ಜಿಲ್ಲೆ

ಮೀನು ಸಾಕಣೆ ಜಾಗೃತಿ ಅವಶ್ಯ -  ಶಾಸಕ ಅಶೋಕ್ ಕುಮಾರ್ ರೈ ಸಲಹೆ

Mangaluru - Nishantha Narayana

ಪುತ್ತೂರು: ಮೀನು ಸಾಕಣೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕಾಗಿದೆ. ಬೇರೆ ಕೃಷಿ ಜತೆಗೆ ಮೀನು ಸಾಕಣೆಗೆ ಮುಂದಾಗಬೇಕು ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.

ತಾಪಂ ಸಭಾಂಗಣದಲ್ಲಿ ಮೀನುಗಾರಿಕೆ ಇಲಾಖೆಯಿಂದ ಒಳನಾಡು ಜಲಕೃಷಿ ಪ್ರಾತ್ಯಕ್ಷತೆಗಾಗಿ ಉಚಿತ ಮೀನು ಮರಿ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಪರಿಶಿಷ್ಟ ಜಾತಿಯ ಮೀನುಗಾರರಿಗೆ ಸವಲತ್ತು ವಿತರಣೆ ಮಾಡಲಾಯಿತು. ೩೫ ಮಂದಿ ಮೀನು ಕೃಷಿಕರಿಗೆ ೫೦೦ ಮೀನು ಮರಿ ವಿತರಣೆ ಮಾಡಲಾಯಿತು. ತಾಪಂ ಇಒ ನವೀನ್ ಕುಮಾರ್ ಭಂಡಾರಿ ಉಪಸ್ಥಿತರಿದ್ದರು. ಮೀನುಗಾರಿಕೆ ಸಹಕಾರ ನಿರ್ದೇಶಕಿ ಮಂಜುಳಾಶ್ರೀ ಕಾರ್ಯಕ್ರಮ ನಿರೂಪಿಸಿದರು.

ಕೃಷಿಕ ತನ್ನ ಕಸುಬನ್ನು ಎದೆತಟ್ಟಿ ಹೇಳಬೇಕು. ಗ್ರಾಮೀಣ ಸೊಗಡನ್ನು ಉಳಿಸಿ ಬೆಳೆಸುವ ಕಾರ್ಯವಾಗಬೇಕು. ತಾಲೂಕಿನಲ್ಲಿ ಬೇಕಾದಷ್ಟು ಕೆರೆಗಳಿದ್ದು, ಅದರಲ್ಲಿ ತಾಪಂ ಅನುದಾನದ ಮೂಲಕ ೫೦೦ ಮಂದಿಗೆ ಉಚಿತವಾಗಿ ಮರಿ ನೀಡುವ ಕಾರ್ಯ ಮಾಡಲಾಗುವುದು.

| ಅಶೋಕ್ ಕುಮಾರ್ ರೈ ಶಾಸಕ