ಜಿಲ್ಲೆ

ಸಭಾಭವನ ನಿರ್ಮಾಣಕ್ಕೆ ಅಗತ್ಯ ಅನುದಾನ

ಹುಬ್ಬಳ್ಳಿ : ದೇವಾಂಗ ಸಮಾಜ ಬನಶಂಕರಿ ಸೇವಾ ಟ್ರಸ್ಟ್ ದೇವಸ್ಥಾನದ ಸಭಾಭವನ ನಿರ್ಮಾಣಕ್ಕೆ ಅಗತ್ಯ ಅನುದಾನದ ನೀಡುವುದಾಗಿ ಶಾಸಕ ಪ್ರಸಾದ ಅಬ್ಬಯ್ಯ ಭರವಸೆ ನೀಡಿದ್ದಾರೆ.

ನಗರದಲ್ಲಿ ಭಾನುವಾರ ಆಯೋಜಿಸಿದ್ದ ದೇವಾಂಗ ಸಮಾಜ ಬನಶಂಕರಿ ಸೇವಾ ಟ್ರಸ್ಟ್​ನ 30ನೇ ಮಹಾಸಭೆ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಶಾಸಕ ಅಬ್ಬಯ್ಯ, ಸಮಾಜದ ಮಕ್ಕಳು ಉನ್ನತ ಶಿಕ್ಷಣ ಪಡೆಯಬೇಕು ಎಂದು ಸಲಹೆ ನೀಡಿದರು.

ಸನ್ಮಾನ ಸ್ವೀಕರಿಸಿದ ಮಹಾಪೌರರಾದ ವೀಣಾ ಬರದ್ವಾಡ ಮಾತನಾಡಿದರು. ಮಾಜಿ ಮಹಾಪೌರ ಡಾ. ಪಾಂಡುರಂಗ ಪಾಟೀಲ, ವೆಂಕಟರಮನ ಚಿಟ್ಟಾ, ಕೆ.ಜಿ. ಬ್ಯಾಕೋಡಿ, ಮಂಜುನಾಥ ಚಿಂತಗಿಂಜಲ, ಶಾಂತಾ ಹಿರೇಮಠ, ಶಿವಗಂಗಾ ಮಾನಶೆಟ್ಟರ ಅತಿಥಿಗಳಾಗಿದ್ದರು. ನಾಗೇಶ ಬಾಪ್ರಿ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

ಸಂಕಣ್ಣ ಹೊನ್ನಳ್ಳಿ, ಶಿವು ಕೊಳದೂರ, ಶ್ರೀರಾಮ ಕುದರಿಮೋತಿ, ರಾಮಚಂದ್ರ ಕಂಗೋರಿ, ಜಗದೀಶ ಸೂಳಿಕೇರಿ, ಹರೀಶ ಹೊಸಮನಿಗೌಡರ, ಮಂಗಳಾ ಮಂಗಳೂರು, ವಿನಾಯಕ ಕಡಗಲ ಹಾಗೂ ಇತರರು ಉಪಸ್ಥಿತರಿದ್ದರು.