ಜಿಲ್ಲೆ

ರತನ್ ಟಾಟಾ ನಿಧನಕ್ಕೆ ಅಬ್ಬಯ್ಯ ಸಂತಾಪ

ಹುಬ್ಬಳ್ಳಿ: ದೇಶದ ಹೆಮ್ಮೆಯ ಉದ್ಯಮಿ, ಪದ್ಮ ವಿಭೂಷಣ, ಟಾಟಾ ಸಮೂಹದ ಮುಖ್ಯಸ್ಥರಾದ ರತನ್ ಟಾಟಾ ಅವರ ನಿಧನದ ಸುದ್ದಿ ದುಃಖವನ್ನುಂಟುಮಾಡಿದೆ ಎಂದು ಶಾಸಕ ಪ್ರಸಾದ ಅಬ್ಬಯ್ಯ ಸಂತಾಪ ಸೂಚಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಟಾಟಾ ಕಂಪನಿಯ ವಾಹನಗಳ ಮೂಲಕ ತಮ್ಮದೊಂದು ಅಳಿಸಲಾಗದ ಹೆಜ್ಜೆ ಗುರುತುಗಳನ್ನು ಮೂಡಿಸಿದ ಹಿರಿಯ ಜೀವ ರತನ್ ಟಾಟಾ ದೇಶಕ್ಕಾಗಿ ಅಪಾರ ಸೇವೆ ಸಲ್ಲಿಸಿದ್ದಾರೆ ಎಂದು ಕಂಬನಿ ಮಿಡಿದಿದ್ದಾರೆ.