ಮಡಿಕೇರಿ: ಮಡಿಕೇರಿ ತಾಲೂಕಿನ ಕೆ.ನಿಡುಗಣೆ ಗ್ರಾಮ ಅಬ್ಬಿ ಜಲಪಾತ ರಸ್ತೆಯಲ್ಲಿರುವ ಗೋಶಾಲೆಗೆ ಶಾಸಕರಾದ ಡಾ.ಮಂತರ್ ಗೌಡ ಅವರು ಬುಧವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಎಂಟು ಎಕರೆ ಜಾಗದ ಸುತ್ತ ಚೈನ್ ಲಿಂಕ್ ಮೆಶ್ ಅಳವಡಿಸುವುದು ಮತ್ತು ಹೊಸ ಶೆಡ್ ನಿರ್ಮಾಣಕ್ಕೆ ಸೂಕ್ತ ಅನುದಾನ ಒದಗಿಸುವ ಸಂಬಂಧ ಪಶುಸಂಗೋಪನ ಸಚಿವರಾದ ಕೆ. ವೆಂಕಟೇಶ್ ಅವರಿಗೆ ದೂರವಾಣಿ ಕರೆ ಮಾಡಿ ಮನವಿ ಸಲ್ಲಿಸಿದರು.