ಜಿಲ್ಲೆ

ಕಾಮಗಾರಿ ವಿಳಂಬವಾದರೆ ಅಧಿಕಾರಿಗಳೇ ಹೊಣೆ,   ಪ್ರಗತಿ ಪರಿಶೀಲನೆಯಲ್ಲಿ ಶಾಸಕ ಅಬ್ಬಯ್ಯ ಎಚ್ಚರಿಕೆ

Dharwada - Basavaraj Idli

ಹುಬ್ಬಳ್ಳಿ: ನಗರದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಸಮರೋಪಾದಿಯಲ್ಲಿ ಕೈಗೊಂಡು ನಿಗದಿತ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ಸ್ಲಮ್ ಬೋರ್ಡ್ ಅಧ್ಯ, ಶಾಸಕ ಪ್ರಸಾದ ಅಬ್ಬಯ್ಯ ಸೂಚಿಸಿದರು.

ನಗರದ ತಮ್ಮ ಗಹ ಕಚೇರಿಯಲ್ಲಿ ಗುರುವಾರ ಪೂರ್ವ ಕ್ಷೇತ್ರದಲ್ಲಿ ಕೈಗೊಂಡಿರುವ ರಸ್ತೆ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನೆ ಸಭೆಯಲ್ಲಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಹಳೇಹುಬ್ಬಳ್ಳಿ ಬಾಣತಿ ಕಟ್ಟೆಯಿಂದ ನೇಕಾರ ನಗರ ಬೈಪಾಸ್ ವರೆಗೆ 6ಕೋಟಿ ರೂ. ವೆಚ್ಚದಲ್ಲಿ ನಡೆದಿರುವ ಕಾಮಗಾರಿ ಕುರಿತು ಪ್ರಸ್ತಾಪಿಸಿದ ಶಾಸಕರು, ಗುಣಮಟ್ಟದಲ್ಲಿ ಯಾವುದೇ ರಾಜೀ ಮಾಡಿಕೊಳ್ಳದೇ ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಬೇಕು. ಅಲ್ಲಿನ ವಿದ್ಯುತ್ ಟ್ರಾನ್ಸಾರ್ಮರ್, ಸಾರ್ವಜನಿಕ ಶೌಚಗೃಹ ಸ್ಥಳಾಂತರ ಕಾರ್ಯವನ್ನು ಕೂಡಲೇ ಮಾಡಬೇಕೆಂದು ಸೂಚಿಸಿದರು.

ಹೆಸ್ಕಾಂ, ಲೋಕೋಪಯೋಗಿ ಇಲಾಖೆ ಮತ್ತು ಪಾಲಿಕೆ ಅಧಿಕಾರಿಗಳು ಸಮನ್ವಯ ಸಾಧಿಸಿಕೊಂಡು ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸಬೇಕು. ಕೆಲ ಇಲಾಖೆಗಳ ನಿರ್ಲಕ್ಷ$್ಯ ಧೋರಣೆ ಕುರಿತು ದೂರು ಕೇಳಿಬರುತ್ತಿದ್ದು, ಒಂದು ವೇಳೆ ಉದ್ದೇಶಪೂರ್ವಕ ವಿಳಂಬ ಮಾಡುತ್ತಿರುವುದು ಕಂಡುಬಂದರೆ ಅಂಥವರ ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ಎಲ್ ಆಂಡ್ ಟಿ ನೀರು ಸಂಪರ್ಕ ಕಾಮಗಾರಿ ಕುರಿತು ಪ್ರಸಂಶೆ ವ್ಯಕ್ತಪಡಿಸಿದ ಶಾಸಕರು, ಈ ಭಾಗದಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸಿ ಅಭಿವದ್ಧಿ ಕಾರ್ಯಗಳಿಗೆ ಸ್ಪಂದಿಸಿದಕ್ಕೆ ಅಭಿನಂದನೆ ಸಲ್ಲಿಸಿದರು.

ಲೋಕೋಪಯೋಗಿ ಕಾರ್ಯನಿರ್ವಾಹಕ ಇಂಜಿನಿಯರ್ ವಿಜಯಕುಮಾರ್, ಹೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಸಂತೋಷ ಕುಂದೂರ, ಎಲ್ ಆಂಡ್ ಟಿಯ ಅಭಿಜಿತ್ ದಾಸ್, ಅರಣ್ಯ ಇಲಾಖೆಯ ಆರ್.ಎಸ್. ಉಪ್ಪಾರ, ವಲಯ ಆಯುಕ್ತ ಎಂ.ಬಿ. ಸಬರದ, ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.