೆಡ್ಡಿ ಭಾನುವಾರ ವೀಕ್ಷಿಸಿದರು. ಕೆಆರ್‌ಪಿಪಿ ಮುಖಂಡರಾದ ಯಮನೂರಚೌಡ್ಕಿ, ಚಂದ್ರುಹಿರಿಯೂರ್ ಇತರರಿದ್ದರು. 
ಜಿಲ್ಲೆ

ಐದು ಸಾವಿರ ಕೋಟಿ ರೂ ವೆಚ್ಚದಲ್ಲಿ ಅಂಜನಾದ್ರಿ ಅಭಿವೃದ್ಧಿಗೆ ಯೋಜನೆ

ಪ್ರವೀಣ ಉದುಸಾ ದಲಬಂಜನ್

ಗಂಗಾವತಿ: ಅಂಜನಾದ್ರಿ ಬೆಟ್ಟದ ಅಭಿವೃದ್ಧಿಯ ಭೂಸ್ವಾಧೀನ ಪ್ರಕ್ರಿಯೆಗಾಗಿ ಬೇಕಿರುವ ಕೃಷಿ ಭೂಮಿಯನ್ನು ತಾಲೂಕಿನ ಚಿಕ್ಕರಾಂಪುರ ಸಂಪರ್ಕದ ರಸ್ತೆ ಬಳಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಭಾನುವಾರ ವೀಕ್ಷಿಸಿದರು.

ಸ್ಥಳೀಯ ರೈತರೊಂದಿಗೆ ಭೂಮಿ ವೀಕ್ಷಿಸಿದರಲ್ಲದೇ ಭೂ ಸ್ವಾಧೀನಕ್ಕಾಗಿ ಬೇಕಿರುವ 72 ಎಕರೆ ಭೂಮಿ ಬಗ್ಗೆ ಮಾಹಿತಿ ಪಡೆದರು. ಅಂಜನಾದ್ರಿ ಬೆಟ್ಟದ ಅಭಿವೃದ್ಧಿಗೆ ಐದು ಸಾವಿರ ಕೋಟಿ ರೂ. ಯೋಜನೆ ರೂಪಿಸಲಾಗುತ್ತಿದ್ದು, ಚಿಕ್ಕರಾಂಪುರ ಮತ್ತು ಅಂಜನಹಳ್ಳಿ ಭಾಗದ ಭೂಮಿ ವಶಪಡಿಸಿಕೊಳ್ಳಬೇಕಿದೆ. ಭಕ್ತರಿಗೆ ವಸತಿ, ಪ್ರಸಾದ ನಿಲಯ, ವಾಹನಗಳ ನಿಲುಗಡೆಗೆ ಪಾಕಿರ್ಂಗ್ ವ್ಯವಸ್ಥೆ ಸೇರಿ ಮೂಲ ಸೌಕರ್ಯಗಳನ್ನು ಒದಗಿಸುವ ಉದ್ದೇಶವಿದೆ ಎಂದು ಶಾಸಕ ಗಾಲಿ ಜನಾರ್ದನರೆಡ್ಡಿ ಹೇಳಿದರು.

ಸ್ಥಳೀಯರೊಂದಿಗೆ ಅಭಿವದ್ಧಿ ಕಾರ್ಯಗಳ ಕುರಿತು ಚರ್ಚಿಸಿದರು. ಚಿಕ್ಕರಾಂಪುರ ಬಳಿ ನಿರ್ಮಿಸುತ್ತಿರುವ ಸೇತುವೆ ಕಾಮಗಾರಿ ವೀಕ್ಷಿಸಿದರು. ಕೆಆರ್‌ಪಿಪಿ ಮುಖಂಡರಾದ ಯಮನೂರ ಚೌಡ್ಕಿ, ಚಂದ್ರು ಹಿರಿಯೂರ್, ವಿರುಪಾಕ್ಷಿ, ನಾಗರಾಜ್, ಸೈಯ್ಯದ್ ಜಿಲಾನಿ ಪಾಷ, ಸುದರ್ಶನ ವರ್ಮಾ, ಆಂಜನೇಯಗೌಡ ಮಲ್ಲಾಪುರ, ಲಕ್ಷ್ಮಣ ನಾಯಕ ರಾಂಪುರ, ಬೆಟ್ಟಪ್ಪ ಚಿಕ್ಕಬೆಣಕಲ್, ರಾಮನಗೌಡ ರಾಂಪೂರ, ಭರಮನಗೌಡ, ಶಿವಣ್ಣ ಹನುಮನಹಳ್ಳಿ, ವೆಂಕಟೇಶಪ್ಪ, ರಫೀಸಾಬ್ ಇತರರಿದ್ದರು.