ಅರಕಲಗೂಡು: ತಾಲೂಕಿನ ಕಡುವಿನ ಹೊಸಹಳ್ಳಿ ಮಾರ್ಗವಾಗಿ ರಾಮನಾಥಪುರ ಮತ್ತು ಕುಶಾಲನಗರ ನಡುವೆ ಕೆಎಸ್‌ಆರ್‌ಟಿಸಿ ಬಸ್ ಸಂಚಾರಕ್ಕೆ ಶಾಸಕ ಎ.ಮಂಜು ಶನಿವಾರ ಚಾಲನೆ ನೀಡಿದರು.
ತಾಲೂಕಿನ ಕಡುವಿನಹೊಸಹಳ್ಳಿಯ ಗ್ರಾಮ ಪಂಚಾಯಿತಿ ಕಚೇರಿ ಬಳಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬಸ್‌ಗೆ ಹಸಿರು ನಿಶಾನೆ ತೋರಿ ಮಾತನಾಡಿ, ಕಡುವಿನಹೊಸಹಳ್ಳಿಯ ಕಾವೇರಿ ನದಿಗೆ ಸೇತುವೆ ನಿರ್ಮಾಣವಾಗಿ 25 ವರ್ಷವಾಗಿತ್ತು. ಆದರೆ ಕಡುವಿನಹೊಸಹಳ್ಳಿ ಹಾಗೂ ಬಸವನಹಳ್ಳಿ ಮತ್ತು ಕಣಗಾಲು ಮಾರ್ಗದಲ್ಲಿ ಬಸ್ ಸಂಚಾರ ಆಗಬೇಕು ಎಂಬ ಬೇಡಿಕೆ ಈಡೇರಿರಲಿಲ್ಲ. ಈ ಭಾಗದ ಜನರ ಎರಡೂವರೇ ದಶಕದ ಕನಸು ಈಗ ನನಸಾಗಿದೆ. ಬಸ್ ಸಂಚಾರದಿಂದ ಶಾಲಾ-ಕಾಲೇಜು ವಿದ್ಯಾರ್ಥಿಗಳು, ನಿತ್ಯ ಕೆಲಸಕ್ಕೆ ತೆರಳುವ ಜನರಿಗೆ ಅನುಕೂಲವಾಗಲಿದೆ ಎಂದರು.