ಜಿಲ್ಲೆ

ಕಡತಕ್ಕೆ ಸಹಿ ಹಾಕಲು ಹಣಪಡೆದಿಲ್ಲವೆಂದು ಆಣೆ ಮಾಡಲಿ : ಎಚ್‌ಡಿಕೆಗೆ ಶಾಸಕ ಎಚ್.ಸಿ.ಬಾಲಕೃಷ್ಣ ಸವಾಲು

ರೇಷ್ಮೆ ನಗರ ಡೆಸ್ಕ್

ಮಾಗಡಿ: ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಹಣ ಪಡೆದು ಕಡತಕ್ಕೆ ಸಹಿ ಹಾಕಿರುವ ಬಗ್ಗೆ ದಾಖಲೆ ನೀಡಿದರೆ ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡುತ್ತಾರಾ ಎಂದು ಶಾಸಕ ಎಚ್.ಸಿ.ಬಾಲಕೃಷ್ಣ ಪ್ರಶ್ನಿಸಿದರು.

ಪಟ್ಟಣದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಯಾವುದೇ ಕಡತಕ್ಕೂ ಹಣ ಪಡೆಯದೆ ಸಹಿ ಹಾಕಿದ್ದೇನೆ ಎಂದು ಎಚ್.ಡಿ.ಕುಮಾರಸ್ವಾಮಿ ಆಗಲಿ, ಅವರ ಪರವಾಗಿ ಯಾರೇ ರಾಮನಗರ ಚಾಮುಂಡೇಶ್ವರಿ ಮುಂದೆ ಬಂದು ಪ್ರಮಾಣ ಮಾಡಲಿ. ಅವರು ಹಣಪಡೆದು ಕಡಿತಕ್ಕೆ ಸಹಿ ಹಾಕಿದ್ದಾರೆ ಎಂದು ನಾನು ಕರ್ಪೂರ ಹಚ್ಚಿ ಪ್ರಮಾಣ ಮಾಡುತ್ತೇನೆ. ಅವರು ಹಣ ಪಡೆದಿರುವ ಬಗ್ಗೆ ಸಾಕ್ಷ್ಯಿಸಮೇತ ಬಹಿರಂಗಗೊಳಿಸುತ್ತೇನೆ ಎಂದರು.

ಚನ್ನಪಟ್ಟಣದ ಉಪಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಶಿವಕುಮಾರ್. ಸಚಿವ ಚಲುವರಾಯಸ್ವಾಮಿಗೆ ಉಸ್ತುವಾರಿ ವಹಿಸಿದ್ದಾರೆ. ನಮಗೂ ಒಂದು ಹೋಬಳಿಯ ಉಸ್ತುವಾರಿ ಕೊಟ್ಟಿದ್ದಾರೆ ಎಂದರು.

ಪುರಸಭಾ ಸ್ಥಾಯಿಸಮಿತಿ ಅಧ್ಯಕ್ಷ ಶಿವಕುಮಾರ್, ಕೆಡಿಪಿ ಸದಸ್ಯ ಮುನೀರ್ ಆಹಮದ್, ತಟವಾಳು ಪ್ರಕಾಶ್, ಮರೂರು ಬಾಬಣ್ಣ, ಪ್ರವೀಣ, ದಲಿತ ಮುಖಂಡ ರಾಜು, ಪ್ರವೀಣ ಇತರರು ಇದ್ದರು.