ಜಿಲ್ಲೆ

ನಾಪತ್ತೆ ಆಗಿದ್ದ ಚಾರಣಿಗ ಶವವಾಗಿ ಪತ್ತೆ

ಗಂಗಾಧರ ಬಿ ವಿ

ರಾಮನಗರ: ಚಾರಣಕ್ಕೆ ಬಂದು ನಾಪತ್ತೆ ಆಗಿದ್ದ ಉತ್ತರ ಪ್ರದೇಶದ ಮೂಲದ ಯುವಕ ಶವವಾಗಿ ಪತ್ತೆ ಆಗಿದ್ದಾನೆ.

ಮಾಗಡಿ ತಾಲೂಕಿನ ಸಾವನದುರ್ಗ ಬೆಟ್ಟಕ್ಕೆ ಸ್ನೇಹಿತನೊಂದಿಗೆ ಉತ್ತರ ಪ್ರದೇಶ ಮೂಲದ ಗಗನ್ ದೀಪ್ ಸಿಂಗ್ ಭಾನುವಾರ ನಾಪತ್ತೆ ಆಗಿದ್ದರು. ಅಂದಿನಿಂದಲೂ ಸ್ಥಳೀಯ ಪೊಲೀಸರು, ಅರಣ್ಯ ಇಲಾಖೆ ಸಿಬ್ಬಂದಿ ಅರಣ್ಯದಲ್ಲಿ ಹುಡುಕಾಟ ನಡೆಸಿದ್ದರು.

ಭಾನುವಾರದಿಂದಲೂ ನಡೆದ ಶೋಧ ಕಾರ್ಯಕ್ಕೆ ಎನ್ ಡಿಆರ್ ಎಫ್ ಸಿಬ್ಬಂದಿ ಸಾಥ್ ನೀಡಿದ್ದರು. ಪತ್ತೆಗಾಗಿ ಡ್ರೋಣ್ ಸಹ ಬಳಕೆ ಮಾಡಲಾಗಿತ್ತು. ಆದರೆ ಗುರುವಾರ ಸಾವನದುರ್ಗ ಅರಣ್ಯದ ಎಮ್ಮೆ ಮಾಳ ಪ್ರದೇಶದಲ್ಲಿ ಗಗನ್ ದೀಪ್ ಸಿಂಗ್ ಮೃತ ದೇಹ ಪತ್ತೆಯಾಗಿದೆ.

ಬೆಟ್ಟದ ಮೇಲಿಂದ ಬಿದ್ದು ಮೃತಪಟ್ಟಿರುವ ಶಂಕ ವ್ಯಕ್ತವಾಗಿದೆ. ಮೃತ ದೇಹವನ್ನು ಹೊರ ತರಲಾಗಿದೆ.