ಜಿಲ್ಲೆ

ರಾಜಕಾಲುವೆ ಒತ್ತುವರಿ ತೆರವುಗೊಳಿಸಿದ ಶಾಸಕಿ

ಕೋಲಾರ ಡೆಸ್ಕ್

ಬೇತಮಂಗಲ: ಕ್ಷೇತ್ರದಲ್ಲಿನ ಅಭಿವೃದ್ಧಿ ಕಾರ್ಯಗಳಿಗೆ ಸಂಬಂಧಪಟ್ಟಂತೆ, ಯಾವುದೇ ಅಡ್ಡಿ ಆತಂಕ ಬಂದರೂ ತಾವೇ ಸ್ವತ@ ಸ್ಥಳದಲ್ಲಿ ನಿಂತು ಕೆಲಸ ಮಾಡಿಸುವುದನ್ನು ಕರಗತ ಮಾಡಿಕೊಂಡಿರುವ ಕೆಜಿಎಫ್​ ಶಾಸಕಿ ರೂಪಕಲಾ ಅವರು ಮಂಗಳವಾರ ಬೇತಮಂಗಲ ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ ವೇಳೆ ಮುಂದೆ ನಿಂತು ಯಾವುದೇ ಅಡಚಣೆಯಾಗಂತೆ ನೋಡಿಕೊಂಡರು.

ಗೋಷಿನ ಕೆರೆ ಕೋಡಿ ಹರಿಯುವ ಸ್ಥಳದಿಂದ ಕ್ಯಾಸಂಬಳ್ಳಿ ರಸ್ತೆಯ ಹನುಮಂತನಗರ ಮೂಲಕ ಪಾಲಾರ್​ ನದಿ ಸೇರುವಂತೆ ಹಿರಿಯರು ನೂರಾರು ವರ್ಷಗಳ ಹಿಂದೆಯೇ 33 ಅಡಿ ಅಗಲ ಸುಮಾರು ಎರಡು ಕಿಮೀ ಉದ್ದದ ರಾಜಕಾಲುವೆ ನಿರ್ಮಿಸಿದ್ದರು. ಆದರೆ ಇತ್ತೀಚಿನ ವರ್ಷಗಳಲ್ಲಿ ಭೂಗಳ್ಳರು, ಕಾನೂನು ಅರಿವು ಇಲ್ಲದವರು ರಾಜಕಾಲುವೆ ಒತ್ತುವರಿ ಮಾಡಿಕೊಂಡು ಕೆಲವು ಕಡೆ ಕಟ್ಟಡಗಳನ್ನು ನಿಮಾರ್ಣ ಮಾಡಿಕೊಂಡಿದ್ದರು.

ಈ ಬಗ್ಗೆ ಹಲವು ವರ್ಷಗಳಿಂದ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದ್ದರೂ, ಹೋರಾಟ ನಡೆಸಿದ್ದರೂ ಯಾವುದೇ ಕ್ರಮ ಕೈಗೊಳ್ಳಲು ಸಾಧ್ಯವಾಗಿರಲಿಲ್ಲ. ಆದರೆ, ಮಂಗಳವಾರ ಅಧಿಕಾರಿಗಳೊಂದಿಗೆ ಮುಂದೆ ನಿಂತು ನ್ಯಾಯೋಚಿತವಾಗಿ ಸಮಸ್ಯೆ ಬಗೆಹರಿಸುವಲ್ಲಿ ಯಶಸ್ವಿಯಾದರು.

