ಜಿಲ್ಲೆ

ಸಮಾಜದ ಅಭಿವೃದ್ಧಿಗೆ ಇಂಜಿನಿಯರ್​ಗಳ ಕೊಡುಗೆ ಅಪಾರವಾಗಿದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು

ವಿಜಯಪುರ: ಸಮಾಜದ ಅಭಿವೃದ್ಧಿಗೆ ಇಂಜಿನಿಯರ್​ಗಳ ಕೊಡುಗೆ ಅಪಾರವಾಗಿದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

ನಗರದ ಕನಕದಾಸ ಬಡಾವಣೆಯಲ್ಲಿ ಅಸೋಸಿಯೇಷನ್​ ಆಫ್​ ಕನ್ಸಲ್ಟಿಂಗ್​ ಸಿವಿಲ್​ ಇಂಜಿನಿಯರ್ಸ್​ಗಳ ಸಂದ ನೂತನವಾಗಿ ನಿರ್ಮಿಸಿದ ಸರ್​ ಎಂ. ವಿಶ್ವೇಶ್ವರಯ್ಯ ಭವನವನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.

ಸಂವು ಇಂಜಿನಿಯರ್​ ದಿನಾಚರಣೆಯಂದೇ ಸ್ವಂತ ಕಟ್ಟಡ ಉದ್ಘಾಟಿಸುತ್ತಿರುವ ಕಾರ್ಯ ಶ್ಲಾನೀಯವಾಗಿದೆ. ಈ ಭವನವು ನಗರದ ಹಲವಾರು ಸಂಗಳಿಗೆ ಮಾದರಿಯಾಗುವ ಜತೆಗೆ ಕಟ್ಟಡದ ಸದ್ಬಳಕೆ ಆಗಲಿ ಎಂದರು.ಸಂದ ಅಧ್ಯಕ್ಷ ಅರುಣ ಮಠ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂದ ಹಿರಿಯ ಸದಸ್ಯರಾದ ಸುಧೀರ ಟಂಕಸಾಲಿ ಹಾಗೂ ಎಸ್​.ವಿ. ಸಕ್ರಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹಾಗೂ ಸಂದ ಕಟ್ಟಡ ನಿರ್ಮಾಣಕ್ಕೆ ಸಾಮಗ್ರಿ ನೀಡಿದವರನ್ನು ಸನ್ಮಾನಿಸಲಾಯಿತು.

ರಿಯಲ್​ ಎಸ್ಟೇಟ್​ ಉದ್ಯಮಿ ವಿ.ಜಿ. ಪಾರೇಖ, ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯ ಆಜಾದ್​ ಪಟೇಲ, ಎಸ್​.ಎಸ್​. ಆಲೂರ, ಪಾಲಿಕೆ ಸದಸ್ಯರಾದ ಪ್ರೇಮಾನಂದ ಬಿರಾದಾರ ಹಾಗೂ ಗಿರೀಶ ಬಿರಾದಾರ, ಸಂದ ಉಪಾಧ್ಯ ಅಶೋಕ ರುಣವಾಲ, ಕಾರ್ಯದರ್ಶಿ ಅಶ್ರಫ್​ ಕುಡಚಿ, ಜಂಟಿ ಕಾರ್ಯದರ್ಶಿ ಅಶೋಕ ಜಮಖಂಡಿ, ಖಜಾಂಚಿ ಮಹೇಶ ರಾಂಪೂರ, ಅರುಣ ಸರಸಂಬಿ, ಸದಸ್ಯರಾದ ವೀಣಾ ಟಂಕಸಾಲಿ, ರವಿ ರೇವಣಕರ, ಸಿದ್ದು ಗುಂಜುಟಗಿ, ಮಲ್ಲಿಕಾರ್ಜುನ ಪೂಜಾರಿ, ಎಂ.ಎಂ.ಬನೋಶಿ, ಎಸ್​.ಎಸ್​. ಹಿರೇಮಠ, ಎಸ್​.ಸಿ. ತೇಲಿ, ರಮೇಶ ನಾಲಾ, ಎಂ.ಎಸ್​. ಅಂಗಡಿಮಠ, ಸಂಗಮೇಶ ಮಠ, ಜೆ.ಎನ್​. ತೇರದಾಳ ಮತ್ತಿತರರಿದ್ದರು.

ಸಂದ ಉಪಾಧ್ಯ ಸಿ.ಆರ್​. ಗಂಗಾಧರ ಸ್ವಾಗತಿಸಿದರು. ಸುಭಾಷ ಜಂಬೂರೆ ನಿರೂಪಿಸಿದರು. ಮಹೇಶ ರಾಂಪೂರ ವಂದಿಸಿದರು.

ವಿಜಯಪುರದ ಕನಕದಾಸ ಬಡಾವಣೆಯಲ್ಲಿ ಅಸೋಸಿಯೇಷನ್​ ಆಫ್​ ಕನ್ಸಲ್ಟಿಂಗ್​ ಸಿವಿಲ್​ ಇಂಜಿನಿಯರ್​ಗಳ ಸಂದ ನೂತನ ಭವನದ ಉದ್ಘಾಟನೆ ಕಾರ್ಯಕ್ರಮವನ್ನು ಶಾಸಕ ಬಸನಗೌಡ ಪಾಟೀಲ ಯತ್ನಾಳ ಉದ್ಘಾಟಿಸಿದರು. ಅರುಣ ಮಠ, ಅಶೋಕ ರುಣವಾಲ ಮತ್ತಿತರರಿದ್ದಾರೆ.