ಜಿಲ್ಲೆ

ಚನ್ನಗಿರಿ ತಾಲೂಕು ಸಾಹಿತ್ಯ ಸಮ್ಮೇಳನ ಜನವರಿ 8 ಕ್ಕೆ

ಚನ್ನಗಿರಿ: ಐತಿಹಾಸಿಕ ಪುಷ್ಕರಣಿ ನಾಡಿನ ಸಂತೇಬೆನ್ನೂರಿನ ಎಸ್‌ಎಸ್‌ಜೆವಿಪಿ ಕರ್ನಾಟಕ ಪಬ್ಲಿಕ್ ಶಾಲೆ ಆವರಣದಲ್ಲಿ 17 ನೇ ತಾಲೂಕು ಕನ್ನಡ ಸಮ್ಮೇಳನವನ್ನು ಜನವರಿ 8 ರಂದು ಆಚರಿಸಲಾಗುತ್ತದೆ ಎಂದು ಶಾಸಕ ಬಸವರಾಜ್ ಶಿವಗಂಗಾ ತಿಳಿಸಿದರು.

ತಾಲೂಕಿನ ಸಂತೇಬೆನ್ನೂರಿನಲ್ಲಿ ಸೋಮವಾರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಹಮ್ಮಿಕೊಂಡಿದ್ದ ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

ಸಮ್ಮೇಳನದ ಅಧ್ಯಕ್ಷರಾಗಿ ಸಂತೇಬೆನ್ನೂರು ಹಿರಿಯ ಕನ್ನಡ ಪರಿಚಾರಕ ಕೆ. ಸಿದ್ದಲಿಂಗಪ್ಪ ಅವರನ್ನು ಸರ್ವಾನುಮತದಿಂದ ಆಯ್ಕೆ ಾಡಲಾಯಿತು.

ತಾಲೂಕಿನ ಕನ್ನಡ ಅಭಿಮಾನಿಗಳ ಆಶಯದಂತೆ ಮತ್ತು ಸಂತೇಬೆನ್ನೂರು ಐತಿಹಾಸಿಕ ಹಿನ್ನೆಲೆ ಹೊಂದಿರುವ, ಅಲ್ಲದೆ ಎಲ್ಲ ಸೌಕರ್ಯಗಳು ಉತ್ತಮವಾಗಿರುವ ಕಾರಣ ಜನವರಿ 8ರಂದು ಇಲ್ಲೇ ಸಮ್ಮೇಳನ ನಡೆಸಲು ತೀರ್ಮಾನಿಸಲಾಗಿದೆ ಎಂದರು.

ಬೆಳಗ್ಗೆ 9 ಗಂಟೆಗೆ ಪುಷ್ಕರಣಿಯಿಂದ ಸಾರೋಟಿನಲ್ಲಿ ಸಮ್ಮೇಳನದ ಅಧ್ಯಕ್ಷರ ಮೆರವಣಿಗೆ ಪ್ರಾರಂಭವಾಗುತ್ತದೆ. ಮೆರವಣಿಗೆಯಲ್ಲಿ ವಿವಿಧ ಕಲಾತಂಡಗಳು, ಶಾಲಾ ಮಕ್ಕಳು, ಕನ್ನಡ ಅಭಿಮಾನಿಗಳು ಭಾಗವಹಿಸಲಿದ್ದಾರೆ. 11 ಗಂಟೆಗೆ ಸಮ್ಮೇಳನದ ಉದ್ಘಾಟನೆ, ಅಧ್ಯಕ್ಷರ ಮತ್ತು ಅತಿಥಿಗಳ ಭಾಷಣದ ಬಳಿಕ ವಿಚಾರಗೋಷ್ಠಿ, ಕವಿಗೋಷ್ಠಿ, ಹೊಸ ಲೇಖಕರು ಮತ್ತು ಕವಿಗಳಿಗೆ ಅವಕಾಶವನ್ನು ನೀಡಲಾಗುತ್ತದೆ. ನಂತರದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ ಎಂದರು.

ಗ್ರಾಪಂ ಅಧ್ಯಕ್ಷೆ ರೇಣುಕಮ್ಮ, ಉಪಾಧ್ಯಕ್ಷೆ ಮೀನಾಕ್ಷಿ, ಸದಸ್ಯ ರಹಮತ್‌ಉಲ್ಲಾ, ಕಸಾಪ ತಾಲೂಕು ಅಧ್ಯಕ್ಷ ಎಲ್.ಜಿ. ಮಧುಕುಮಾರ್, ಎಪಿಎಂಸಿ ಮಾಜಿ ಅಧ್ಯಕ್ಷ ಎಂ. ಸಿದ್ದಪ್ಪ, ವರ್ತಕ ಸಂಘದ ಅಧ್ಯಕ್ಷ ಸಿರಾಜ್ ಅಹ್ಮದ್, ಜಿಲ್ಲಾ ಕಸಾಪ ಕಾರ್ಯದರ್ಶಿ ಕೆ.ಎಸ್. ವೀರೇಶ್‌ಪ್ರಸಾದ್, ವಿಎಸ್‌ಎಸ್‌ಎನ್ ಮಾಜಿ ಅಧ್ಯಕ್ಷ ಕೃಷ್ಣಮೂರ್ತಿ, ಕೆ. ಬಸವರಾಜ್, ರುದ್ರಪ್ಪ, ಸಂತೋಷ್, ಬ್ಯಾಟಪ್ಪ, ನಯಾಜ್, ಎಂ.ಬಿ. ನಾಗರಾಜ್, ಪಿ. ರುದ್ರೇಶ್, ಸ್ವಾಮಿಗೌಡ್ರು, ಜಿ.ಎನ್. ಸುರೇಶ್, ಕೆ.ಪಿ. ಗಿರೀಶ್ ಇದ್ದರು.