ಮಂಗಳೂರು: ಎಂ ಎಂ ಎಂ ಗ್ರೂಪ್ಸ್ ಬ್ಯಾನರ್‌ನಡಿ ನಿರ್ಮಾಣವಾದ ‘ಮಿಸ್ಟರ್ ಮದಿಮಯೆ’ ಜ.12ರಂದು ಕರಾವಳಿಯಾದ್ಯಂತ ಬಿಡುಗಡೆಯಾಗಲಿದೆ.
ಈ ಚಿತ್ರದಲ್ಲಿ ಮುಖ್ಯವಾಗಿ ಹೊಸ ಕಲಾವಿದರಿಗೆ ಅವಕಾಶ ನೀಡಲಾಗಿದೆ. ಪ್ರಮುಖ ಪಾತ್ರಗಳಲ್ಲಿ ಶ್ವೇತಾ ಸುವರ್ಣ, ರವಿಕಾಂತ್ ಪೂಜಾರಿ, ಪ್ರಕಾಶ್ ಪಾಂಡೇಶ್ವರ,ಪ್ರಥ್ವಿನ್ ಪೊಳಲಿ, ಸುನಿಲ್ ನೆಲ್ಲಿಗುಡ್ಡೆ ಮೊದಲಾದವರು ನಟಿಸಲಿದ್ದಾರೆ ಎಂದು ಚಿತ್ರದ ನಾಯಕ ಸಾಯಿಕೃಷ್ಣ ಕುಡ್ಲ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಮಂಗಳೂರಿನಲ್ಲಿ ರೂಪವಾಣಿ, ಬಿಗ್ ಸಿನಿಮಾಸ್, ಸಿನಿಪೊಲಿಸ್, ಪಿವಿಆರ್, ಸುರತ್ಕಲ್‌ನಲ್ಲಿ ಸಿನಿ ಗ್ಯಾಲಕ್ಸಿ, ಪಡುಬಿದಿರೆಯಲ್ಲಿ ಬಿಗ್ ಸಿನಿಮಾಸ್, ಉಡುಪಿಯಲ್ಲಿ ಕಲ್ಪನಾ, ಪುತ್ತೂರಿನಲ್ಲಿ ಭಾರತ್ ಸಿನಿಮಾಸ್, ಬೆಳ್ತಂಗಡಿಯಲ್ಲಿ ಭಾರತ್, ಸುಳ್ಯದಲ್ಲಿ ಸಂತೋಷ್ ಚಿತ್ರ ಮಂದಿರದಲ್ಲಿ ಚಿತ್ರ ತೆರೆ ಕಾಣಲಿದೆ.
ಮಿಥುನ್ ಕೆ.ಎಸ್. ನಿರ್ಮಾಪಕರಾಗಿರುವ ಈ ಚಿತ್ರಕ್ಕೆ ರಾಜೇಶ್ ಫೆರಾವೋ ಸಹ ನಿರ್ಮಾಪಕರಾಗಿ ಕೈ ಜೋಡಿಸಿದ್ದಾರೆ. ಕೆ.ಪಿ.ಮಿಲನ್ ಸಂಗೀತ ಹಾಗೂ ಪ್ರಶಾಂತ್ ಧರ್ಮಸ್ಥಳ ಅವರ ಛಾಯಾಗ್ರಹಣ ಇದೆ. ನವೀನ್ ಆರ್ಯನ್ ಮತ್ತು ವಿನೋದ್ ನೃತ್ಯ ಸಂಯೋಜಿಸಿದ್ದಾರೆ. ಕೌರವ್ ವೆಂಕಟೇಶ್ ಅವರ ಸಾಹಸ, ಸುಕೇಶ್ ಶೆಟ್ಟಿ, ಜಿ.ಎಸ್.ಗುರುಪುರ ಅವರ ಸಾಹಿತ್ಯ, ಸುಜೀತ್ ನಾಯಕ್ ಅವರ ಸಂಕಲನ ಇದೆ. ಚಿತ್ರವನ್ನು ಸಚಿನ್ ಎ.ಎಸ್. ಉಪ್ಪಿನಂಗಡಿ ಕರಾವಳಿಯಾದ್ಯಂತ ವಿತರಿಸುತ್ತಿದ್ದಾರೆ.
ವಸ್ತ್ರಾಲಂಕಾರ ಗುರುರಾಜ್ ಪದ್ಮಶಾಲಿ, ನಿಕಿತಾ ಕೋಟ್ಯಾನ್, ನಿರ್ಮಾಣ ನಿರ್ವಾಹಕ ಶ್ರೇಯಸ್ ಶೆಟ್ಟಿ, ಚಿತ್ರ ಮೇಲ್ವಿಚಾರರಾಗಿ ಹೆರಾಲ್ಡ್ ವಾಲ್ಟರ್, ಕಾರ್ಯಕಾರಿ ನಿರ್ಮಾಪಕರಾಗಿ ಸೌಮ್ಯ ಚೇತನ್ ಮತ್ತು ಸೌಜನ್ಯ ಶೆಟ್ಟಿ ಚಿತ್ರಕ್ಕೆ ಬೆನ್ನೆಲುಬಾಗಿ ನಿಂತಿದ್ದಾರೆ. ಚಿತ್ರದ ಕ್ರಿಯೇಟಿವ್ ಹೆಡ್ ಬಚ್ಚನ್ ಚೇತು ಚಿತ್ರದ ಪ್ರತಿ ಹಂತದಲ್ಲೂ ಬೆನ್ನೆಲುಬಾಗಿ ನಿಂತಿದ್ದಾರೆ ಎಂದರು.
ಚಿತ್ರದ ನಿರ್ದೇಶಕ ನವೀನ್ ಜಿ ಪೂಜಾರಿ, ನಿರ್ಮಾಪಕ ಮಿಥುನ್ ಕೆ.ಎಸ್., ಸಂಗೀತ ನಿರ್ದೇಶಕ ಕೆ.ಪಿ.ಮಿಲನ್, ನಾಯಕಿ ಶ್ವೇತಾ ಸುವರ್ಣ, ಸಚಿನ್ ಎಸ್.ಉಪ್ಪಿನಂಗಡಿ, ಪ್ರಕಾಶ್ ಪಾಂಡೇಶ್ವರ, ಹೆರಾಲ್ಡ್ ವಾಲ್ಟರ್, ಸುನಿಲ್ ನೆಲ್ಲಿಗುಡ್ಡೆ ಮೊದಲಾದವರಿದ್ದರು.