ಜಿಲ್ಲೆ

ಸಮಾಜ ಸೇವೆಗೆ ಸದಾ ಬದ್ಧ

ಎ. ಆರ್. ರಘುರಾಮ

ಕೆ.ಎಂ.ದೊಡ್ಡಿ : ಮದ್ದೂರು ಕ್ಷೇತ್ರದ ಶಾಸಕನಾದರೂ ಸಮಾಜ ಸೇವೆಯನ್ನು ನಿರಂತರವಾಗಿ ಮುಂದುವರಿಸಿಕೊಂಡು ಹೋಗುವೆ ಎಂದು ಶಾಸಕ ಕದಲೂರು ಉದಯ್ ಹೇಳಿದರು. ಸಮೀಪದ ದೇವೇಗೌಡನದೊಡ್ಡಿ-ಮೆಣಸಗೆರೆ ಗ್ರಾಮದಲ್ಲಿ ಕದಲೂರು ಉದಯ್ ಚಾರಿಟಬಲ್ ಟ್ರಸ್ಟಿನಿಂದ ಏಷ್ಯನ್ ಗೇಮ್‌ಗೆ ಆಯ್ಕೆಯಾಗಿರುವ ಡಿ.ಎಂ.ಯುಕ್ತಾ, ಕಿಡ್ನಿ ವೈಫಲ್ಯದಿಂದ ಬಳಲುುತ್ತಿರುವ ಯೋಗೇಶ್‌ಗೆ ಆರ್ಥಿಕ ನೆರವು ಮತ್ತು ಮಂಟೇಸ್ವಾಮಿ ಗದ್ದುಗೆ ನಿರ್ಮಾಣಕ್ಕೆ ಧನ ಸಹಾಯ ನೀಡಿ ಮಾತನಾಡಿದರು.
ನಮ್ಮ ಟ್ರಸ್ಟ್ ಕಳೆದ ಮೂರು ವರ್ಷಗಳಿಂದ ನಿರ್ಗತಿಕರಿಗೆ, ಸಮಸ್ಯೆಯಿಂದ ನೊಂದವರಿಗೆ ಸಹಾಯ ಧನವನ್ನು ನೀಡುತ್ತಿದೆ. ಜನರ ಆರ್ಶೀವಾದದಿಂದ ನಾನು ಶಾಸಕನಾದ ಮೇಲೂ ಸಮಾಜ ಸೇವೆಗೆ ಸದಾ ಬದ್ಧನಾಗಿದ್ದೇನೆ ಎಂದರು.
ಕಳೆದ ಮೂರ್ನಾಲ್ಕು ವರ್ಷಗಳಿಂದ ಟ್ರಸ್ಟ್ ವತಿಯಿಂದ ಮದ್ದೂರು ಕ್ಷೇತ್ರದಲ್ಲಿ ನಿಧನರಾದವರ ಕುಟುಂಬಕ್ಕೆ, ಅಂಗವಿಕಲರಿಗೆ ಧನ ಸಹಾಯ ನೀಡಲಾಗುತ್ತಿದೆ. ಈ ಸೇವೆ ನಿರಂತರವಾಗಿ ಮುಂದುವರಿಯಲಿದೆ ಎಂದರು.
ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ತಾಲೂಕು ಕಚೇರಿಯಲ್ಲೆ ಶಾಸಕರ ಕಚೇರಿ ತೆರೆಯಲಾಗಿದೆ. ಇದರೊಂದಿಗೆ ಕೆ.ಎಂ.ದೊಡ್ಡಿ ಮತ್ತು ಕದಲೂರಿನ ನನ್ನ ನಿವಾಸದಲ್ಲಿರುವ ಕಚೇರಿಯಲ್ಲಿ ನನ್ನನ್ನು ಸಂಪರ್ಕಿಸಬಹುದು. ಜನ ಸೇವೆಗೆ ನಾನು ಸದಾ ಸಿದ್ಧ ಎಂದು ಭರವಸೆ ನೀಡಿದರು.
ಜಿ.ಪಂ.ಮಾಜಿ ಸದಸ್ಯ ಎ.ಎಸ್.ರಾಜೀವ್, ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷ ಎಂ.ಡಿ.ಪ್ರಕಾಶ್, ಗ್ರಾ.ಪಂ.ಮಾಜಿ ಸದಸ್ಯರಾದ ಎಂ.ಆರ್.ಮಧುಸೂದನ್, ರವೀಂದ್ರ, ಮುಖಂಡರಾದ ನಾಗರಾಜು, ತಮ್ಮಣ್ಣ, ಪ್ರದೀಪ್, ಮನೋಹರ್, ಆನಂದ್, ಸಿದ್ದರಾಜು, ಮಹದೇವಯ್ಯ ಇತರರು ಇದ್ದರು.