ಜಿಲ್ಲೆ

ಮತ ಹಾಕಿಸಿಕೊಂಡ ಮುಖಂಡರ ಕೊರಳಪಟ್ಟಿ ಹಿಡಿದು ಕೇಳಿ ಶಾಸಕ ಬಾಲಕೃಷ್ಣ ಹೀಗೆಂದಿದ್ದು ಏಕೆ?...

ಮಾಗಡಿ : ತಾಲೂಕಿನ ಅನಧಿಕೃತ ರೆಜಾರ್ಟ್ ಬಗ್ಗೆ ದೂರು ನೀಡಿದರೆ ತನಿಖೆ ಮಾಡಿ ರದ್ದು ಗೊಳಿಸುವುದಾಗಿ ಶಾಸಕ ಎಚ್.ಸಿ.ಬಾಲಕೃಷ್ಣ ತಿಳಿಸಿದರು.

ತಾಲೂಕಿನ ನಾಯ್ಕನಪಾಳ್ಯದ ಮುತ್ತುರಾಯಸ್ವಾ"ುದೇವಾಲಯದಆವರಣದಲ್ಲಿ ಬುಧವಾರ ಸಮುದಾಯ ಭವನಕ್ಕೆಗುದ್ದಲಿಪೂಜೆ ನೆರವೇರಿಸಿ ಮಾತನಾಡಿ, ತಾಲೂಕಿನಯಾವ ಸ್ಥಳಗಳಲ್ಲಿ ಅನಧಿಕೃತವಾಗಿ ರೆಜಾರ್ಟ್‌ಗಳು ನಡೆಯುತ್ತಿದೆ ಎಂಬ ಮಾಹಿತಿ ಲಿಖಿತ ಮೂಲಕ ನನಗೆ ತಿಳಿಸಿದರೆ ಸಂಬಂಧ ಪಟ್ಟವರಿಂದ ತನಿಖೆ ನಡೆಸಿ ಅನದಿಕೃತ ರೆಜಾರ್ಟ್‌ಗಳನ್ನು ಮುಚ್ಚಿಸುವುದಾಗಿ ತಿಳಿಸಿದರು.

70 ಲಕ್ಷರೂ ವೆಚ್ಚದಲ್ಲಿ ಸುಂದರವಾರ ಸಮುದಾಯ ಭವನ ನಿರ್"ುಸಿ ಈ ಭಾಗದಜನರು ಶುಭ, ಸಮಾರಂಭ ನಡೆಸಲು ಅವಕಾಶ ಕಲ್ಪಿಸಲಾಗುವುದು. 2 ಕೋಟಿರೂ ವೆಚ್ಚದಲ್ಲಿ ದಳವಾು ಕೆರೆಯನ್ನು ಸಂಪೂರ್ಣವಾಗಿಅಭಿವೃದ್ದಿ ಪಡಿಸಿ ಪ್ರವಾಸಿ ತಾಣವನ್ನಾಗಿ ಮಾಡಿ ಪ್ರವಾಸಿಗರು ಹೆಚ್ಚಿನ ರೀತಿಯಲ್ಲಿ ಕಾಲ ಕಳೆಯಲು ಎಲ್ಲರೀತಿ ಸಮಗ್ರ ಅಭಿವೃದ್ದಿ ಪಡಿಸಲಾಗುವುದು.

ಸಾವನದುರ್ಗ ಅಭಿವೃದ್ದಿಗೆ ಒತ್ತು ನೀಡಲಾಗಿದೆ, ಮಂಚನಬೆಲೆ- ವೀರೆಗೌಡನದೊಡ್ಡಿರಸ್ತೆ ಅಭಿವೃದ್ದಿಗೆ 8 ಕೋಟಿ ರೂ ಮಂಜೂರಾಗಿದೆ. ಈ ರಸ್ತೆಯಿಂದ ದಬ್ಬಗುಳಿ ಗ್ರಾಮಕ್ಕೆ ಲಿಂಕ್‌ ರಸ್ತೆ ನಿರ್ಮಿಸಲಾಗುವುದು ಎಂದರು.

ಹೇಮಾವತಿ ಎಕ್ಸ್‌ಪ್ರೆಸ್‌ ಕೆನಾಲ್ ವಿಚಾರವಾಗಿ ಮಾದ್ಯಮಗಳ ಪಾತ್ರ ಹೆಚ್ಚಿದೆ, ಭಾವನಾತ್ಮಕವಾಗಿ ಜನರಿಂದ ಮತಹಾಕಿಸಿಕೊಂಡು ಗೆದ್ದ ಸಂಸದರನ್ನು ಪ್ರಶ್ನಿಸದೆ ನಮ್ಮನ್ನು ಪ್ರಶ್ನಿಸಿದರೆ ಹೇಗೆ? ಈ ಕಾಮಗಾರಿಗೆ ನಮ್ಮ ಪಕ್ಷದಯಾವ ನಾಯಕರು ವಿರೋಧಿಸುತ್ತಿಲ್ಲ ಜೆಡಿಎಸ್- ಬಿಜೆಪಿ ನಾಯಕರು ವಿರೋಧಿಸುತ್ತಿದ್ದಾರೆ ಎನ್‌ಡಿಎ ಅಭ್ಯರ್ಥಿಗೆ ಈ ಭಾಗದ 29 ಸಾವಿರ ಬಹುಮತ ನೀಡಿದ್ದಾರೆ. ಮತ ಹಾಕಿಸಿಕೊಂಡ ಲೀಡರ್‌ಗಳನ್ನು, ಮುಖಂಡರ ಕೊರಳಪಟ್ಟಿ ಹಿಡಿದರೆ ಎಕ್ಸ್‌ಪ್ರೆಸ್‌ ಕೆನಾಲ್‌ ಕಾಮಗಾರಿ ನಡೆಯುತ್ತದೆ ಎಂದು ಸವಾಲು ಹಾಕಿದರು.