ಎಂ.ಕೆ.ಹುಬ್ಬಳ್ಳಿ: ಚನ್ನಮ್ಮನ ಕಿತ್ತೂರಿನ ತಾಲೂಕು ಆಡಳಿತ ಸೌಧದಲ್ಲಿ ಶ್ರೀ ಮಲಪ್ರಭಾ ಸಹಕಾರ ಸಕ್ಕರೆ ಕಾರ್ಖಾನೆ ಚುನಾವಣಾ-ಧಿಕಾರಿ ಪ್ರಭಾವತಿ ಕೀರಪುರ ಅವರಿಗೆ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಶನಿವಾರ ನಾಮಪತ್ರ ಸಲ್ಲಿಸಿದರು.
ಬಳಿಕ ಮಾತನಾಡಿದ ಅವರು, ಒಂದು ಕಾಲದಲ್ಲಿ ಬಂಗಾರದ ಹೊಗೆ ಆಡುತ್ತಿದ್ದ ಎಂ.ಕೆ.ಹುಬ್ಬಳ್ಳಿಯ ಮಲಪ್ರಭಾ ಸಹಕಾರ ಸಕ್ಕರೆ ಕಾರ್ಖಾನೆ ಇಂದು ಸಾಲದ ಸುಳಿಯಲ್ಲಿ ಸಿಲುಕಿದ್ದು, ಕಾರ್ಖಾನೆಗೆ ಗತವೈಭವ ಮರುಕಳಿಸಬೇಕಿದೆ. ಅದಕ್ಕಾಗಿ ಸಚಿವೆ ಲಕ್ಷಿ$್ಮ ಹೆಬ್ಬಾಳ್ಕರ್, ಶಾಸಕರಾದ ಬಾಬಾಸಾಹೇಬ ಪಾಟೀಲ, ವಿಠ್ಠಲ ಹಲಗೇಕರ ಮುಂದಾಳತ್ವ, ಸಮಾನ ಮನಸ್ಕರ ಮಾರ್ಗದರ್ಶನದಲ್ಲಿ ಮಲಪ್ರಭಾ ಸಹಕಾರ ಕಾರ್ಖಾನೆ ಪುನಶ್ಚೇತನ ರೈತರ ಪೆನಲ್ ರಚಿಸಿದೆ. ಪೆನಲ್ನ 15 ಅಭ್ಯರ್ಥಿಗಳನ್ನು ಎಲ್ಲರೂ ಬೆಂಬಲಿಸಬೇಕು ಎಂದರು.
ಶಾಸಕ ಬಾಬಾಸಾಹೇಬ ಪಾಟೀಲ ಮಾತನಾಡಿ, ಹಿರಿಯರು ಒಗ್ಗೂಡಿ ರೈತರ ಕಲ್ಪವೃಕ್ಷ ಮಲಪ್ರಭಾ ಸಹಕಾರ ಸಕ್ಕರೆ ಕಾರ್ಖಾನೆ ಕಟ್ಟಿದ್ದಾರೆ. ಹೀಗಾಗಿ, ಎಲ್ಲರೂ ರಾಜಕೀಯ ಬದಿಗಿಟ್ಟು ಕಾರ್ಖಾನೆ ಉಳಿಸಿ&ಬೆಳೆಸಲು ನಿರ್ಧರಿಸಿದ್ದೇವೆ. ಚನ್ನರಾಜ ಹಟ್ಟಿಹೊಳಿ ಸೇರಿ ಎಲ್ಲ ಅಭ್ಯರ್ಥಿಗಳಿಗೆ ಗೆಲುವಿಗೆ ಶ್ರಮಿಸೋಣ ಎಂದರು.
93 ನಾಮಪತ್ರ ಸಲ್ಲಿಕೆ: ಮಲಪ್ರಭಾ ಸಹಕಾರ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿಗೆ ಸೆ.28ರಂದು ಚುನಾವಣೆ ನಡೆಯಲಿದೆ. ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದ್ದ ಸೆ.20ರವರೆಗೆ ಒಟ್ಟು 93 ನಾಮಪತ್ರ ಸಲ್ಲಿಕೆಯಾಗಿವೆ. ಚನ್ನರಾಜ ಹಟ್ಟಿಹೊಳಿ, ಶಿವನಗೌಡ ಪಾಟೀಲ, ರಾಮನಗೌಡ ಪಾಟೀಲ, ಶಂಕರ ಕಿಲ್ಲೇದಾರ, ರು ಪಾಟೀಲ, ಶಿವಪುತ್ರಪ್ಪ ಮರಡಿ, ಸುರೇಶ ಹುಲಿಕಟ್ಟಿ, ಶ್ರೀಶೈಲ ತುರಮರಿ, ಶ್ರೀಕಾಂತ ಇಟಗಿ, ಶಂಕ್ರಪ್ಪ ಹೊಳಿ, ಕೀರಪ್ಪ ಸಕ್ರೆಣ್ಣವರ, ಲಲಿತಾ ಪಾಟೀಲ, ಸುನೀತಾ ಲಂಗೋಟಿ, ಭರಮಪ್ಪ ಶೀಗಿಹಳ್ಳಿ, ಬಾಳಪ್ಪ ಪೂಜಾರ ನಿರ್ದೇಶಕ ಸ್ಥಾನಕ್ಕೆ ಚುನಾವಣಾಧಿಕಾರಿಗೆ ನಾಮಪತ್ರ ಸಲ್ಲಿಸಿದರು.
ರೈತ ಮುಖಂಡರು ಪಾಲ್ಗೊಂಡಿದ್ದರು.