ವಿಜಯಪುರ ನಗರದ ಜಗದಾರಾಧ್ಯ ಶಾಂತಲಿಂಗೇಶ್ವರ ಗುರು ಭವನದಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರನ್ನು ಸನ್ಮಾನಿಸಲಾಯಿತು. ದಿನೇಶ ಹಳ್ಳಿ, ಅಶೋಕ ವಿಜಯಪುರ, ಶಿವಾನಂದ ಶಿರೋಳ, ಗಣೇಶ ಜಯರಾಮ್ ಇತರರಿದ್ದರು.  
ಜಿಲ್ಲೆ

ನೀಲಗಾರ ಸಮಾಜ ಏಳಿಗೆಗೆ ಬದ್ಧ

ಐನಾಪೂರ: ವಿಜಯಪುರ ನಗರದ ಜಗದಾರಾಧ್ಯ ಶಾಂತಲಿಂಗೇಶ್ವರ ಗುರು ಭವನದಲ್ಲಿ ಕರ್ನಾಟಕ ರಾಜ್ಯ ಲಿಂಗಾಯತ ನೀಲಗಾರ ಸಮಾಜದ ರಾಜ್ಯದ ಮಟ್ಟದ ಸಮಾವೇಶ ವಿಜಯಪುರ ಹಾಗೂ ಅಥರ್ಗಾ ಘಟಕದ ಸಂಯುಕ್ತ ಆಶ್ರಯದಲ್ಲಿ ನಡೆಯಿತು.

ಶಿವಶರಣ ಆನಂದ ಸ್ವಾಮಿಗಳು, ಈಶಪ್ರಸಾದ ಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರನ್ನು ವಿಜಯಪುರ ಹಾಗೂ ಅಥರ್ಗಾದ ಲಿಂಗಾಯತ ನೀಲಗಾರ ಸಮಾಜ ಘಟಕದ ಪದಾಧಿಕಾರಿಗಳು ಸನ್ಮಾನಿಸಿದರು.

ಶಾಸಕರು ಮಾತನಾಡಿ, ನೀಲಗಾರ ಸಮಾಜದ ನಿಗಮದ ಸ್ಥಾಪನೆ ಮಾಡುವ ಹೋರಾಟ ನಿಮ್ಮ ಧ್ವನಿಯಾಗಿದೆ. ನಿಮ್ಮ ಸಮಾಜದ ಬೆಂಬಲಕ್ಕೆ ಸದಾ ನಾನು ಸಿದ್ಧನಾಗಿರುತ್ತೇನೆ. ಮುಂಬರುವ ದಿನಗಳಲ್ಲಿ ನೀಲಗಾರ ಸಮಾಜಕ್ಕೆ ನ್ಯಾಯ ಸಿಗಬೇಕೆಂದು ಒತ್ತಾಯಿಸುತ್ತೇನೆ ಎಂದರು.

ಶಿವಶರಣಾನಂದ ಸ್ವಾಮಿಗಳು ಪ್ರಾಸ್ತಾವಿಕವಾಗಿ ಮಾತನಾಡಿ, ರಾಜ್ಯ ಲಿಂಗಾಯತ ನೀಲಗಾರ ಕ್ಷೇಮಾಭಿವೃದ್ಧಿ ಪ್ರಾಧಿಕಾರ ಸ್ಥಾಪನೆಗೆ ಶ್ರಮಿಸೋಣ ಎಂದರು.

ನೀಲಗಾರ ಸಮಾಜದ 90 ವಯಸ್ಸಿನ ಮೇಲ್ಪಟ್ಟ ಹಿರಿಯರಿಗೆ ಗೌರವ ಸಮರ್ಪಿಸಲಾಯಿತು. ಮುಖ್ಯ ಅತಿಥಿಗಳಾಗಿ ದಿನೇಶ ಹಳ್ಳಿ, ಅಶೋಕ ಸಿ. ವಿಜಯಪುರ, ಶಿವಾನಂದ ಶಿರೋಳ, ಗಣೇಶ ಜಯರಾಮ್, ವಿಶ್ವನಾಥ ಸೋರಗಾಂವಿ, ಸಂಗಪ್ಪ ಸೋರಗಾಂವಿ, ಬಸವರಾಜ ಗೊಳಸಂಗಿ, ಸದಾಶಿವ ಶಿರೋಳ, ಕುಲಪ್ಪ ನೀವರಗಿ, ಸದಾಶಿವ ಗಣಿ ಇತರರಿದ್ದರು. ರಾಜೇಶ್ವರಿ ಗೊಳಸಂಗಿ ನಿರೂಪಿಸಿದರು. ಕವಿತಾ ಶಿರೋಳ, ಶ್ರದ್ಧಾ ಸೋರಗಾಂವಿ ವಂದಿಸಿದರು.