ತುಮಕೂರು: ಮುಂಬರುವ ದಿನಗಳಲ್ಲಿ ವಿಪಕ್ಷಗಳ ಶಾಸಕರ ಕ್ಷೇತ್ರಗಳ ಅಭಿವೃದ್ಧಿಗು 10&15 ಕೋಟಿ ರೂ., ಅನುದಾನ ನೀಡಲಿದ್ದೇವೆ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ ಹೇಳಿದರು.
ನಗರದಲ್ಲಿ ಸಿಎಂ ಕಾರ್ಯಕ್ರಮ ಸಿದ್ಧತೆ ಪರಿಶೀಲನೆ ಬಳಿಕ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಆ ಪಕ್ಷದ ಶಾಸಕರಿಗೆ 50 ಕೋಟಿ ಅನುದಾನವನ್ನು ಕಾಂಗ್ರೆಸ್ ಶಾಸಕರಿಗೆ ಕೇವಲ 10&15 ಕೋಟಿ ಕೊಡುತ್ತಿದ್ದರು ಎಂದು ಸಿಎಂಗೆ ಕಪು$್ಪ ಪಟ್ಟಿ ಪ್ರದರ್ಶಿಸುವ ಜಿಲ್ಲೆ ಎನ್ಡಿಎ ಶಾಸಕರಿಗೆ ಎಚ್ಚರಿಕೆಗೆ ಪರೋಕ್ಷ$ವಾಗಿ ಟಾಂಗ್ ಕೊಟ್ಟರು.
ಮುಂಬರುವ ದಿನಗಳಲ್ಲಿ ವಿಪಕ್ಷ ಶಾಸಕರ ಕ್ಷೇತ್ರಗಳ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡಲಿದ್ದು ಆತಂಕ ಪಡುವುದು ಬೇಡ. ನಮ್ಮ ಜಿಲ್ಲೆಯ ಜವಾಬ್ದಾರಿಯನ್ನು ನಾನು ಹಾಗೂ ರಾಜಣ್ಣ ತೆಗೆದುಕೊಳ್ಳುತ್ತೀವಿ. ಎಲ್ಲಾ ಕ್ಷೇತ್ರದ ಅಭಿವೃದ್ಧಿ ಆದರೆ ರಾಜ್ಯ ಅಭಿವೃದ್ಧಿ ಆಗಲಿದೆ. ಜಿಲ್ಲೆಯ ವಿಪಕ್ಷ ಶಾಸಕರು ಕಪು$್ಪ ಬಾವುಟ ತೋರಿಸುವ ಅಗತ್ಯವಿಲ್ಲ. ಅವರಿಗು ಹಣಬರಲಿದೆ. ನಮ್ಮ ಶಾಸಕರಿಗೆ 25 ಕೋಟಿ ಅನುದಾನ ಕೊಡುತ್ತೀವಿ. ವಿಪಕ್ಷ ಶಾಸಕರಿಗೆ 10-&15 ಕೋಟಿ ಅನುದಾನ ಬರಲಿದೆ ಎಂದರು.
ವರ್ಷದ ಹಿಂದೆ ತುಮಕೂರು ಗ್ರಾಮಾಂತರ ಕ್ಷೇತ್ರದ ನಾಗವಲ್ಲಿ ಪಬ್ಲಿಕ್ ಶಾಲೆಗೆ ಮೂಲಸೌಕರ್ಯಗಳನ್ನು ಕಲ್ಪಿಸಲು 1.21 ಕೋ.ರೂ., ಕಾಮಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿದ್ದ ಸಿಎಂ ಇದುವರೆಗೆ ಬಿಡಿಗಾಸನ್ನು ಬಿಡುಗಡೆ ಮಾಡಿಲ್ಲ. ಈ ಹಣನ್ನು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧುಬಂಗಾರಪ್ಪ ವಾಪಸು ತೆಗೆದುಕೊಂಡಿದ್ದಾರೆ. ಇದು ವಚನ ದ್ರೋಹ ಮತ್ತ ಕನ್ನಡ ಮತ್ತ ಸರ್ಕಾರಿ ಶಾಲೆಗಳ ವಿರೋಧಿ ಧೋರಣೆ. ಬಿ.ಸುರೇಶಗೌಡ ಗ್ರಾಮಾಂತರ ಶಾಸಕ