ತಹಸೀಲ್ದಾರ್​ ನಾಗವೇಣಿ, ತಾಪಂ ಕಾರ್ಯನಿರ್ವಹಣಾಧಿಕಾರಿ ವೆಂಕಟೇಶಪ್ಪ, ಉಪ ತಹಸೀಲ್ದಾರ್​, ಎಂ.ಜಯರಾಂ, ಕಂದಾಯ ನಿರೀಕ ಮುನಿವೆಂಕಟಸ್ವಾಮಿ, ಗ್ರಾಮ ಲೆಕ್ಕಾಧಿಕಾರಿ ಹರ್ಷವರ್ಧನ್​, ಗ್ರಾಪಂ ಅಧ್ಯ ವಿನು ಕಾರ್ತಿಕ್​, ಪಿಡಿಒ ವೈಶಾಲಿ, ಕಾರ್ಯದರ್ಶಿ ವೆಂಕಟೇಶಪ್ಪ, ಬಿಲ್​ ಕಲೆಕ್ಟರ್​ ರಾಮು, ಮಾಜಿ ಗ್ರಾಪಂ ಅಧ್ಯೆ ಮಮತಾ ಗಣೇಶ್​, ದುರ್ಗಾ ಪ್ರಸಾದ್​, ಸದಸ್ಯರಾದ ಏಜಾಜ್​ ಪಾಷಾ, ಗಣೇಶ್​, ಇನಾಯತ್​ವುಲ್ಲಾ, ಷರ್​ೀ, ಶ್ರೀನಿವಾಸ್​, ಸುರೇಂದ್ರಗೌಡ, ಮಾಜಿ ಸದಸ್ಯ ವಿಜಯಕುಮಾರ್​, ಮುಖಂಡರಾದ ತಂಬಾರ್ಕಹಳ್ಳಿ ರಾಜಪ್ಪ, ಪೂತಾ ರಾಜನಹಳ್ಳಿ ಮುನಿಸ್ವಾಮಿ, ಚುನ್ನು ಇದ್ದರು.

ಜನಸ್ಪಂದನದಲ್ಲಿ ಒತ್ತಡ

ಕಳೆದ ತಿಂಗಳ ಹಿಂದೆ ಬೇತಮಂಗಲದಲ್ಲಿ ಹಮ್ಮಿಕೊಂಡಿದ್ದ ಜನಸ್ಪಂದನ ಸಭೆಯಲ್ಲಿ ಗ್ರಾಪಂ ಸದಸ್ಯರೂ ಸೇರಿ ಸಾರ್ವಜನಿಕರು ಗ್ರಾಮದ ಹೊರವಲಯದ ಅತಿ ದೊಡ್ಡದಾದ ರಾಜಕಾಲುವೆ ಒತ್ತುವರಿ ತೆರವು ಗೊಳಿಸುವಂತೆ ಮನವಿ ಮಾಡಿದ್ದರು. ಒತ್ತುವರಿಯಿಂದ ಮಳೆ ಬಂದಾಗ ಮಳೆ ನೀರು ಮನೆಗಳಿಗೆ ನುಗ್ಗುತ್ತದೆ, ಕಾಲುವೆ ಸ್ವಚ್ಛಗೊಳಿಸಲು ಸಾಧ್ಯವಾಗದೇ ರೋಗಗಳಿಗೆ ತುತ್ತಾಗುತ್ತಿದ್ದಾರೆ ಎಂದು ಶಾಸಕರಲ್ಲಿ ಮನವಿ ಮಾಡಿದ್ದರು.

ಸಭೆಯಲ್ಲಿದ್ದ ತಹಸೀಲ್ದಾರ್​ ನಾಗವೇಣಿ ಅವರಿಗೆ ಸೂಚನೆ ನೀಡಿದ ಶಾಸಕಿ ರೂಪಕಲಾ ಅವರು, ರಾಜಕಾಲುವೆ ಒತ್ತುವರಿ ತೆರವುಗೊಳಿಸಲು ಹೇಳಿದ್ದರು.

ಕಳೆದ 15 ದಿನಗಳ ಹಿಂದೆ ಕಂದಾಯ ಮತ್ತು ಪೊಲೀಸ್​ ಇಲಾಖೆ ಜಂಟಿ ಕಾರ್ಯಾಚರಣೆಯಲ್ಲಿ ರಾಜಕಾಲುವೆ ಹದ್ದುಬಸ್ತನ್ನು ಗುರುತಿಸಿಲಾಗಿತ್ತು. ಸಂದರ್ಭದಲ್ಲಿ ಕೆಲವು ಕಡೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಕಾಮಗಾರಿಗೆ ಅಡ್ಡಿಪಡಿಸಿದ್ದರು. ಮಂಗಳವಾರ ಒತ್ತುವರಿ ತೆರವು ಕಾರ್ಯಕ್ಕೆ ಚಾಲನೆ ನೀಡಿದ ಸಂದರ್ಭದಲ್ಲಿ ಶಾಸಕಿ ರೂಪಕಲಾ ಬಂಡೆಯಂತೆ ಅಲ್ಲೇ ನಿಂತು, ವಾದ&ಪ್ರತಿವಾದ ಆಲಿಸಿ ಮೌನವಾಗಿಯೇ ಉತ್ತರ ನೀಡಿ ಕಂದಾಯ ಇಲಾಖೆಯಲ್ಲಿರುವ ದಾಖಲೆಗಳ ಪ್ರಕಾರ ರಾಜಕಾಲುವೆ ಮಾಡಲು ಅವಕಾಶ ಕೊಡಿ ನಂತರ ನಿಮ್ಮ ಸಮಸ್ಯೆ ಏನೇ ಇದ್ದರೂ ಬಗೆಹರಿಸಲು ಪ್ರಯತ್ನಿಸುತ್ತೇನೆ ಎಂದರು.

