ಜಿಲ್ಲೆ

ಮಾದರಿ ಕ್ಷೇತ್ರವಾಗಿ ಮಾಯಕೊಂಡ

ಮಾಯಕೊಂಡ: ಕ್ಷೇತ್ರದ ಸಮಗ್ರ ಅಭಿವೃದ್ಧಿ ನನ್ನ ಕನಸು. ಜತೆಗೆ ಜಿಲ್ಲೆಯಲ್ಲೇ ಮಾಯಕೊಂಡವನ್ನು ಮಾದರಿ ಕ್ಷೇತ್ರವಾಗಿ ಮಾಡಬೇಕೆಂದಿದ್ದೇನೆ ಎಂದು ಶಾಸಕ ಕೆ.ಎಸ್. ಬಸವಂತಪ್ಪ ಹೇಳಿದರು.

ಆನಗೋಡು ಹೋಬಳಿಯ ಕೆರೆಯಾಗಳಹಳ್ಳಿಯಲ್ಲಿ ಗುರುವಾರ ಸಿಸಿ ರಸ್ತೆಗಳ ನಿರ್ವಣಕ್ಕೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

ಮಾಯಕೊಂಡ ಕ್ಷೇತ್ರ ಹಿಂದುಳಿದಿದ್ದು ರಸ್ತೆ, ಕೆರೆಕಟ್ಟೆ, ಸರ್ಕಾರಿ ಶಾಲೆಗಳ ಕಟ್ಟಡ, ಸಮುದಾಯ ಭವನ ಸೇರಿ ಯಾವುದರಲ್ಲೂ ಅಭಿವೃದ್ಧಿ ಕಂಡಿಲ್ಲ. ಪ್ರಸ್ತುತ ನಮ್ಮ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಎಲ್ಲ ಕಾರ್ಯಗಳನ್ನು ಮಾಡುವ ಅನಿವಾರ್ಯತೆ ಇದೆ. ಕ್ಷೇತ್ರದ ಎಲ್ಲ ಗ್ರಾಮಗಳ ಅಭಿವೃದ್ಧಿಗೆ ಹಂತ ಹಂತವಾಗಿ ಆದ್ಯತೆ ನೀಡಲಾಗುವುದು ಎಂದರು.

ಹಲವಾರು ಗ್ರಾಮಗಳಲ್ಲಿ ಸಂಪರ್ಕ ರಸ್ತೆಗಳ ಸಮಗ್ರ ಅಭಿವೃದ್ಧಿಯ ಅವಶ್ಯಕತೆ ಇದ್ದು, ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ತರುವುದರೊಂದಿಗೆ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಎಪಿಎಂಸಿ ಮಾಜಿ ಅಧ್ಯಕ್ಷ ಎಸ್. ಅಣಜಿ, ಕೆ. ಚಂದ್ರಣ್ಣ, ಕೆಆರ್​ಐಡಿಎಲ್ ಇಲಾಖೆಯ ಎಇಇ ನಿತಿನ್ ಜಾಧವ್, ಮುಖಂಡರಾದ ಷಣ್ಮುಖಪ್ಪ, ಕರಿಯಪ್ಪ, ರಂಗಸ್ವಾಮಿ, ನಾಗಣ್ಣ, ಬಸಣ್ಣ, ಕೃಷ್ಣಮೂರ್ತಿ, ಹೊನ್ನಪ್ಪ ಹಾಗೂ ಮತ್ತಿತರರು ಇದ್ದರು.