ಮಾಗಡಿ: ಸಿಪಿ. ಯೋಗೇಶ್ವರ್ ಬುರುಡೆ ರಾಜ, ಅವರ ರಾಜಕೀಯ ಜೀವನವೇ ಬುರುಡೆ ಬಿಟ್ಟಿಕೊಂಡು ತಿರುಗಾಡಿದ್ದು ಅವರು ಎಲ್ಲಿ ಸಕ್ಸ್‌ಸ್ ಹಾಗಿದ್ದಾರೆ, ಕ್ಯಾಸೆಟ್ ಇಟ್ಟುಕೊಂಡು ಹೈಕಮಾಂಡ್ ಬಳಿ ಸುಳಿದಾಡಿದಂತೆ ಅಲ್ಲ ರಾಜಕೀಯಮಾಡುವುದು, ಈ ಭಾರಿ ಸ್ಪರ್ದೆ ಮಾಡಲಿ ಪರದೆ ಮೇಲೆ ತೋರಿಸುತ್ತೇವೆ ಫೀಲ್ಡ್‌ಗೆ ಬರಲಿ ಎಂದು ಶಾಸಕ ಎಚ್.ಸಿ.ಬಾಲಕೃಷ್ಣ ಸಿಪಿ.ಯೋಗೇಶ್ವರ್ ಗೆ ಸವಾಲು ಹಾಕಿದರು.
ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವರನ್ನಾಗಿ ಮಾಡಿದ ಬಿಎಸ್.ಯಡಿಯೂರಪ್ಪ ಅವರನ್ನೇ ಕೆಳಗಿಳಿಸಿದ ಸಿಪಿ.ಯೋಗೇಶ್ವರ್, ತಮ್ಮನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದ ಯೋಗೇಶ್ವರ್ ಅವರೊಂದಿಗೆ ಮೈತ್ರಿ ಮಾಡಿಕೊಳ್ಳಲು ಹೊರಟಿರುವ ಎಚ್.ಡಿ.ಕುಮಾರಸ್ವಾಮಿ ಅವರಿಗೆ ನಾಚಿಕೆಯಾಗಬೇಕು.
ನಮ್ಮಂತವರಾಗಿದ್ದಾರೆ ಜೀವನ ಪೂರ್ಣ ಅವರ ನೆರಳ ಬಳಿಯೂ ಸುಳಿಯುತ್ತಿರಲಿಲ್ಲ. ಇವರು ರಾಜಕೀಯಕ್ಕಾಗಿ ಏನು ಬೇಕಾದರು ಮಾಡುತ್ತಾರೆ, ಇದು ಅಸಹ್ಹಯ ಹುಟ್ಟಿಸುತ್ತದೆ. ಇದರಿಂದ ನಮ್ಮ ಕಾಂಗ್ರೆಸ್‌ನ ಭಯ ಎಷ್ಟಿದೆ ಎಂದು ಗೊತ್ತಾಗಿದೆ.
ಇವರು ಒಂದಾಗುತ್ತಿರುವುದು ನಮ್ಮನ್ನು ಮುಗಿಸಲೇ ಹೊರತು, ರಾಜ್ಯಕ್ಕೆ, ಜಿಲ್ಲೆಗೆ ಒಳ್ಳೆಯದ್ದು ಮಾಡಲು ಅಲ್ಲ, ಇವರ ಆಟ ಹೆಚ್ಚುದಿನ ನಡೆಯುವುದಿಲ್ಲ ಎಂದು ಟೀಕಾಪ್ರಹಾರ ನಡೆಸಿದರು.
ಜಿಲ್ಲೆಯ ಅಭಿವೃದ್ಧಿಗೆ ಸಿ.ಪಿ.ಯೋಗೇಶ್ವರ್ ಕಾಣಿಕೆ ಏನಿದೇ, ಸಂಸದರ ಕಾಣಿಕೆ ಏನಿದೆ ಎನ್ನುವುದು ಈ ಭಾರಿಯ ಚುನಾವಣೆಯಲ್ಲಿ ಸ್ಪರ್ದೆಮಾಡಿದರೆ ಬಯಲಿಗೆ ಬರಲಿದೆ. ಅದನ್ನು ನಾನೂ ತೋರಿಸುತ್ತೇನೆ. ಜನರೂ ತೋರಿಸುತ್ತಾರೆ ಎಂದು ಏಕವಚನದಲ್ಲೆ ಶಾಸಕ ಎಚ್.ಸಿ.ಬಾಲಕೃಷ್ಣ ವಾಗ್ದಾಳಿ ನಡೆಸಿದರು.
ಈ ಭಾರಿಯ ಚನ್ನಪಟ್ಟಣ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ 3 ನೇ ಸ್ಥಾನದಲ್ಲಿದ್ದು ಜೆಡಿಎಸ್- ಬಿಜೆಪಿ ಮೈತ್ರಿುಂದ ಮೊದಲನೇ ಸ್ಥಾನಕ್ಕೆ ಬರುತ್ತೇವೆ, ನಮ್ಮ ಸರ್ಕಾರ ಇದ್ದು ಯಾವ ಬೂತ್‌ನಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚು ಮತ ಹಾಕುತ್ತಾರೆ ಅಂಥಹ ಗ್ರಾಮವನ್ನು ಹೆಚ್ಚು ಅಭಿವೃದ್ದಿಮಾಡುತ್ತೇವೆ ಮತ ಹಾಕದ ಬೂತ್ ಬಗ್ಗೆ ಆಲೋಚನೆ ಮಾಡುತ್ತೇವೆ ಎಂದರು.