ಗ್ರಾಪಂ ಅಧ್ಯಕ್ಷನಿಗೂ ಒತ್ತಡ

ಬೇತಮಂಗಲ ಗ್ರಾಪಂ ಅಧ್ಯಕ್ಷ ವಿನು ಕಾರ್ತಿಕ್​ ಮತ್ತು ಒತ್ತುವರಿದಾರ ಮಧ್ಯೆ ಮಾತಿನ ಚಕುಮುಕಿ ನಡೆಯಿತಾದರೂ ಯಾವುದೇ ಕಾರಣಕ್ಕೂ ಕೆಲಸ ನಿಲ್ಲಿಸುವುದಿಲ್ಲ ಎಂದು ಅಧ್ಯಕ್ಷ ವಿನು ಕಾರ್ತಿಕ್​ ಎದಿರೇಟು ನೀಡಿದರು. ಇದರಿಂದಾಗಿ ಗ್ರಾಮಸ್ಥರ ಬಹು ದಿನಗಳ ಸಮಸ್ಯೆಗೆ ಮಂಗಳವಾರ ರಾಜಕಾಲುವೆ ಒತ್ತುವರಿ ತೆರವು ಮೂಲಕ ಪರಿಹಾರ ಸಿಕ್ಕಂತಾಯಿತು.

ತಿಳಿದವರಿಂದಲೇ ಒತ್ತುವರಿ

ಈ ಹಿಂದೆ ಬೇತಮಂಗಲ ಪಂಚಾಯಿತಿಯಲ್ಲಿ ಪಿಡಿಒ ಆಗಿ, ಪ್ರಸ್ತುತ ಡಿಕೆ ಹಳ್ಳಿ ಪಂಚಾಯಿತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಭಾಸ್ಕರ್​ ಎಂಬುವವರು ಇದೇ ರಾಜಕಾಲುವೆ ಒತ್ತುವರಿ ಮಾಡಿಕೊಂಡು ಕಾಂಪೌಂಡ್​ ನಿಮಾರ್ಣ ಮಾಡಿಕೊಂಡಿದ್ದರು. ಕಂದಾಯ ಇಲಾಖೆಯಲ್ಲಿ ಶಿರಸ್ತೇದಾರ್​ ಆಗಿ ನಿವೃತ್ತರಾದ ನಾಗರಾಜು ಅವರು ಮನೆ ಮತ್ತು ಹಸು ಶೆಡ್​ ನಿಮಾರ್ಣ ಮಾಡಿಕೊಂಡಿದ್ದಾರೆ. ದುರಂತವೆಂದರೆ ಶಾಸಕಿ ರೂಪಕಲಾ ಅವರ ಅನುದಾನದಲ್ಲಿಯೇ ಹಣ ಪಡೆದು ಕಾಂಕ್ರೀಟ್​ ರಸ್ತೆ ನಿಮಾರ್ಣ ಮಾಡಿರುವುದು ಕಂಡು ಬಂದಿತು. ಇದರ ಮಾಹಿತಿ ಪಡೆದ ಶಾಸಕಿ ರೂಪಕಲಾ ಯಾವುದೇ ಮುಲಾಜಿಲ್ಲದೆ ರಸ್ತೆ, ಮನೆ, ಕಾಂಪೌಂಡ್​ ಸೇರಿ ಎಲ್ಲವನ್ನೂ ತೆರವು ಮಾಡುವಂತೆ ಅಧಿಕಾರಿಗಳಿಗೆ ಆದೇಶ ಮಾಡಿದರು.