ಜಿಲ್ಲೆ

26ರಿಂದ ಮೀಯಪದವಲ್ಲಿ ಧರ್ಮನೇಮ

ಸೌಮ್ಯ ಆರ್

ಮಂಜೇಶ್ವರ: ಕೋಡಿ ಬಂಗೇರ ಕುಟುಂಬಸ್ಥರ ಮೂಲಸ್ಥಾನ ಕೋಡಿ ಮೀಯಪದವಲ್ಲಿ ಜ.26ರಿಂದ 29ರವರೆಗೆ ಕುಲಾಲ ಬಂಗೇರ ಕುಟುಂಬಸ್ಥರ ಮೂಲಸ್ಥಾನ ಕೋಡಿಯಲ್ಲಿ ಮೂಲಸ್ಥಾನ ತಂತ್ರಿವರ್ಯ ಬೋಳಂತಕೋಡಿ ರಾಮ ಭಟ್ ಮಾರ್ಗದರ್ಶನದಲ್ಲಿ, ರಕ್ತೇಶ್ವರಿ ದೈವದ ಶಿವಪ್ರಸಾದ್ ಭಟ್ ಕೋಡಿ ಉಪಸ್ಥಿತಿಯಲ್ಲಿ ಕೋಡಿ ಕುಲಾಲ ಬಂಗೇರ ಕುಟುಂಬಸ್ಥರ ಮೂಲಸ್ಥಾನದ ದೈವಗಳ ಧರ್ಮನೇಮ ನಡೆಯಲಿದೆ.

ಧರ್ಮನೇಮಕ್ಕೆ ಪೂರ್ವಭಾವಿಯಾಗಿ ಭಾನುವಾರ ಕುಟುಂಬದ ಹಿರಿಯರು, ಶಿವಪ್ರಸಾದ್ ಭಟ್ ಕೋಡಿ ಉಪಸ್ಥಿತಿಯಲ್ಲಿ ಗೊನೆ ಮುಹೂರ್ತ ನೆರವೇರಿತು. ಸಂಜೆ 4ಕ್ಕೆ ತುಳುನಾಡಿನ ಸಾಂಪ್ರದಾಯಿಕ ದೈವಗಳ ನೇಮದ ಪ್ರಯುಕ್ತ ಕೋಳಿಗುಂಟ ಶಾಸ್ತ್ರೋತ್ತವಾಗಿ ನೆರವೇರಿತು.