ಬಿಡದಿ: ರಾಜಕೀಯ ಜಂಜಾಟ, ಆಕ್ರೋಶ ಭರಿತ ಮಾತುಗಳಿಂದಲೇ ಹೆಸರಾಗಿರುವ ಮಾಗಡಿ ಕ್ಷೇತ್ರದ ಶಾಸಕ ಎಚ್.ಸಿ.ಬಾಲಕೃಷ್ಣ ಶುಕ್ರವಾರ ತನ್ನೊಳಗೂ ಒಬ್ಬ ನೃತ್ಯಗಾರನಿದ್ದಾನೆ ಎಂದು ತೋರಿಸುವ ಮೂಲಕ ಅಚ್ಚರಿ ಮೂಡಿಸಿದರು.
ರಾಜಕೀಯ ಜಂಜಾಟದ ನಡುವೆ ರಿಲ್ಯಾಕ್ಸ್ ಮೂಡ್ ಗೆ ಜಾರಿದ್ದ ಶಾಸಕ ಬಾಲಕೃಷ್ಣ, ಪೌರಕಾರ್ಮಿಕರ ಜೊತೆಗೆ ಕುಣಿದು ಕುಪ್ಪಳಿಸಿ ಎಲ್ಲರ ಗಮನ ಸೆಳೆದರು.
ಈಗಲ್ ಟನ್ ರೆಸಾರ್ಟ್ ನಲ್ಲಿ ಪುರಸಭೆ ವತಿಯಿಂದ ಹಮ್ಮಿಕೊಂಡಿದ್ದ ಪೌರ ಕಾರ್ಮಿಕರ ದಿನಾಚರಣೆಯಲ್ಲಿ ಕಾರ್ಮಿಕರ ಜೊತೆಗೆ ಸಿನಿಮಾ ಹಾಡಿಗೆ ಹೆಜ್ಜೆ ಹಾಕಿದರು. ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪ ಹಾಡಿಗೆ ಹೆಜ್ಜೆ ಹಾಕಿ ಕುಣಿದು ಕುಪ್ಪಳಿಸಿದರು.
ಶಾಸಕರ ಜೊತೆಗೆ ಪುರಸಭೆ ಮುಖ್ಯಾಧಿಕಾರಿ ಸೇರಿದಂತೆ ಇತರೆ ಅಧಿಕಾರಿಗಳು ಸಹ ಹೆಜ್ಜೆ ಹಾಕಿದ್ದರು. ಸಾಂಪ್ರದಾಯಿಕ ಉಡುಗೆ ಹಾಕಿಕೊಂಡು ಬಂದಿದ್ದ ಶಾಸಕರು ಕಣ್ಣಿಗೆ ಕೂಲಿಂಗ್ ಗ್ಲಾಸ್ ಧರಿಸಿ ನೃತ್ಯ ಮಾಡಿದರು.